Todays Cabinet Meeting Highlights 28-10-2024
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಸಮಿತಿ ರಚನೆ, ನೂತನ ಪ್ರವಾಸೋದ್ಯಮ ನೀತಿ ಜಾರಿ ಸೇರಿದಂತೆ ವಿವಿಧ ಮಹತ್ವದ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಸರುಕು, ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ವಿವಾದಿತ ತೆರಿಗೆ ಮಿತಿಯನ್ನ ತರಲು ಅನುಕೂಲವಾಗಲಿದೆ. 40 ಕೋಟಿಗೆ ರಿಸ್ಟ್ರಿಕ್ಟ್ ಮಾಡಲು ಒಪ್ಪಿಗೆ ನೀಡಲಾಗಿದೆ. ಜಿಎಸ್ ಟಿ ಮೇಲ್ಮನವಿ ಹಕ್ಕು ಸ್ಥಾಪನೆಗೆ ಅವಕಾಶ ನೀಡಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಕ್ಕೆ ನಿರ್ಧರಿಸಲಾಗಿದೆ. 7045 ವೈದ್ಯಾಧಿಕಾರಿಗಳ ನೇಮಕ ಮುಂದುವರಿಕೆ ಒಪ್ಪಿಗೆ ನೀಡಲಾಗಿದೆ ಎಂದರು.
ಮಿಲಿಟರಿ ಸೆಂಟ್ರಲ್ ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 3.16 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 102.80 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಐಜಿ ಆಫೀಸ್ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾಲೂರು ಹೊಸಕೋಟೆ ಹೈಬ್ರಿಡ್ ರಸ್ತೆ ನಿರ್ಮಾಣ ಮಾಲು 3190 ಕೋಟಿಗಳ ವೆಚ್ಚಕ್ಕೆ ಸಂಪುಟ ಸಮ್ಮತಿ ನೀಡಲಾಗಿದೆ. ದೇವನಹಳ್ಳಿ ಏರ್ಪೋರ್ಟ್ ಗೆ ಕನೆಕ್ಟ್ ಮಾಡುವ ರಸ್ತೆ, ನ್ಯಾಷನಲ್ ಹೈವೇ ಮಾದರಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ 110 ಕಿಮೀ ದೂರದವರೆಗೆ ಹೈಬ್ರಿಡ್ ರಸ್ತೆ, ಪಿಪಿಪಿ ಮಾಡೆಲ್ ನಡಿ ಕಾರಿಡಾರ್ ನಡುವೆ ನಿರ್ಮಾಣ ಮಾಡಲಾಗುವುದು.
ಅರಣ್ಯ ವಾಸಿಗಳ ಭೂ ಸಾಗುವಳಿ ಮಂಜೂರು ಮಾಡಲು ತಲಾ ಎರಡು ಎಕರೆ ಜಮೀನು ನೀಡಿಕೆ ಮಾಡಲಾಗುವುದು. 14 ಕುಟುಂಬಗಳಿಗೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅರಣ್ಯವಾಸಿಗಳು ಎಂದರು.
33 ಮಂದಿ ವೃತ್ತಿ ಶಿಕ್ಷಕರಿಗೆ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಇವರಾಗಿದ್ದಾರೆ ಎಂದರು.
ಮುಧೋಳ ನಗರಕ್ಕೆ ಕುಡಿಯುವ ನೀರು ಪೂರೈಕೆ, ಕೃಷ್ಣಾ ನದಿಯಿಂದ ನೀರು ಪೂರೈಕೆಗೆ ಯೋಜನೆಗಾಗಿ 177.10 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಈಕ್ವಿಟಿ ಷೇರು ಹೆಚ್ಚಳ ಮಾಡಲಾಗುತ್ತಿದೆ. ಶೇ.49% ರಿಂದ 90ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. BMWML ನಲ್ಲಿನ ಸರ್ಕಾರದ ಷೇರು ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನದ ಚರ್ಚೆ ನಡೆಸಲಾಯಿತು. ದಿನಾಂಕ ನಿರ್ಣಯ ಸಿಎಂ ವ್ಯಾಪ್ತಿಗೆ ಬಿಡಲಾಗಿದೆ. ಡಿಸೆಂಬರ್ 2 ಇಲ್ಲವೇ 3ನೇ ವಾರ ಬರಲಿದೆ. ಕಾಂಗ್ರೆಸ್ ಎಐಸಿಸಿ ಅಧಿವೇಶನ ಇದೆ. ಅದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಯ ಹೊಂದಾಣಿಕೆ ಮಾಡಲಾಗುವುದು. ಸಿಎಂ ಅಂತಿಮ ನಿರ್ಣಯ ಮಾಡ್ತಾರೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here