JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, October 29, 2024

regarding grant of Special Allowance to Lecturers

  Jnyanabhandar       Tuesday, October 29, 2024
Notification for the year 2007-08 Applicability Date : 01-08-2008 onwards, regarding grant of Special Allowance to Lecturers who are on duty.

2007-08 ಸಾಲಿನ ಅಧಿಸೂಚನೆ ಅನ್ವಯ ದಿನಾಂಕ : 01-08-2008 ನಂತರ, ಕಾರ್ಯವರದಿ ಮಾಡಿಕೊಂಡಿರುವ ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆಯನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ.

ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಅಧ್ಯಕ್ಷರು, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ(ರಿ), ಬೆಂಗಳೂರು ಇವರ ದಿನಾಂಕ:10.06.2024ರ ಉಲ್ಲೇಖ(2)ರ ಪತ್ರವನ್ನು ಪರಿಶೀಲಿಸಲಾಯಿತು.

ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:4412-4428 ರಲ್ಲಿ ದಿನಾಂಕ:05.05.2021 ರ ತೀರ್ಪಿನಲ್ಲಿ ನೀಡಿದ ನಿರ್ದೇಶನ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು W.P. No:6902/2022 ರಲ್ಲಿ ದಿನಾಂಕ:20.06.2023 ರಂದು ನೀಡಿದ ತೀರ್ಪಿನಲ್ಲಿನ ಅಭಿಪ್ರಾಯದ ಬೆಳಕಿನಲ್ಲಿ, 2007-08 ರ ಶಿಕ್ಷಕರುಗಳ ನೇರ ನೇಮಕಾತಿ ಅಧಿಸೂಚನೆಯನ್ವಯ ನೇಮಕಾತಿ ಪ್ರಕ್ರಿಯೆ ಕೈಗೊಂಡು ಪಕಟಿಸಲಾದ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಶಿಕ್ಷಕರುಗಳಿಗೆ ಸೀಮಿತಗೊಂಡಂತೆ ವಿಶೇಷ ಭತ್ಯೆಯನ್ನು ಮಂಜೂರು ಮಾಡಿ, ವಿಸ್ತ್ರತವಾದ ಆದೇಶಗಳನ್ನು ಉಲ್ಲೇಖ-1 ರಲ್ಲಿ ಹೊರಡಿಸಲಾಗಿರುತ್ತದೆ. ಸದರಿ ಆದೇಶವು ಸ್ವಯಂ ವೇದ್ಯವಾಗಿದ್ದು ಸ್ಪಷ್ಟವಾಗಿರುತ್ತದೆ ಎಂದಿದ್ದಾರೆ.

ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿರ್ದೇಶನದಂತೆ ರಾಜ್ಯ ಸರ್ಕಾರವು ಹೊರಡಿಸಿದ ಈ ಮೇಲೆ ತಿಳಿಸಿರುವ ದಿನಾಂಕ:05.12.2023 ರ ಆದೇಶವನ್ನು ಪರಿಗಣಿಸಿದ ಮಾನ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:CTA 533-134/2021 ಪುಕರಣದಲ್ಲಿ ದಿನಾಂಕ:08.12.2023 ರಂದು ನೀಡಿದ ತೀರ್ಪಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನಾ ಪ್ರಕರಣವನ್ನು ಕೈಬಿಟ್ಟಿರುತ್ತದೆ ಎಂದು ತಿಳಿಸಿದ್ದಾರೆ.

ಆದುದರಿಂದ, ಈ ಮೇಲೆ ತಿಳಿಸಿದ ದಿನಾಂಕ:05.12.2023 ರ ಆದೇಶದ ಕಂಡಿಕೆ 1(i) ಮತ್ತು (ii) ರ ಅವಕಾಶಗಳ ಕಡೆಗೆ ಗಮನ ಸೆಳೆಯುತ್ತಾ ಅದರನ್ವಯ ಅರ್ಹ ಉಪನ್ಯಾಸಕರಿಗೆ ವಿಶೇಷ ಭತ್ಯೆಗಳನ್ನು ಮಂಜೂರು ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಿಳಿಸಲು ಈ ಮೂಲಕ ನಿರ್ದೇಶಿಸಲಾಗಿದೆ.



logoblog

Thanks for reading regarding grant of Special Allowance to Lecturers

Previous
« Prev Post

No comments:

Post a Comment

If You Have any Doubts, let me Comment Here