JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, September 7, 2024

Daily Current Affairs September 2024

  Jnyanabhandar       Saturday, September 7, 2024
Daily Current Affairs September 2024

💐ಗ್ರೀನ್‌ಟೆಕ್ ಫೌಂಡೇಶನ್‌ನಿಂದ ಯಾವ ಭಾರತೀಯ ವಿಮಾನ ನಿಲ್ದಾಣವು ಮಾಲಿನ್ಯ ನಿಯಂತ್ರಣ ತ್ಯಾಜ್ಯ ಮರುಬಳಕೆಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದೆ?
ಉತ್ತರ:- ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
💐'ಹೊಸದಾಗಿ ಸಂಯೋಜಿಸಲಾದ NPCI ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (CEO) ಯಾರು? 
ಉತ್ತರ- ಲಲಿತ ನಟರಾಜ್
💐ನವದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ನಾಗರಿಕ ಸೇವಾ ತರಬೇತಿ ಸಂಸ್ಥೆಗಳ ಸಮಾವೇಶದ ಸಂದರ್ಭದಲ್ಲಿ 'ಮಿಷನ್ ಕರ್ಮಯೋಗಿ' ಅಡಿಯಲ್ಲಿ ಪ್ರಾರಂಭಿಸಲಾದ ಪೋರ್ಟಲ್ ಅನ್ನು ಹೆಸರಿಸಿ? 
ಉತ್ತರ:- ಅಮೃತ್ ಜ್ಞಾನ್ ಕೋಶ
💐ವಾರ್ಷಿಕವಾಗಿ ಭಾರತದಾದ್ಯಂತ ವಿಭಜನೆಯ ಭಯಾನಕ ಸ್ಮರಣೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ? 
ಉತ್ತರ:- ಆಗಸ್ಟ 14

💐ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸಂಖ್ಯಾಶಾಸ್ತ್ರೀಯ ಸಂಸ್ಥೆಗಳ 28ನೇ , ಸಮ್ಮೇಳನವನ್ನು ಯಾವ ಸುಚಿವಾಲಯವು ಆಯೋಜಿಸಿದೆ? 
ಉತ್ತರ:- ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
💐17ನೇ ಬೇಸಿಗೆ ಪ್ಯಾರಾಒಲಿಂಪಿಕ್ಸ್ ಪ್ಯಾರಿಸ್ ನಲ್ಲಿ ನಡೆಯಲಿದೆ. 
ಉತ್ತರ:- ಆಗಸ್ಟ್ 28 ರಿಂದ ಸೆಪ್ಟೆಂಬರ್ 08
💐ಡಾ.ಟಿ.ವಿ. ಸೋಮನಾಥನ್ ಅವರು ನೂತನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
💐ಭಾರತವು ಶ್ರೀಲಂಕಾದ ಉತ್ತರ ಪ್ರದೇಶದಲ್ಲಿ ' ಹೈಬ್ರಿಡ್ ವಿದ್ಯುತ್ ಯೋಜನೆಗಳಿಗೆ' ಮೊದಲ ಪಾವತಿಯನ್ನು ಮಾಡಿದೆ.
💐ವಿಶ್ವ ಆರೋಗ್ಯ ಸಂಸ್ಥೆಯು ಕಾವ್ರೆಪಾಲಂಚೋಕ್ ಜಿಲ್ಲೆಯ ಧುಲಿಖೇಲ್ ಪುರಸಭೆಯನ್ನು ನೇಪಾಳದ ಮೊದಲ 'ಆರೋಗ್ಯಕರ ನಗರ' ಮತ್ತು ಏಷ್ಯಾದ ಎರಡನೇ ಆರೋಗ್ಯಕರ ನಗರ ಎಂದು ಘೋಷಿಸಿದೆ.

🌺ಇತ್ತೀಚೆಗೆ, ಮಹಾರಾಷ್ಟ್ರ ಸರ್ಕಾರವು ಯಾವ ಜಿಲ್ಲೆಯಲ್ಲಿ ಮೊದಲ ಸೋಲಾರ ವಿಲೇಜ ಅನ್ನು ಪ್ರಾರಂಭಿಸಿತು? 
ಉತ್ತರ:- ಸತಾರಾ
🌺ಜಗತ್ತಿನ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ----ದಲ್ಲಿ 2492 ಕ್ಯಾರೆಟ್‌ನ ವಜ್ರದ ಕಲ್ಲು ಪತ್ತೆಯಾಗಿದೆ
ಉತ್ತರ:- ಬೋಟ್ಸವಾನ
🌺ಸಾಗರಮಾಲಾ ಯೋಜನೆ ರಚಿತವಾಗಿರುವುದು
ಉತ್ತರ:- ಬಂದರುಗಳನ್ನುಗಳನ್ನು ಆಧುನೀಕರಿಸಲು ಮತ್ತು ಕರಾವಳಿ ಹಡಗುಗಳನ್ನು ಹೆಚ್ಚಿಸಲು
🌺ವಿದ್ಯುತ್ ಸಚಿವಾಲಯವು ಪ್ರಾರಂಭಿಸಿದ ಆನ್‌ಲೈನ್ ಪ್ಲಾಟ್‌ ಫಾರ್ಮ್ಗಳಾದ PROMT, DRIPS, JAL VIDYUT DPR ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ? 
ಉತ್ತರ:- ವಿದ್ಯುತ್ ಪ್ರಾಧಿಕಾರ
🌺ಸುದ್ದಿಯಲ್ಲಿ ಕಂಡುಬಂದ ತೀಸ್ತಾ ಜಲವಿದ್ಯುತ್ ಸ್ಥಾವರವು ಯಾವ ರಾಜ್ಯದಲ್ಲಿದೆ?
ಉತ್ತರ:- ಸಿಕ್ಕಿಂ
🌸 ಸುದ್ದಿಯಲ್ಲಿ ಕಂಡುಬಂದ 'ಸ್ಲೋ ಲೋರಿಸ್ Slow Loris' ಎಂದರೇನು?
 - ಪ್ರೈಮೇಟ್
🌸 ವಿಜ್ಞಾನಿಗಳು ಯಾವ ಗ್ರಹದಲ್ಲಿ ದ್ರವ ನೀರಿನ ಸಂಗ್ರಹವನ್ನು ಕಂಡುಹಿಡಿದಿದ್ದಾರೆ?
ಉತ್ತರ:- ಮಂಗಳ ಗ್ರಹ
🌸ಭಾರತ - ಯುರೋಪಿಯನ್ ಯೂನಿಯನ್ ಪ್ರಾದೇಶಿಕ ಸಮ್ಮೇಳನ ಎಲ್ಲಿ ನಡೆಯಿತು? 
ಉತ್ತರ:- ನವದೆಹಲಿ
🌸“ಪರಮಾಣು ಗಡಿಯಾರಗಳಲ್ಲಿ ಸಾಮಾನ್ಯವಾಗಿ ಯಾವ ಅಂಶಗಳನ್ನು ಬಳಸಲಾಗುತ್ತದೆ?
ಉತ್ತರ: - ಸೀಸಿಯಮ್
🌸ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:-29 ಆಗಸ್ಟ್
💎ಇತ್ತೀಚೆಗೆ, ಯಾವ ದೇಶವು ಭಾರತದ ಎರಡನೇ ಅತಿ ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆದಾರರಾಗಿದ್ದಾರೆ?
ಉತ್ತರ:-ಯುನೈಟೆಡ್ ಸ್ಟೇಟ್ಸ್
💎ಭಾರತದಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಯಾವ ಸಂಸ್ಥೆಯು ಇತ್ತೀಚೆಗೆ $200 ಮಿಲಿಯನ್ ಸಾಲವನ್ನು ಅನುಮೋದಿಸಿದೆ?
ಉತ್ತರ:- ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್
💎'ಭೂವೀಕ್ಷಣಾ ಉಪಗ್ರಹ-8 (EOS-8)' ಮಿಷನ್, ಇತ್ತೀಚೆಗೆ ಸುದ್ದಿಯಲ್ಲಿದೆ, ಯಾವ ಬಾಹ್ಯಾಕಾಶ ಸಂಸ್ಥೆಗೆ ಸಂಬಂಧಿಸಿದೆ?
ಉತ್ತರ:- ಇಸ್ರೋ 
💎ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕುರ್ಸ್ಕ್ ನಗರವು ಯಾವ ದೇಶದಲ್ಲಿದೆ?
ಉತ್ತರ:- ರಷ್ಯಾ
💎ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ಯಾಂಗಾಂಗ್ ಸರೋವರವು ಯಾವ ರಾಜ್ಯ/UT ನಲ್ಲಿದೆ?
ಉತ್ತರ:- ಲಡಾಖ್

🍁ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಸುಮಿತ್ ಆಂಟಿಲ್ ಯಾವ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು?
ಉತ್ತರ:- ಜಾವೆಲಿನ್ ಥ್ರೋ
🍁2025 ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಯಾವ ದೇಶವು ಆಯೋಜಿಸುತ್ತದೆ?
ಉತ್ತರ:- ಇಂಗ್ಲೆಂಡ್
🍁ಮೂರು ದಿನಗಳ ಸಶಸ್ತ್ರ ಪಡೆಗಳ ಉತ್ಸವವನ್ನು ಯುಪಿಯ ಯಾವ ನಗರದಲ್ಲಿ ಆಯೋಜಿಸಲಾಗಿದೆ?
ಉತ್ತರ:- ಲಕ್ನೋ
🍁ಗ್ರಾಮೀಣ ವೈದ್ಯರ ಚಳವಳಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2024 ನೀಡಿ ಗೌರವಿಸಲಾಯಿತು. ಇದು ಯಾವ ದೇಶಕ್ಕೆ ಸಂಬಂಧಿಸಿದೆ?  
ಉತ್ತರ:- ಥೈಲ್ಯಾಂಡ್
🍁ಬ್ರೂನೈಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಯಾರು.?
ಉತ್ತರ: ನರೇಂದ್ರ ಮೋದಿ .
🐠ಇತ್ತೀಚೆಗೆ ಸುದ್ದಿಯಲ್ಲಿದ್ದ ಫರಕ್ಕಾ ಬ್ಯಾರೇಜ್ (Farakka Barrage) ಯಾವ ನದಿಯ ಮೇಲಿದೆ..?
ಉತ್ತರ:-ಗಂಗಾ ನದಿ
🐠ಇತ್ತೀಚೆಗೆ,ಭಾರತದ ಎರಡನೇ ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ, INS ಅರಿಘಾಟ್ ಅನ್ನು ಯಾವ ಸ್ಥಳದಲ್ಲಿ ನಿಯೋಜಿಸಲಾಗಿದೆ?
ಉತ್ತರ:- ವಿಶಾಖಪಟ್ಟಣಂ, ಆಂಧ್ರ ಪ್ರದೇಶ
🐠61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ (61st National Chess Championship) ಗೆದ್ದವರು ಯಾರು?
ಉತ್ತರ:- ಕಾರ್ತಿಕ್ ವೆಂಕಟರಾಮನ್
🐠ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತವು ಇತ್ತೀಚೆಗೆ ಯಾವ ದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ಮಲೇಷ್ಯಾ
🐠ಇತ್ತೀಚೆಗೆ ಯಾವ ರಾಜ್ಯದ ಪ್ರವಾಸೋದ್ಯಮವು ನವೀನ 'ಹಾಲಿಡೇ ಹೀಸ್ಟ್' (Holiday Heist) ಅಭಿಯಾನಕ್ಕಾಗಿ PATA ಗೋಲ್ಡ್ ಅವಾರ್ಡ್ 2024 ಅನ್ನು ಗೆದ್ದಿದೆ?
ಉತ್ತರ:- ಕೇರಳ
🏝2024ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್(Carlos Alcaraz) ಯಾವ ದೇಶದ ಆಟಗಾರ?
ಉತ್ತರ:- ಸ್ಪೇನ್(Spain)
🏝ಯಾವ ದೇಶವು FIH ಹಾಕಿ ಪುರುಷರ ಜೂನಿಯರ್ ವಿಶ್ವಕಪ್ 2025 ಅನ್ನು ಆಯೋಜಿಸುತ್ತದೆ?
ಉತ್ತರ:- ಭಾರತ
🏝ಸುಹೇಲ್ವಾ ವನ್ಯಜೀವಿ ಅಭಯಾರಣ್ಯ(Suhelwa Wildlife Sanctuary )ವು ಇತ್ತೀಚೆಗೆ ಸುದ್ದಿಯಲ್ಲಿತ್ತು, ಇದು ಯಾವ ರಾಜ್ಯದಲ್ಲಿದೆ?
ಉತ್ತರ:- ಉತ್ತರ ಪ್ರದೇಶ
🏝ಇತ್ತೀಚೆಗೆ,ಮಧ್ಯಪ್ರದೇಶದ ಯಾವ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ನಾಲ್ಕು ಕೊಂಬಿನ ಹುಲ್ಲೆ (ಜಿಂಕೆ-four-horned antelope )ಮೊದಲ ಬಾರಿಗೆ ಕಾಣಿಸಿಕೊಂಡಿದೆ?
ಉತ್ತರ:- ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ
🏝ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಹೆಲಿಕಾಪ್ಟರ್ ಪೈಲಟ್(first woman helicopter pilot of the Indian Navy) ಯಾರು..?
ಉತ್ತರ:- ಅನಾಮಿಕಾ ಬಿ ರಾಜೀವ್

logoblog

Thanks for reading Daily Current Affairs September 2024

Previous
« Prev Post

No comments:

Post a Comment

If You Have any Doubts, let me Comment Here