In Private Aided High Schools: From 01-01-2016 to 31-12-2020
Vacancies due to retirement/death/resignation etc
Regarding permission to fill.
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ದಿ: 01-01-2016 ರಿಂದ 31-12-2020 ರವರೆಗೆ
ನಿವೃತ್ತಿ/ನಿಧನ /ರಾಜಿನಾಮೆ ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು
ಭರ್ತಿಮಾಡಲು ಅನುಮತಿ ನೀಡುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ(1)ರ ಸರ್ಕಾರದ ಆದೇಶದಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ದಿ: 01-01-2016 ರಿಂದ ದಿ:31-12-2020 ರವರೆಗೆ ನಿವೃತ್ತಿ/ನಿಧನ /ರಾಜಿನಾಮೆ ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿಮಾಡಲು ಕೆಲವು ಷರತ್ತಿಗೆ ಒಳಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಈ ಕಚೇರಿಯಿಂದ ಮಾರ್ಗದರ್ಶಿ/ ಸುತ್ತೋಲೆ ಹೊರಡಿಸುವ ಪೂರ್ವದಲ್ಲಿಯೇ ಕೆಲವು ಜಿಲ್ಲಾ ಉಪನಿರ್ದೇಶಕರುಗಳು ಹುದ್ದೆ ಭರ್ತಿ ಅನುಮತಿ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಆಡಳಿತ ಮಂಡಳಿಗಳಿಗೆ / ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನ ನೀಡಿರುವುದು ಉಲ್ಲೇಖ (2) ರ ಪತ್ರದಿಂದ ತಿಳಿದು ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಸರ್ಕಾರದ ಆದೇಶಕ್ಕೆ ಪೂರಕವಾಗಿ ಈ ಕಚೇರಿಯಿಂದ ಸುತ್ತೋಲೆ ಹೊರಡಿಸುವವರೆಗೆ ದಿ: 01-01-2016 ರಿಂದ ದಿ:31-12-2020 ರವರೆಗೆ ನಿವೃತ್ತಿ/ನಿಧನ /ರಾಜಿನಾಮ ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳ ಭರ್ತಿಗೆ ಯಾವುದೇ ಕ್ರಮ ವಹಿಸಬಾರದಾಗಿ ತಿಳಿಸಿದೆ. ತಪ್ಪಿದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿಸಿ ಶಿಸ್ತುಕ್ರಮ ಜರುಗಿಸಲಾಗುವುದು.
No comments:
Post a Comment
If You Have any Doubts, let me Comment Here