State government announces annual film awards for the Year 2020
ರಾಜ್ಯ ಸರ್ಕಾರದಿಂದ 2020ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಪ್ರಜ್ವಲ್ ದೇವರಾಜ್ ಭಾಜನರಾಗಿದ್ದರೇ, ಅತ್ಯುತ್ತಮ ನಟಿ ಪ್ರಶಸ್ತಿಗೆ ಅಕ್ಷತಾ ಪಾಂಡವಪುರ ಬಾಜನರಾಗಿದ್ದಾರೆ.
ಈ ಸಂಬಂಧ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ.
ಅದರಲ್ಲಿ ರಾಜ್ಯ ಸರ್ಕಾರದ ಆದೇಶ ಮತ್ತು ತಿದ್ದುಪಡಿ/ಸೇರ್ಪಡೆ ಆದೇಶಗಳಲ್ಲಿ, ಶ್ರೀ ಬಿ.ಎಸ್.ಲಿಂಗದೇವರು, ನಿರ್ದೇಶಕರು ಇವರ ಅಧ್ಯಕ್ಷತೆಯಲ್ಲಿ 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳಿಗಾಗಿ ಚಲವಚಿತ್ರಗಳನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿಯನ್ನು ರಚಿಸಲಾಗಿತ್ತು ಎಂದಿದ್ದಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದಲ್ಲಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರು 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಂತಿಮ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾ, ಅಂಗೀಕರಿಸಿ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ ಎಂದು ಹೇಳಿದ್ದಾರೆ.
2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ 2020ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 71 ಚಲನಚಿತ್ರಗಳನ್ನು ವೀಕ್ಷಿಸುವಾಗ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ನೀಡುವ ಪ್ರಮಾಣ ಪತ್ರಗಳನ್ನು ಆರಂಭದಲ್ಲಿಯೇ ಪರಿಶೀಲಿಸಿದ್ದು, ಸಮಿತಿಯು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಒಮ್ಮತದಿಂದ ಕನ್ನಡ ಭಾಷೆಯ 1) ಭುಗಿಲು, 2)ಕನಸು ಮಾರಾಟಕ್ಕಿದೆ, 3)ಡೊಳ್ಳು, 4) ಕಲ್ಯಾಣ ಕುವರ ಹಾಗೂ ತುಳು ಪ್ರಾದೇಶಿಕ ಭಾಷೆಯ 5) ಶಕಲಕ ಬೂಮ್ ಬೂಮ್ ಚಲನಚಿತ್ರಗಳನ್ನು ವೀಕ್ಷಿಸಿರುವುದಿಲ್ಲ. ಈ ಚಲನಚಿತ್ರಗಳು 2020ನೇ ಕ್ಯಾಲೆಂಡರ್ ವರ್ಷದಲ್ಲಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೂ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಮುಂದಿನ ವರ್ಷಗಳಿಗೆ ಅನುಮೋದಿತ ಮರು ಪ್ರಮಾಣಪತ್ರ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಮೇಲ್ಕಂಡ ಚಲನಚಿತ್ರಗಳನ್ನು ಆಯಾ ವರ್ಷಕ್ಕೆ ಅನ್ವಯಿಸಿಕೊಂಡು ಮರು ಅರ್ಜಿ ಸಲ್ಲಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ಈ ಚಿತ್ರಗಳನ್ನು ಸಮಿತಿಯು ವೀಕ್ಷಿಸಿರುವುದಿಲ್ಲ. ಈ ಐದು ಚಲನಚಿತ್ರಗಳನ್ನು ಹೊರತು ಪಡಿಸಿ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯು 66 ಚಲನಚಿತ್ರಗಳನ್ನು ವೀಕ್ಷಿಸಿ, 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆಯೆಂದು ತಿಳಿಸುತ್ತಾ, ಪ್ರಶಸ್ತಿಗಳ ವಿವರಗಳನ್ನೊಳಗೊಂಡ ಅನುಬಂಧ-1ರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡ ಆದೇಶದಲ್ಲಿರುವಂತೆ ಆದೇಶಿಸಿದ್ದಾರೆ.
No comments:
Post a Comment
If You Have any Doubts, let me Comment Here