JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, March 3, 2025

HRMS ESS Application

  Jnyanabhandar       Monday, March 3, 2025
HRMS ESS Application 

🇰 🇸 🇬 🇪 🇦 
🅱︎🅰︎🅽︎🅶︎🅰︎🅻︎🅾︎🆁︎🅴︎

*ಅತೀ ಶೀಘ್ರದಲ್ಲಿ ಮಾಹಿತಿಗಾಗಿ ಮತ್ತು ಸೇವೆಗಾಗಿ*

*📢 ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ!*

*ಸಂಘದ ಕೋರಿಕೆಯಂತೆ ಸರ್ಕಾರವು ನೌಕರರಿಗಾಗಿ  ESS ಆವೃತ್ತಿಯ 1.0.1 (Employee Self Service) HRMS 2.0 Mobile APP ಸಿದ್ದಪಡಿಸಿ ಬಿಡುಗಡೆ ಮಾಡಿದೆ.   ESS APP ನ್ನು ಕೆಳಕಂಡ ಲಿಂಕ್ ಮೂಲಕ  ಅಥವಾ ಪ್ಲೇ ಸ್ಟೋರ್ ಮೂಲಕ  Download ಮಾಡಿಕೊಂಡ ನಂತರ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ನಂತರ ತಮ್ಮ ಕೆ.ಜಿ.ಐ.ಡಿ ಸಂಖ್ಯೆ, ಪಾಸ್ವರ್ಡ್ ಮತ್ತು ಓಟಿಪಿ ಮೂಲಕ ಒಂದು ಬಾರಿ ಪ್ರವೇಶವನ್ನು ಪಡೆದ ನಂತರ ಎಲ್ಲಾ ಸೇವೆಗಳನ್ನು ಬೆರಳ ತುದಿಯಲ್ಲಿ ಪಡೆಯಬಹುದು.*


ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್‌ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್‌ಅನ್ನು ಸಿದ್ಧಪಡಿಸಿದೆ. ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

1) ವೇತನ ಚೀಟಿ (Pay Slip) ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು.

2) ರಜೆ ಬಾಕಿ (Leave Balance) ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.

3) ಸಾಲ/ಮುಂಗಡ (Loan/Advance) ನೌಕರರು ಸಾಲ/ಮುಂಗಡದ ವಿವರಗಳನ್ನು ವೀಕ್ಷಿಸಬಹುದು.

4) ಕಡಿತದ ವಿವರಗಳು (Deduction Details) ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್, ಮುಂತಾದವುಗಳನ್ನು ವೀಕ್ಷಿಸಬಹುದು.

5) ವಿಮೆ (Insurance) ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.

6) ಇ-ಸೇವಾ ಪುಸ್ತಕ (Service Register Book) ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ವೀಕ್ಷಿಸಬಹುದು.

7) ಹೆಚ್‌ಆರ್‌ಎಂಎಸ್ ಟಿಕೆಟ್ (Ticket Status) ನೌಕರರು ಹೆಚ್‌ಆರ್‌ಎಂಎಸ್‌ನಲ್ಲಿ ಸೃಜಿಸಿದ ಟಿಕೇಟ್‌ನ ವಿವರಗಳನ್ನು ವೀಕ್ಷಿಸಬಹುದು.
8) ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ) ಪಿ ಎಂ ಜೆ ಜೆ ಬಿ ವೈ ಮತ್ತು ಪಿ ಎಂ ಎಸ್ ಬಿ ವೈ ಯೋಜನೆಗಳಲ್ಲಿ ಸಿಬ್ಬಂದಿಗಳು ನೋಂದಣಿಯಾದ ವಿವರಗಳನ್ನು ವೀಕ್ಷಿಸಬಹುದು ಹಾಗೂ ಮುದ್ರಿಸಬಹುದು.

9) ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)
ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್ ಪೋರ್ಟಲ್‌ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ

ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.

10) ಕೆಜಿಐಡಿ ವಿಮಾ ಪತ್ರಗಳ ಪರಿಶೀಲನೆ

ಈ ಪರದೆಯಲ್ಲಿ ಸಿಬ್ಬಂದಿಗಳು ತಮ್ಮ ಕೆಜಿಐಡಿ ವಿಮಾ ಪತ್ರಗಳ ಹೆಚ್‌ಆರ್‌ಎಂಎಸ್‌ ನಲ್ಲಿನ | ಮಾಹಿತಿ ಹಾಗೂ ಕೆಜಿಐಡಿಯಲ್ಲಿನ ಮಾಹಿತಿಯನ್ನು ವೀಕ್ಷಿಸಬಹುದು. ಸಿಬ್ಬಂದಿಗಳು ಎರಡು ಅಂಕಣಗಳನ್ನು ಪರಿಶೀಲಿಸಿ ತಾಳ ಮಾಡಿ ಸರಿಯಾಗಿದ್ದಲ್ಲಿ ಸರಿಯಾಗಿ ಕಂಡು ಬಂದಿದೆ ಎಂಬ ಚೆಕ್ ಬಾಕ್ಸ್‌ ಅನ್ನು ಕ್ಲಿಕ್ ಮಾಡಿ ಉಳಿಸಬೇಕು (Save). ಒಂದು ವೇಳೆ ಯಾವುದಾದರೂ ವಿಮಾ ಮಾಹಿತಿಯು ತಪ್ಪಾಗಿದ್ದಲ್ಲಿ ಅದನ್ನು ಸೂಚಿಸಬಹುದಾಗಿದೆ. ಅದಲ್ಲದೇ ಯಾವುದಾದರೂ ವಿಮಾ ವಿವರಗಳು ಬಿಟ್ಟುಹೋದಲ್ಲಿ ಅದನ್ನು ಸೇರಿಸಬಹುದು. ಕೊನೆಯದಾಗಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ ಇ-ಸಹಿ ಯನ್ನು ಮಾಡಬೇಕು.

11) ಪ್ರಮುಖ ಲಿಂಕ್‌ಗಳು

ರಾಜ್ಯ ಸರ್ಕಾರದ ಪ್ರಮುಖ ಜಾಲತಾಣವಾದ ಕೆಜಿಐಡಿ, ಮಹಾಲೇಖಪಾಲರು-ಸಾಭನಿ, ಖಜಾನೆ-2, ಎನ್‌ಎಸ್‌ಡಿಎಲ್, ಮಹಾಲೇಖಪಾಲರು-ಜಿಇ, ಹೆಚ್‌ಆರ್‌ಎಂಎಸ್ ಅಪ್ಲಿಕೇಷನ್ ಗಳ ಪ್ರಮುಖ ಲಿಂಕ್‌ಗಳನ್ನು ಒದಗಿಸಲಾಗಿದೆ.

ಮುಂದುವರೆದು, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.

ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ដ មួយ ជ. ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ. ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
logoblog

Thanks for reading HRMS ESS Application

Previous
« Prev Post

No comments:

Post a Comment

If You Have any Doubts, let me Comment Here