Chief Minister Answer Regarding Government Employees Insurance
ರಾಜ್ಯದ ಸರ್ಕಾರಿ ನೌಕರರಿಗೆ ರೂ. 1.00 ಕೋಟಿಗಳ ಅಪಘಾತ ವಿಮೆಯನ್ನು ಮಾಡಲು ಸರ್ಕಾರ ಯೋಚಿಸಿದೆಯೇ: ಹಾಗಿದ್ದಲ್ಲಿ, ಎಂದಿನಿಂದ ಜಾರಿಗೆ ತರಲಾಗುವುದು ಎಂದು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯ ಮಂತ್ರಿಗಳ ಅಧಿಕೃತ ಉತ್ತರ.
ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು, ಈ ಕೆಳಕಂಡ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯು ದಿನಾಂಕ: 30.01.2025 ರಂದು ಈ ಕೆಳಗಿನಂತೆ ಆದೇಶಿಸಿದೆ.
1) ವಿವಿಧ ಬ್ಯಾಂಕುಗಳು ಒದಗಿಸುವ "ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು (ಖಾಯಂ/ಗುತ್ತಿಗೆ/ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸುವುದು.
1) ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು. i ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.
ಭಾರತೀಯ ಸ್ಟೇಟ್ ಬ್ಯಾಂಕ್ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ನೌಕರರಿಗೆ ರೂ. 1.00 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1.60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.
ಅದೇ ರೀತಿ ಕೆನರಾ ಬ್ಯಾಂಕ್, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.
👇👇👇👇👇
ಹೆಚ್ಚಿನ ಮಾಹಿತಿಗಾಗಿ.
No comments:
Post a Comment
If You Have any Doubts, let me Comment Here