Regarding conducting preliminary examination for SSLC examination for the year 2024-25
2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತಂತೆ ಪೂರ್ವಭಾವಿ ಪರೀಕ್ಷೆ ನಡೆಸುವ ಕುರಿತು ಧಾರವಾಡ ಆಯುಕ್ತರ ಜ್ಞಾಪನ.
ಉಲ್ಲೇಖ :
1. ಈ ಕಚೇರಿ ಜ್ಞಾಪನ ಸಂಖ್ಯೆ: ಸಿ7/ಎಸ್.ಎಸ್.ಎಲ್.ಸಿ/04/2024-25,
: 02-01-2025
2. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ(ರಿ) ಬೆಂಗಳೂರು ಇವರ ಮನವಿ,
2: 03-01-2025
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಈಗಾಗಲೇ ಉಲ್ಲೇಖಿತ ಜ್ಞಾಪನ 1 ರನ್ವಯ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ತಯಾರಿ ಹಾಗೂ ಪ್ರಗತಿ ಅರಿಯುವ ನಿಟ್ಟಿನಲ್ಲಿ ಜನೇವರಿ-2025 ರ ಮಾಹೆಯಲ್ಲಿ ಪರೀಕ್ಷೆ ನಡೆಯಿಸಿ ಮೌಲ್ಯಮಾಪನ ಮಾಡಿ ಫಲಿತಾಂಶ ವಿಶ್ಲೇಷಣಾ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಆದರೆ ಉಲ್ಲೇಖಿತ ಪತ್ರ 2 ರನ್ವಯ ಹಾಗೂ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳು ಈಗಾಗಲೇ ನಿಗದಿತ ದಿನಾಂಕಗಳಂದು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಗಳಂದು ಪರೀಕ್ಷೆ ನಡೆಯಿಸುವುದು ಕಷ್ಟಸಾಧ್ಯವೆಂದು ಹಿಮ್ಮಾಹಿತಿ ನೀಡಿರುತ್ತಾರೆ. ಸದರ ವಿಷಯಗಳನ್ನು ಗಮನಿಸಿ ಉಲ್ಲೇಖಿತ ಜ್ಞಾಪನ 1 ನ್ನು ಪರಿಷ್ಕರಿಸಿ ಆಯಾ ಜಿಲ್ಲೆಯ ಉಪನಿರ್ದೇಶಕರು ಆಡಳಿತ/ಅಭಿವೃದ್ಧಿ/ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಯಿಸಿ ಜಿಲ್ಲಾ/ ಬ್ಲಾಕ್ ಹಂತದ ದಿನಾಂಕಗಳ ಹೊಂದಾಣಿಕೆ ಮಾಡಿಕೊಂಡು ಶಾಲಾ ಹಂತದಲ್ಲಿ ಪರೀಕ್ಷೆಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ನಡೆಸಲು ಕ್ರಮವಹಿಸಲು ಆಯುಕ್ತರು ತಿಳಿಸಿರುತ್ತಾರೆ.
No comments:
Post a Comment
If You Have any Doubts, let me Comment Here