Karnataka Voters FINAL List 2025
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವ ರಾಜ್ಯದಲ್ಲಿ ಒಟ್ಟು 5,52,08,565 ಸಾಮಾನ್ಯ ಮತದಾರರಿದ್ದಾರೆ. ಇದರಲ್ಲಿ 2,75,62,634 ಪುರುಷ ಮತದಾರರು, 2,76,40,836 ಮಹಿಳಾ ಮತದಾರರು ಮತ್ತು 5,095 ಇತರ ಮತದಾರರು ಸೇರಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸೋಮಾವಾರದಂದು ಎಲ್ಲ ಜಿಲ್ಲೆಗಳ ಉಪ ಆಯುಕ್ತರು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆಗಳಲ್ಲೂ ಪ್ರಕಟಿಸಲಾಗಿದೆ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ https://ceo.karnataka.gov.in ಮತ್ತು DEOಗಳ ವೆಬ್‍ಸೈಟ್‍ಗಳಲ್ಲಿ ಸಹ ವಿಧಾನಸಭೆ ಕ್ಷೇತ್ರವಾರು ಅಂತಿಮ ಮತದಾರರ ಪಟ್ಟಿ ಲಭ್ಯವಿದೆ.
ಕರಡು ಪಟ್ಟಿಗೆ ಹೋಲಿಸಿದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 1,03,783 ಮತದಾರರು ಹೆಚ್ಚಳ ಆಗಿದ್ದಾರೆ. ಮಹಿಳಾ ಮತದಾರರು 72,754, ಪುರುಷ ಮತದಾರರು 30,999 ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿ 2025ರ ಪ್ರಕಾರ ಮತಗಟ್ಟೆಗಳ ಸಂಖ್ಯೆ 58,932 ಇದೆ.
ಅಂತಿಮ ಮತದಾರರ ಪಟ್ಟಿ ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಲು ಲಿಂಕ್ ಕ್ಲಿಕ್ ಮಾಡಿ
2025ರ ಅಂತಿಮ ಮತದಾರರ ಪಟ್ಟಿಯನ್ನು ಚೆಕ್ ಮಾಡುವ ವಿಧಾನ.
ಹಂತ-1 ಮೊದಲಿಗೆ https://ceo.karnataka.gov.in ವೆಬ್ಸೈಟ್'ಗೆ ಬೇಟಿ ನೀಡಿ.
ಹಂತ-2 ಅಲ್ಲಿ ವಿಂಡೋಸ್ ಮೇಲೆ ಕಾಣುವ Final Electoral Roll-2025 ಮೇಲೆ ಕ್ಲಿಕ್ ಮಾಡಿ.
ಹಂತ-3 ನಿಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ಭಾಷೆ ಆಯ್ಕೆ ಮಾಡಿಕೊಳ್ಳಿ.
ಹಂತ-4 ನಂತರ ಅಲ್ಲಿ ಕಾಣುವ ನಿಮ್ಮ ಮತಗಟ್ಟೆ ಹೆಸರಿನ ಪಕ್ಕ ಇರುವ ಅಂತಿಮ ಮತದಾರರ ಪಟ್ಟಿಯ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here