Important information regarding primary school assistant teachers appointed for 1-7/8 before 2016
2016 ಕ್ಕಿಂತ ಮೊದಲು 1-7/8 ಕ್ಕೆ ನೇಮಕ ಹೊಂದಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು PST ಎಂದು ಪದನಾಮ ಮಾಡಿ 1-5 ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆದು, ಪದವಿ ಹೊಂದಿದ ಶಿಕ್ಷಕರನ್ನು ಸೇವಾಜೇಷ್ಠತೆಯೊಂದಿಗೆ GPT ಶಿಕ್ಷಕರೆಂದು ಪದನಾಮೀಕರಣ ಮಾಡುವುದರ ಜೊತೆಗೆ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರ ಹಕ್ಕುಗಳನ್ನು ಸಂರಕ್ಷಿಸಿ ನ್ಯಾಯ ಒದಗಿಸುವ ಕುರಿತು ಮಾರ್ಗದರ್ಶನ ನೀಡುವ ಬಗ್ಗೆ.
ಉಲ್ಲೇಖ:1.ಕನಾಟಕ ರಾಜ್ಯಪತ್ರ ಮೇ 20, 2017. ಸರ್ಕಾರದ ಆದೇಶ ಸಂಖ್ಯೆ ಇಡಿ 626 ಪಿಬಿಎಸ್ 2014:
ಬೆಂಗಳೂರು ದಿನಾಂಕ: 19-05-2017.
2. DPAR Secretariat Notification. No. DPAR.41.SRE.2001, Bangalore Dated:9th August, 2001
3. ಕರ್ನಾಟಕ ರಾಜ್ಯಪತ್ರ ಸಂಖ್ಯೆ . No. ED 291 LBP 2015, Bengaluru, Dated: 29-09-2016.
4.ಸರ್ಕಾರದ ಆದೇಶ ಸಂಖ್ಯೆ: ಇಪಿ 370/ಪಿಬಿಎಸ್ 2024 ದಿನಾಂಕ: 23-09-2024.
5.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಇವರ ಮನವಿ ಪತ್ರ : 208:2024-25 ໖: 09-12-2024.
ಮೇಲಿನ ವಿಷಯ ಹಾಗೂ ಉಲ್ಲೇಖಗಳನ್ನಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು. ಇವರು ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳ ಹಕ್ಕು ಕಾಯ್ದೆ-2009 ಹಾಗೂ NCTE ಅಧಿಸೂಚನೆಗಳನ್ವಯ 2017ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ, ಮೊದಲಿದ್ದ 1-8 ರ ಮೂಲ ವೃಂದವನ್ನು 1-5 ಮತ್ತು 6-8 ಎಂಬ ಎರಡು ವೃಂದಗಳಲ್ಲಿ ವಿಭಾಗಿಸಿ ವಿವಿಧ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ. ಈ ನಿಯಮಗಳನ್ನು ಪೂರ್ವಾನ್ವಯಗೊಳಿಸಿ 2016 ಕ್ಕಿಂತ ಮುಂಚೆ 1-7/8 ಕ್ಕೆ ನೇಮಕಾತಿ ಹೊಂದಿ 20-25 ವರ್ಷಗಳಿಂದ ಬೋಧಿಸುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು PST ಎಂದು ಪದನಾಮ ಮಾಡಿ 1-5 ಕ್ಕೆ (ಉಲ್ಲೇಖ-1) ಸೀಮಿತಗೊಳಿಸಿದ್ದರಿಂದ ಒಂದು ಲಕ್ಷದ ಹದಿಮೂರು ಸಾವಿರದ ನೂರ ಅರವತ್ನಾಲ್ಕು (1.13,164) ಶಿಕ್ಷಕರಿಗೆ ಹಿಂಬಡ್ತಿಯಾದಂತಾಗಿದೆ. 6-8 ನೇ ತರಗತಿ ಬೋಧನೆಗೆಂದು GPT ಎಂಬ ಹೊಸ ವೃಂದವನ್ನು ಸೃಜಿಸಿ. ಮೊದಲಿದ್ದ ಸೇವಾನಿರತ ಶಿಕ್ಷಕರ ಅನುಭವ ಮತ್ತು ಅರ್ಹತೆಯನ್ನು ಕಡೆಗಣಿಸಿ ಆವೈಜ್ಞಾನಿಕವಾಗಿ ಹಾಗೂ ನಿಯಮಬಾಹಿರವಾಗಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ದಿನಾಂಕ: 09-12-2024 ರಂದು ಸಂಘವು ಮನವಿ ಮಾಡಿರುತ್ತದೆ.
ಇಂದಿನವರೆಗೂ ಚಾಲ್ತಿಯಲ್ಲಿರುವ ನೇಮಕಾತಿ ಹಾಗೂ ಬಡ್ತಿ ನಿಯಮಗಳ ಪ್ರಕಾರ ಹೈಸ್ಕೂಲ್ ಕೇಡರ್ ಗೆ ಫೀಡರ್ ಕೇಡರ್ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಇದ್ದು, B Ed ಅರ್ಹತೆ ಪಡೆದ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿ ಕೊಡುವ ನಿಯಮ ಇದೆ (ಉಲ್ಲೇಖ-2 ಮತ್ತು 3), ಆದರೆ ಈಗ ಇಲಾಖೆ 1-7/8 ರ ಶಿಕ್ಷಕರನ್ನು 1-5 ಕ್ಕೆ ಇಳಿಸಿ. ಕಡಿಮೆ ವೇತನ ಶ್ರೇಣಿಯ ಹುದ್ದೆಯಾದ 6-8 ಕ್ಕೆ ಬಡ್ತಿ ಕೊಡುತ್ತೇವೆ ಎನ್ನುವುದು ಹಿಂಬಡ್ತಿ ಕೊಟ್ಟಂತಾಗುತ್ತದೆ. ಎಂದು ಈ ಕೆಳಗಿನಂತೆ ಸ್ಮಷ್ಟಿಕರಣ ನೀಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here