General knowledge Question and Answers
🏝ಪ್ರಧಾನ ಮಂತ್ರಿ ಪ್ರಶಿಕ್ಷಣಾರ್ಥಿಗಳು ಯೋಜನೆ (ಪಿಎಂ ಇಂಟರ್ನ್ಶಿಪ್ ಸ್ಕೀಮ್)ಯಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಧನ ಸಹಾಯವು ದೊರೆಯುತ್ತದೆ.?
ಉತ್ತರ:- ಒಂದು ಕೋಟಿ
🏝ಭಾರತೀಯ ಸಮಗ್ರ ಕೃಷಿ ಅಭಿವೃದ್ಧಿಗೆ ಯಾವ ಹೊಸ ವ್ಯವಸ್ಥೆಯು ಬರಲಿದೆ.?
ಉತ್ತರ:- ನ್ಯಾಷನಲ್ ಅಗ್ರಿಕಲ್ಚರ್ ಕೋಡ್
🏝'ಹೀರಿ ಹಿಪ್ಪೆ ಮಾಡು' ಎಂಬ ನುಡಿಗಟ್ಟಿನ ಅರ್ಥವೇನು.?
ಉತ್ತರ:- 'ನಿಸ್ಸಾರಗೊಳಿಸು'
🏝'ಸಮೃದ್ಧವಾದ,ಪುಷ್ಕಳವಾದ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.?
ಉತ್ತರ:- 'ಪಗದಸ್ತು'
🏝'ಕವಣೆಕಲ್ಲು' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.?
ಉತ್ತರ:- ಪಗರಿ
ಅವರು ತಮ್ಮ 'ಬನವಾಸಿ' ಕೃತಿಯಲ್ಲಿ 'ಮಾನವನ ಜೀವ ಹುಳುಗಳ ಹಾಗೆ ಸಾಯುವ ಸ್ಥಿತಿಗೆ ಬಂದಿದೆ.ಅನ್ನಾನ್ನಗತಿಕವಾಗಿದೆ' ಎಂದಿದ್ದಾರೆ.ಇದರ ಅರ್ಥವೇನು?
ಉತ್ತರ:- ದರಿದ್ರ ಸ್ಥಿತಿಯನ್ನು ತಲುಪು
🚀ಕುರ್ಕ್,ಮಾಯೆರರು,ಗೋಲಾರಿ ಹೊಲೆಯರು ಮತ್ತು ಹಳಬರು ಎಂಬ ಸಮುದಾಯದವರ ಭಾಷೆಯಲ್ಲಿ ಕನ್ನಡ ಶಬ್ದಗಳಿರುವುದನ್ನು ಯಾರು ತೋರಿಸಿದರು?
ಉತ್ತರ:-ಶಂಕರ ಬಾಲದೀಕ್ಷಿತ ಜೋಶಿ
🚀ಮಾಗಡಿ ಮತ್ತು ಹುತ್ತರಿದುರ್ಗದ ಸುತ್ತಮುತ್ತಲಲ್ಲಿ 'ಕಲ್ಲುಸೇವೆ' ಎಂಬ ಶವಸಂಸ್ಕಾರವು ನಡೆಯುತ್ತಿತ್ತು.ಇದು ಯಾವ ಧರ್ಮದ ಶವಸಂಸ್ಕಾರವನ್ನು ಹೋಲುತ್ತದೆ?
ಉತ್ತರ:- ಪಾರ್ಸಿಗಳು
🚀ಕರ್ನಾಟಕದ ಯುವತಿಯರು 'ಮೋಸ ಮಾಡುವುದರಲ್ಲಿ ಸಿದ್ಧಹಸ್ತರು' ಎಂದು ಯಾರು ಹೇಳಿದ್ದಾರೆ?
ಉತ್ತರ:- ಸೋಮದೇವ ಸೂರಿ
🚀'ನನ್ನನ್ನು ನಾನು ಕಂಡಂತೆ' ಯಾರ ಆತ್ಮಕಥೆ?
ಉತ್ತರ:- ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ)
🚀'ನೆನಪಿನ ಬುತ್ತಿ'- ಯಾರ ಆತ್ಮಕಥೆ?
ಉತ್ತರ:- ದೇ.ಜವರೇಗೌಡ
🚀'ನಿರ್ಭಯಾಗ್ರಫಿ' – ಯಾರ ಆತ್ಮಕಥೆ?
ಉತ್ತರ:- ಜಿ.ಪಿ.ರಾಜರತ್ನಂ
🐠ಅಂತರ ಸಂಸತ್ತುಗಳ ಒಕ್ಕೂಟ(ಇಂಟರ್ ಪಾರ್ಲಿಮೆಂಟರಿ ಯೂನಿಯನ್) ಎಲ್ಲಿದೆ?
-> ಜಿನೀವ
🐠'ಬಯೋ - ಪಾಲಿಮರ್' ಗಳನ್ನು ಯಾವುದರಿಂದ ತಯಾರಿಸುತ್ತಾರೆ?
-> ಜೈವಿಕ ವಸ್ತುಗಳು
🐠ಭಾರತವು ಅಮೆರಿಕಾದಿಂದ ಯಾವ ಹೊಸ ಕ್ಷಿಪಣಿಗಳನ್ನು ಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ?
-> ಎ.ಜಿ.ಎಂ - ಹೆಲ್‌ಫೈರ್(AGM - Hellfire)
🐠'ವೆಸ್ಟ್ ನೈಲ್ ವೈರಸ್'(West Nile virus)ಸೋಂಕು ಯಾವ ದೇಶದಲ್ಲಿ ಸಾವು ನೋವಿಗೆ ಕಾರಣವಾಗಿದೆ?
-> ಉಕ್ರೇನ್
🐠ಅಮೃತಾ,ಮನದ,ಪೂಷಾ,ಪುಷ್ಟಿ, ತುಷ್ಟಿ, ರತಿ, ಧೃತಿ ಇವೆಲ್ಲ ಏನು?
-> ಚಂದ್ರನ ಕಲೆಗಳು
🐠'ಹಾದಿಗೆ ಹಚ್ಚು' ಎಂಬ ನುಡಿಗಟ್ಟಿನ ಅರ್ಥವೇನು?
-> ಸರಿಯಾದ ಮಾರ್ಗದಲ್ಲಿ ನಡೆಸು
🐠ಲಕ್ಷ್ಮಣನ ಎರಡನೆಯ ಮಗ ಚಂದ್ರಕೇತುವಿನ ರಾಜಧಾನಿ ಯಾವುದಾಗಿತ್ತು?
-> ಚಂದ್ರಕಾಂತ
🏝ಕರ್ನಾಟಕದ ಜನರು 'ತಾಂಬೂಲ ಪ್ರಿಯರು' ಎಂಬ ಉಲ್ಲೇಖವನ್ನು ಯಾರು ನೀಡಿದ್ದಾರೆ?
- ಜಿನಸೇನ
🏝ಕರ್ನಾಟಕದ ಇತಿಹಾಸವನ್ನು ೩೦೦೦ ವರ್ಷಕ್ಕೂ ಹಿಂದೆ ಕರೆದೊಯ್ಯುವ ಸಮಾಧಿಗಳು ಎಲ್ಲಿ ಕಂಡು ಬಂದಿವೆ?
- ಹುತ್ತರಿದುರ್ಗ
🏝ಯಾವ ಉಪನಿಷತ್ತಿನಲ್ಲಿ 'ಮಿಟಚಿ' (ಮಿಡತೆ) ಮತ್ತು 'ಚೆನ್' (ಚಂದ್ರ) ಶಬ್ದಗಳು ಕಂಡುಬರುತ್ತವೆ?
- ಛಾಂದೋಗ್ಯ ಉಪನಿಷತ್ತು
🏝2025ನೆಯ ಹೊಸ ವರ್ಷವನ್ನು ಜಗತ್ತಿನಲ್ಲಿ ಯಾವ ದೇಶವು ಮೊತ್ತ ಮೊದಲು ಆಚರಿಸುತ್ತದೆ?
- ಕಿರಿಬಾಟಿ ದ್ವೀಪಗಳು
🏝ಯಾವ ದೇಶದಲ್ಲಿ ಹೊಸ ವರ್ಷದ ಮೊದಲ ದಿನದಂದು 12 ದ್ರಾಕ್ಷಿಗಳನ್ನು ತಿನ್ನುವ ಆಚರಣೆಯಿದೆ?
- ಸ್ಪೇನ್
🏝'ನಾಟ್ಯ ನೆನಪುಗಳು' ಯಾರ ಆತ್ಮಕಥೆ?
- ಶ್ರೀರಂಗ
🏝'ಜೀವನ ಸ್ಮರಣೆ' ಯಾರ ಆತ್ಮಕಥೆ?
- ಆಲೂರು ವೆಂಕಟರಾವ್
No comments:
Post a Comment
If You Have any Doubts, let me Comment Here