B.Ed 2024 - Instructions to candidates
2024-25ನೇ ಸಾಲಿನ ಬಿ.ಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 3ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ದಿನಾಂಕ: 03/01/2025 ರಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.
ಮೂಲದಾಖಲೆಗಳ ಪರಿಶೀಲನೆ ಆಗದೇ ಇರುವುದರಿಂದ ಮತ್ತೊಮ್ಮೆ ಪರಿಶೀಲನೆಗೆ ಅವಕಾಶ ಮಾಡಿಕೊಡುವಂತೆ ಹಲವಾರು ಅಭ್ಯರ್ಥಿಗಳು ಕೊರಿಕೊಳ್ಳುತ್ತಿರುವುದರಿಂದ 4ನೇ ಅಂತಿಮ ಸುತ್ತಿಗೆ ಅವಕಾಶ ಮಾಡಿಕೊಳ್ಳುವುದಕ್ಕಾಗಿ ದಿನಾಂಕ:10/01/2025 ಹಾಗೂ 13/01/2025 ಎರಡು ದಿನಗಳಂದು ತಾವು ಆಯ್ಕೆ ಮಾಡಿಕೊಂಡ ವ್ಯವಸ್ಥಾಪಕ ಕೇಂದ್ರಗಳಲ್ಲಿ (DIET/CTE) ಮೂಲದಾಖಲೆಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿದೆ.
1.2.3.ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ದಾಖಲಾತಿ ಪತ್ರ (Admission Slip) ಪಡೆಯದೇ ಇರುವ ಅಭ್ಯರ್ಥಿಗಳು 3ನೇ ಸುತ್ತಿನಲ್ಲಿ ಸ್ಟಾರ್ (*) ಗುರುತು ಬಂದಿರುವ ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳಿಗೆ 4ನೇ ಸುತ್ತಿನಲ್ಲಿ Option Entry ಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಅಭ್ಯರ್ಥಿಗಳು Login ಆಗಿ 4ನೇ ಸುತ್ತಿನ ಸೀಟು ಹಂಚಿಕೆ ಬಯಸುವುದಾಗಿ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಇದು ಕೊನೆ ಅವಕಾಶವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ www.schooleducation.karnataka.gov.in
ಸಂಪರ್ಕಿಸುವುದು.
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.
No comments:
Post a Comment
If You Have any Doubts, let me Comment Here