Karnataka State Police Department Vacancies Details
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವೃಂದದ ಹುದ್ದೆಗಳ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಗೃಹ ಸಚಿವರಿಂದ ಅಧಿಕೃತ ಮಾಹಿತಿ.
⚫ ಅತೀ ಶೀಘ್ರದಲ್ಲೇ 620 PSI & 4,000+ PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!
⚫ ಆರ್ಥಿಕ ಇಲಾಖೆಯಿಂದ 600 PSI, 20 DSI & 4,068 PC (KSRP PC=1892 & DAR PC=2176) ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!
⚫ ಪೋಲಿಸ್ ಇಲಾಖೆಯಲ್ಲಿನ ಪ್ರಗತಿಯಲ್ಲಿರುವ PC & PSI ನೇಮಕಾತಿ ಹುದ್ದೆಗಳ ಸದ್ಯದ ಸ್ಥಿತಿಗತಿಯನ್ನು ಇದರಲ್ಲಿ ನೀಡಲಾಗಿದೆ.!!
ಅಧಿವೇಶನದಲ್ಲಿ ಕೇಳಿದ ಪ್ರಶ್ನೆ
ರಾಜ್ಯದ ಗೃಹ ಇಲಾಖೆಯಲ್ಲಿರುವ ಡಿಜಿಪಿ ಮತ್ತು ಐಜಿಪಿ ಇಂದ ಹಿಡಿದು ಪೊಲೀಸ್ ಪೇದೆಯವರೆಗೆ ಎಲ್ಲ ವೃಂದದ ಹುದ್ದೆಗಳು ಸೇರಿದಂತೆ ಇರುವ ಹುದ್ದೆಗಳ ಸಂಖ್ಯೆ ಎಷ್ಟು; (ಸಂಪೂರ್ಣ| ಮಾಹಿತಿ ಒದಗಿಸುವುದು)
ಪೊಲೀಸ್ ಅಧಿಕಾರಿ/ಲಿಪಿಕ ಇಲಾಖೆಯಲ್ಲಿ ನೌಕರರು/ಎಲ್ಲಾ ವೃಂದದ ಹುದ್ದೆಗಳು/ ಪೊಲೀಸ್ ಪೇದೆಗಳ ಹುದ್ದೆಗಳು ಸೇರಿದಂತೆ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು, ಸಂಪೂರ್ಣ ಮಾಹಿತಿ ನೀಡುವುದು; ಪ್ರತಿ ವರ್ಷ ನಿವೃತ್ತಿ ಹೊಂದುವ ಅಧಿಕಾರಿ/ಸಿಬ್ಬಂದಿ/ ಪೊಲೀಸ್ ಪೇದೆಗಳ ಸಂಖ್ಯೆ ಎಷ್ಟು, (ಎಂಬುದರ ಬಗ್ಗೆ ಮಾಹಿತಿ ಒದಗಿಸುವುದು)
ಪೊಲೀಸ್ ಮ್ಯಾನ್ಯೂವಲ್‌ನಂತೆ ಒಂದು ಪೊಲೀಸ್ ಠಾಣೆಯಲ್ಲಿ ಇರಬೇಕಾಗಿರುವ| ವಿವರ ಹುದ್ದೆಗಳ ಸಂಖ್ಯೆ ಎಷ್ಟ; (ಮಾಹಿತಿ । ನೀಡುವುದು)
ಪೊಲೀಸ್ ಠಾಣೆಗಳಲ್ಲಿ ಅನುಪಾತದಂತೆ | ಪೊಲೀಸ್ ಪೇದೆಗಳ ಹುದ್ದೆ ಇಲ್ಲದೆ ಇರುವುದು ซออ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ 20 ರಿಂದ 30 ಪೇದೆಗಳ ಹುದ್ದೆ ಖಾಲಿ ಇರುವುದು | ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ. ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು; (ವಿವರ ನೀಡುವುದು)
ಒಂದು ವರ್ಷಕ್ಕೊ 3 ವರ್ಷಕ್ಕೂ ಒಂದು ಸಾರಿ ಕೇವಲ 2 ರಿಂದ 3 ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡದೆ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವೇ;
ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಕ್ರಮ ವಹಿಸುತ್ತಿದ್ದು ಖಾಲಿ ಇರುವ ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡದೆ ಇರಲು ಕಾರಣವೇನು: | (ಸಂಪೂರ್ಣ ವಿವರಣೆ ನೀಡುವುದು)
ಇತರೆ ಪ್ರಶ್ನೆ ಹಾಗೂ ಅವುಗಳ ಉತ್ತರಗಳಿಗೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here