KPSC Land Surveyor Recruitment 2024
Corrigendum Notification for the post of Surveyor(HK) is published
ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ "ಭೂಮಾಪಕರು" ಉಳಿಕೆ ಮೂಲ ವೃಂದದ-264 ಮತ್ತು ಹೈದ್ರಾಬಾದ್- ಕರ್ನಾಟಕ ಸ್ಥಳೀಯ ವೃಂದದ-100 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ :(2)581/2023-24/22: 2, 2(2)582/2023-24/22, 20:29.02.202400 ಹೊರಡಿಸಲಾಗಿರುತ್ತದೆ.
ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಸಂಬಂಧಿತ ನೇಮಕಾತಿ ಪ್ರಾಧಿಕಾರಿಗಳು ದೃಢೀಕರಿಸಿ ಸಲ್ಲಿಸಿರುವ ವರ್ಗೀಕರಣದ ಮೇರೆಗೆ, ಉಳಿಕೆ ಮೂಲ ವೃಂದದ ಮುಖ್ಯ ಅಧಿಸೂಚನೆ ಸಂಖ್ಯೆ: (2)581/2023-24/2, ದಿ:29.02.2024 296 ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡಿಸಿ , ಸೇರ್ಪಡೆ ಅಧಿಸೂಚನೆ ಸಂಖ್ಯೆ:ಇ(2)1023/2024-25/ಪಿಎಸ್‌ಸಿ, ದಿನಾಂಕ:22.11.2024ರಲ್ಲಿ ಹಾಗೂ ಹೈದ್ರಾಬಾದ್- ಕರ್ನಾಟಕ ಸ್ಥಳೀಯ ವೃಂದದ ಮುಖ್ಯ ಅಧಿಸೂಚನೆ ಸಂಖ್ಯೆ (2)582/2023-24/22, 22:29.02.2024 90 ಹೆಚ್ಚುವರಿ ಹುದ್ದೆಗಳನ್ನು ಸೇರ್ಪಡಿಸಿ, ಸೇರ್ವಡೆ ಅಧಿಸೂಚನೆ ಸಂಖ್ಯೆ:ಇ(2)1024/2024-25/ಪಿಎಸ್‌ಸಿ, ದಿನಾಂಕ:22.11.2024ರಲ್ಲಿ ಹೊರಡಿಸಲಾಗಿರುತ್ತದೆ. ಸದರಿ ಸೇರ್ಪಡೆ ಅಧಿಸೂಚನೆಗಳಲ್ಲಿನ ಹುದ್ದೆಗಳನ್ನೂ ಸಹ ದಿನಾಂಕ:29.02.2024ರ ಅಧಿಸೂಚನೆಗಳಲ್ಲಿ ನಿಗದಿಪಡಿಸಿರುವ ನಿಯಮಗಳನ್ವಯ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನೆನಿ 2024, ದಿನಾಂಕ:10.09.2024ರಲ್ಲಿ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಗ್ರೂಪ್-ಸಿ ವೃಂದದ 'ಭೂಮಾಪಕರ' ಹುದ್ದೆಗಳಿಗೆ "ಸಾಮಾನ್ಯ ಅರ್ಹತೆ-38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ-41 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1-43 ವರ್ಷಗಳು" ಎಂಬುದಾಗಿ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದ್ದು, ಅದರಂತೆ, ಆಯೋಗದ ಉಳಿಕೆ ಮೂಲ ವೃಂದದ ಅಧಿಸೂಚನೆ ಸಂಖ್ಯೆ: ಇ(2)581/2023-24/ಪಿಎಸ್‌ಸಿ, ದಿನಾಂಕ:29.02.2024 ಮತ್ತು ಹೈದ್ರಾಬಾದ್ ಕರ್ನಾಟಕ ಸ್ಥಳೀಯ ವೃಂದ ಅಧಿಸೂಚನೆ ಸಂಖ್ಯೆ:ಇ(2)582/2023-24/ಪಿಎಸ್‌ಸಿ, ದಿನಾಂಕ:29.02.2024ರಲ್ಲಿನ ಅಧಿಸೂಚನೆಗಳು ಹಾಗೂ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇ(2)1025/2024- 25/ಪಿಎಸ್‌ಸಿ ಮತ್ತು ಇ(2)1026/2024-25/ಪಿಎಸ್‌ಸಿ, ದಿನಾಂಕ:22.11.2024ರ ತಿದ್ದುಪಡಿ ಅಧಿಸೂಚನೆಗಳಿಗೆ ಅರ್ಹ ಅಭ್ಯರ್ಥಿಗಳು ದಿನಾಂಕ:25.11.2024 ರಿಂದ 09.12.2024ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದ್ದು, ಸದರಿ ಪ್ರಕಟಣೆಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.
No comments:
Post a Comment
If You Have any Doubts, let me Comment Here