About starting additional English medium sections in schools.
ಪ್ರಸ್ತುತ ನಡೆಯುತ್ತಿರುವ ಕೆ.ಪಿ.ಎಸ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ (ದ್ವಿಭಾಷಾ ಮಾಧ್ಯಮ) ತರಗತಿಗಳ ಜೊತೆಗೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ಪ್ರಾರಂಭಿಸುವ ಬಗ್ಗೆ.
ಉಲ್ಲೇಖ:1. ಈ ಕಛೇರಿ ಪತ್ರ ಸಂಖ್ಯೆ : ಎಡಿಎಂ 2(4)ಹೊ.ಶಾ.ಮ.ವಿ.ಪ್ರಾ. 01/2024
2:30.05.2024
2.ಸರ್ಕಾರದ ಆದೇಶ ಸಂಖ್ಯೆ ಇಪಿ154 ಪಿಜಿಸಿ 2024 ದಿನಾಂಕ:15ನೇ ಅಕ್ಟೋಬರ್ 2024
ವಿಷಯಾನ್ವಯವಾಗಿ ಉಲ್ಲೇಖ-1ರನ್ವಯ ಸರ್ಕಾರಿ ಶಾಲೆಗಳ ಬಲವರ್ಧನೆ ಸಂಬಂಧ ಪ್ರಸ್ತುತ ನಡೆಯುತ್ತಿರುವ 286 ಕೆ.ಪಿ.ಎಸ್ ಶಾಲೆಗಳ ಪೈಕಿ ಮಕ್ಕಳ ದಾಖಲಾತಿ ಹೆಚ್ಚಿರುವ ಕೆಲವು ಆಯ್ಕೆ ಶಾಲೆಗಳಲ್ಲಿ 42 ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ಮತ್ತು 51 ಒಂದನೇ ತರಗತಿ ಶಾಲೆಗಳಲ್ಲಿ ಹಾಲಿ ನಡೆಯುತ್ತಿರುವ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.
ಉಲ್ಲೇಖ-2ರನ್ವಯ ಸರ್ಕಾರವು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಒಟ್ಟು 286 ಕರ್ನಾಟಕ ಪಬ್ಲಿಕ್ ಶಾಲೆಗಳ ಪೈಕಿ ಈ ಆದೇಶದ ಅನುಬಂಧ-1ರಲ್ಲಿನ 42 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿಯಾಗಿ ಎಲ್.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲು ಮತ್ತು ಅನುಬಂಧ- 2ರಲ್ಲಿನ 51 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 1ನೇ ತರಗತಿಯ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿ ವಿಭಾಗವನ್ನು 2024-25ನೇ ಸಾಲಿನಿಂದ ಪ್ರಾರಂಭಿಸಲು ಕೆಳಕಂಡ ಷರತ್ತುಗಳಿಗೊಳಪಟ್ಟು ಸರ್ಕಾರವು ಅನುಮೋದನೆ ನೀಡಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ.
No comments:
Post a Comment
If You Have any Doubts, let me Comment Here