KSET Key Answers 2024
ದಿನಾಂಕ 24.11.2024 ರಂದು ನಡೆಸಿದ ಪರೀಕ್ಷೆಗಳಾದ ಕೆಸೆಟ್-2024 ಮತ್ತು ಸಹಾಯಕ ಪ್ರಾಧ್ಯಾಪಕರು, ರಾಯಚೂರು ವಿಶ್ವವಿದ್ಯಾಲಯ ಇವುಗಳಿಗೆ ಸಂಬಂಧಿಸಿದಂತೆ. ಈ ಕೆಳಕಂಡ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಸದರಿ ಕೀ ಉತ್ತರಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಕೆಇಎ ವೆಬ್‌ಸೈಟ್‌ನಲ್ಲಿ (http://kea.kar.nic.in) ನೀಡಲಾಗಿರುವ ಲಿಂಕ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಪ್ರತಿ ಆಕ್ಷೇಪಣೆಗೆ ರೂ. 100/- ನ್ನು ಆನ್‌ಲೈನ್ ಮೂಲಕ ದಿನಾಂಕ 29.11.2024 ಸಂಜೆ 5.00 ರೊಳಗೆ ಶುಲ್ಕ ಪಾವತಿ ಮಾಡಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಹಾಗೂ ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಉಳಿದ 17 ವಿಷಯಗಳ ಕೀ ಉತ್ತರಗಳನ್ನು ದಿನಾಂಕ 27.11.2024 ರಂದು ಪ್ರಕಟಿಸಲಾಗುವುದು.
ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿಷಯ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್. ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಮೇಲ್ಕಂಡ ನಿಗದಿತ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ತೀರ್ಮಾನಿಸುವ ಕೀ-ಉತ್ತರಗಳು ಅಂತಿಮವಾಗಿರುತ್ತವೆ.
ವಿಷಯವಾರು ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಚಿತ್ರದ ಕೆಳಗೆ ಇರುವ ನಿಮ್ಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here