Regarding the promotion of high school Hindi teachers in the Department of School Education
ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ಹಿಂದಿ ಶಿಕ್ಷಕರ ಬಡ್ತಿ ಕುರಿತು ಜ್ಞಾಪನ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2016ರ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದ ನಂತರ 2003ರ ವೃಂದ ಮತ್ತು ನೇಮಕಾತಿ ನಿಯಮಗಳಡಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢಶಾಲಾ ಹಿಂದಿ ಸಹ ಶಿಕ್ಷಕರಾಗಿ ಹಿಂದಿ ತತ್ಸಮಾನ ಪದವಿ ಮತ್ತು ಬಿ.ಇಡಿ ತತ್ಸಮಾನ ಪಡೆದ ಶಿಕ್ಷಕರುಗಳಿಗೆ ಬಡ್ತಿ ನೀಡಿರುವುದನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 2772/2011 ಮತ್ತು ರಿಟ್ ಅರ್ಜಿ ಸಂಖ್ಯೆ: 69822-69826/2012 ದಿನಾಂಕ: 30.07.2015ರ ಆದೇಶದ ಹಿನ್ನಲೆಯಲ್ಲಿ ಸದರಿ ಬಡ್ತಿಯನ್ನು ಹಿಂಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖ(1) ಮತ್ತು (5)ರಲ್ಲಿ ಸರ್ಕಾರದಿಂದ ಆದೇಶವಾಗಿದ್ದು ಅದರಂತೆ ಕ್ರಮವಹಿಸಲು ಉಲ್ಲೇಖ(2) ರ ಈ ಕಛೇರಿಯ ಜ್ಞಾಪನಗಳಲ್ಲಿ ನಿರ್ದೇಶನ ನೀಡಲಾಗಿರುತ್ತದೆ.
ಉಲ್ಲೇಖ(5)ರ ಸರ್ಕಾರದ ಆದೇಶ ಮತ್ತು ದಿನಾಂಕ: 22.10.2024ರ ಈ ಕಛೇರಿಯ ಜ್ಞಾಪನವನ್ನು ಪ್ರಶ್ನಿಸಿ ಶ್ರೀಉದಯ್ ಮತ್ತಿತರರು ಮಾನ್ಯ ಉಚ್ಚನ್ಯಾಯಾಲಯ, ಬೆಂಗಳೂರು, ಇಲ್ಲಿ ರಿಟ್ ಪೆಟಿಷನ್ ಸಂಖ್ಯೆ: 29160/2024ರಲ್ಲಿ ದಾವೆ ದಾಖಲಿಸಿರುತ್ತಾರೆ.
ಸದರಿ ದಾವೆಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ದಿನಾಂಕ: 30.10.2024ರಂದು ಮಧ್ಯಂತರ ಆದೇಶ ನೀಡಿದ್ದು, ಸದರಿ ಆದೇಶದ ಉದ್ಭತ ಭಾಗ ಈ ಕೆಳಕಂಡಂತಿದೆ.
"Reversion of Petitioners and other similarly circumstanced Hindi teachers who are not parties before this Court is stayed till next date of hearing."
ಈ ಹಿನ್ನಲೆಯಲ್ಲಿ ದಿನಾಂಕ: 22.10.2024ರಂದು ಈ ಕಛೇರಿಯಿಂದ ಹೊರಡಿಸಿರುವ ಜ್ಞಾಪನದ ಅನುಷ್ಠಾನವನ್ನು ಘನ ನ್ಯಾಯಾಲಯದ ಮುಂದಿನ ಆದೇಶದವರೆಗೆ ತಡೆಹಿಡಿಯಲು ತಿಳಿಸಿದೆ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಮೂಲಕ ತಿಳಿಸಿದ್ದಾರೆ.
No comments:
Post a Comment
If You Have any Doubts, let me Comment Here