Kannada Viva Voce Intimation letter for Departmental Exam 2024-I Session
ಆಯೋಗವು 2024 ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಕನ್ನಡ ಭಾಷಾ ವಿಷಯದ (ವಿಷಯ ಸಂಕೇತ:47,72 ಮತ್ತು 73) ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್ ಸೈಟ್ "http://kpsc.kar.nic.in" ನಲ್ಲಿ ಪ್ರಕಟಿಸಿದೆ. ಸದರಿ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನವನ್ನು ದಿನಾಂಕ:21-10-2024 ಮತ್ತು 22-10-2024 ರಂದು ಬೆಂಗಳೂರು, ಕಲಬುರ್ಗಿ, ಬೆಳಗಾವಿ ಕೇಂದ್ರಗಳಲ್ಲಿ ಹಾಗೂ ದಿನಾಂಕ:21-10-2024 ರಂದು ಮೈಸೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ನಡೆಸಲಿದೆ. ಮೌಖಿಕ ಸಂದರ್ಶನ ನಡೆಸಲಾಗುವ ದಿನಾಂಕ, ಸಮಯ ಮತ್ತು ಸ್ಥಳವನ್ನು ಆಯೋಗದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಮೌಖಿಕ ಸಂದರ್ಶನದ ಸೂಚನಾ ಪತ್ರಗಳನ್ನು ದಿನಾಂಕ:16-10-2024 ರಿಂದ ಕೆ.ಪಿ.ಎಸ್.ಸಿ ವೆಬ್ ಸೈಟ್ "http://kpsc.kar.nic.in" ನ ಹೋಂ ಪೇಜ್ ನಲ್ಲಿ Departmental Examination 2024-1 Session ಕ್ಲಿಕ್ ಮಾಡಿ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಹಾಗೆಯೇ Verify button ಅನ್ನು ಕ್ಲಿಕ್ ಮಾಡಿದ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅದರಲ್ಲಿ ನಮೂದಾಗುವ ಓ.ಟಿ.ಪಿ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪುನಃ Verify ಓ.ಟಿ.ಪಿ ಬಟನ್ ಅನ್ನು ಕ್ಲಿಕ್ ಮಾಡಬೇಕು. ತದನಂತರ ಡೌನ್‌ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ ಸೂಚನಾ ಪತ್ರವನ್ನು ಮುದ್ರಿಸಿಕೊಳ್ಳಬಹುದು.
ಸೂಚನಾ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here