Second PUC Model Question Papers 2025
2024-25 ನೇ ಸಾಲಿಗೆ ದ್ವಿತೀಯ ಪಿಯುಸಿ ತರಗತಿಗಳಿಗೆ ಬೋಧಿಸುವ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಕಾಲೇಜು ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ಸೂಚನೆಗಳು.
2024-25 ನೇ ಸಾಲಿಗೆ ದ್ವಿತೀಯ ಪಿಯುಸಿ ತರಗತಿಗಳಿಗೆ ಬೋಧಿಸುವ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪದವಿಪೂರ್ವ ಪಠ್ಯಕ್ರಮ ಬೋಧಿಸುವ ಉಪನ್ಯಾಸಕರುಗಳಿಂದ ತಯಾರಿಸಿ ಮಂಡಳಿಯ ಜಾಲತಾಣದಲ್ಲಿ ಲಭ್ಯಗೊಳಿಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ವಯ ವಿದ್ಯಾರ್ಥಿಗಳನ್ನು ಮುಂಬರುವ ಪರೀಕ್ಷೆಗಳಿಗೆ ಸಜ್ಜುಗೊಳಿಸಿ ಫಲಿತಾಂಶ ಉತ್ತಮಪಡಿಸಲು ಪ್ರಾಂಶುಪಾಲರು/ ಉಪನ್ಯಾಸಕರುಗಳು ಕಾಲೇಜು ಹಂತದಲ್ಲಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
1. ಈ ಹಿಂದೆ ಲಿಖಿತ ಪರೀಕ್ಷೆಗೆ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಉತ್ತರಿಸಲು ಪರೀಕ್ಷೆಯಲ್ಲಿ 3 ಗಂಟೆ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿತ್ತು. ಈಗ ಗರಿಷ್ಠ 70/80 ಅಂಕಗಳ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾಗಿರುವುದರಿಂದ ಲಿಖಿತ ಪರೀಕ್ಷಾ ಅವಧಿಯನ್ನು 3 ಗಂಟೆಗೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವನ್ನು ಹಾಗೂ ಉತ್ತರಿಸಲು 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ.
2 . ಎನ್.ಎಸ್.ಕ್ಯು.ಎಫ್ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯಗಳಲ್ಲಿ 60/40 2. ಅಂಕಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅವಧಿಯನ್ನು ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗಿದೆ.
3. ಪರೀಕ್ಷಾ ದಿನಗಳಂದು ಪರೀಕ್ಷೆಯನ್ನು ಬೆಳಗಿನ ಅವಧಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸುವುದು.
4 . ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಉತ್ತರಿಸಬೇಕಾದ ಗರಿಷ್ಠ ಅಂಕಗಳ ಶೇಕಡ 50 ರಷ್ಟು ಅಂಕಗಳಿಗೆ ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ) ಪ್ರಶ್ನೆ ಪತ್ರಿಕೆಗಳ ಗರಿಷ್ಠ ಅಂಕಗಳು 70 ಇದ್ದು, ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ಪ್ರಶ್ನೆಗಳನ್ನೊಳಗೊಂಡಂತೆ 105 ಅಂಕಗಳಿಗೆ ಪ್ರಶ್ನೆಗಳಿರುತ್ತವೆ. ಹಾಗೆಯೇ ಪ್ರಯೋಗ ರಹಿತ ವಿಷಯಗಳಲ್ಲಿ (NSQF ಮತ್ತು ಹಿಂದುಸ್ತಾನಿ ಸಂಗೀತ ಹೊರತುಪಡಿಸಿ) ಪ್ರಶ್ನೆ ಪತ್ರಿಕೆಗಳಲ್ಲಿ ಗರಿಷ್ಠ ಅಂಕಗಳು 80 ಇದ್ದು, ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ಪ್ರಶ್ನೆಗಳನ್ನೊಳಗೊಂಡಂತೆ 120 ಅಂಕಗಳಿಗೆ ಪ್ರಶ್ನೆಗಳಿರುತ್ತವೆ.
5. ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಯು ಪ್ರತ್ಯೇಕ ನೀಲ ನಕ್ಷೆ (blue print) ಹೊಂದಿದ್ದು, ಈ ನೀಲನಕ್ಷೆಗಳು ಕೊಟ್ಟಿರುವ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ನೀಲನಕ್ಷೆಯು ಒಂದೇ ವಿಷಯದ ಬೇರೆ ಬೇರೆ ಪ್ರಶ್ನೆಪತ್ರಿಕೆಗಳಿಗೆ ಬೇರೆ ಬೇರೆಯಾಗಿರುತ್ತದೆ.
6. ಪ್ರತಿ ವಿಷಯದಲ್ಲೂ ಪ್ರಶ್ನೆಪತ್ರಿಕೆಯನ್ನು ತಯಾರಿಸುವಾಗ ಬೋಧನಾ ಅವಧಿ ಹಾಗೂ ವಿದ್ಯಾರ್ಥಿಗಳ ಅರಿವಿನ ಮಟ್ಟಗಳಿಗೆ (Teaching hour wise and cognitive level wise weightage) ನಿರ್ದಿಷ್ಟ ಅಂಕಗಳನ್ನು ನಿಗದಿಪಡಿಸಿ ಏಕರೂಪತೆಯನ್ನು ತರಲಾಗಿದೆ.
ಎಲ್ಲ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here