Regarding readjustment of posts of guest teachers within the district
2024-25 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾದ ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲೆಯೊಳಗೆ ಮರುಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ.
05:-
1. ಈ ಕಛೇರಿ ಜ್ಞಾಪನ ಪತ್ರ ಸಂಖ್ಯೆ:ಸಿ4(1)ಸ.ಪ್ರೌ.ಶಾ.ಅ.ಶಿ.ನೇ-01/2023-24 ໖:03.06.2024.
2. , DPI-CPI0C3-1(GUES)/1/2024/2- 31376641.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಜ್ಞಾಪನ ಪತ್ರಗಳಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಪ್ರಾಥಮಿಕ ವಿಭಾಗದಲ್ಲಿ 34,192 ಮತ್ತು ಪ್ರೌಢ ವಿಭಾಗದಲ್ಲಿ 8,954 ಅತಿಥಿ ಶಿಕ್ಷಕರ ಹುದ್ದೆಗಳನ್ನು ತಾಲ್ಲೂಕುವಾರು ಹಂಚಿಕೆ ಮಾಡಿ ಆದೇಶಿಸಲಾಗಿತ್ತು.
2024-25 ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಗೊಂಡು ದಿನಾಂಕ:27.08.2024 ರಂದು ಪೂರ್ಣಗೊಳಿಸಿರುವುದರಿಂದ, ಶಿಕ್ಷಕರುಗಳು ಒಂದು ತಾಲ್ಲೂಕು/ಜಿಲ್ಲೆಗಳಿಂದ ಬೇರೆ ತಾಲ್ಲೂಕು/ಜಿಲ್ಲೆಗಳಿಗೆ ವರ್ಗಾವಣೆಯಾಗಿರುವುದರಿಂದ ಕೆಲವು ಜಿಲ್ಲೆಗಳ ತಾಲ್ಲೂಕುಗಳಲ್ಲಿ ಹೆಚ್ಚು ಖಾಲಿ ಹುದ್ದೆಗಳು ಇರುವುದರಿಂದ ಅಂತಹ ಜಿಲ್ಲೆಗಳಲ್ಲಿ ಅವಶ್ಯಕತೆ ಇರುವ ತಾಲ್ಲೂಕಿಗೆ ಅತಿಥಿ ಶಿಕ್ಷಕರನ್ನು ಮರುಹಂಚಿಕೆ ಮಾಡಿದ ನಂತರ ಇನ್ನು ಅತಿಥಿ ಶಿಕ್ಷಕರು ನಿಯಮಾನುಸಾರ ಅವಶ್ಯಕತೆ/ಅಗತ್ಯತೆ ಇದ್ದಲ್ಲಿ ಈ ಕಛೇರಿಗೆ ಅತಿಥಿ ಶಿಕ್ಷಕರ ಹೆಚ್ಚುವರಿ ಬೇಡಿಕೆಯನ್ನು ಪ್ರತ್ಯೇಕವಾಗಿ ಪ್ರಾಥಮಿಕ ವಿಭಾಗದ ಇಮೇಲ್ ವಿಳಾಸ: primarydpi@gmail.com ಗೆ ಹಾಗೂ ಪ್ರೌಢಶಾಲಾ ವಿಭಾಗದ ಇಮೇಲ್ ವಿಳಾಸ: est4cpibng@gmail.com ಗೆ ಸಲ್ಲಿಸುವುದು ತಪ್ಪು ಮಾಹಿತಿ ಸಲ್ಲಿಸಿದ್ದಲ್ಲಿ, ಉಪನಿರ್ದೇಶಕರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
No comments:
Post a Comment
If You Have any Doubts, let me Comment Here