Date: 01.01.2024 Order allotment of posts to promoted Head Teachers of Group-'B' Government High School Head Teachers and equivalent group posts under promotion quota in the department
ದಿನಾಂಕ: 01.01.2024 ರಲ್ಲಿದಂತೆ ವಿಭಾಗದಲ್ಲಿ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಗ್ರೂಪ್-'ಬಿ' ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಹುದ್ದೆಗಳಿಗೆ ಮುಂಬಡ್ತಿ ಹೊಂದಿದ ಮುಖ್ಯ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ.
ಉಲ್ಲೇಖ
: 1) ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗು ತತ್ಸಮಾನ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಮುಂಬಡ್ತಿ ನೀಡುವ ಹಿನ್ನೆಲೆಯಲ್ಲಿ ನಡೆದ ಇಲಾಖಾ ಮುಂಬಡ್ತಿ ಸಭೆ ನಡಾವಳಿ ໖: 01.07.2024
2) ಈ ಕಛೇರಿ ಅಧಿಕೃತ ಜ್ಞಾಪನ ಸಮ ಸಂಖ್ಯೆ ದಿನಾಂಕ: 01/07/2024
3) ಈ ಕಛೇರಿ ಅಧಿಕೃತ ಜ್ಞಾಪನ ಸಮ ಸಂಖ್ಯೆ ದಿನಾಂಕ: 28/08/2024
4) ದಿನಾಂಕ: 12/09/2024ರಂದು ನಡೆದ ಕೌನ್ಸಲಿಂಗನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಂತೆ.
ಉಲ್ಲೇಖ(1)ರ ಇಲಾಖಾ ಮುಂಬಡ್ತಿ ಸಮಿತಿ ಸಭಾ ನಡುವಳಿಯಂತೆ ದಿನಾಂಕ: 01.01.2024 ರಲ್ಲಿದಂತೆ ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಗ್ರೂಪ್-'ಬಿ' ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಹುದ್ದೆಗಳನ್ನು ಗುರುತಿಸಿ ಸ್ಥಳೀಯ ವೃಂದದ 102 ಹಾಗೂ ಉಳಿದ ಮೂಲ ವೃಂದದ 37 ಜನ ಒಟ್ಟು 139 ಹುದ್ದೆಗಳಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಜೇಷ್ಠತೆ ಹಾಗೂ ಪ್ರಚಲಿತ ಮೀಸಲಾತಿ ನಿಯಮಗಳಡಿಯಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ವೇತನ ಶ್ರೇಣಿ ರೂ. 69250-134200 ರಲ್ಲಿ ಕರ್ನಾಟಕ ರಾಜ್ಯ ನಾಗರೀಕ ಸೇವಾ ನಿಯಮಗಳು 1958ರ ನಿಯಮ 42(ಬಿ) ಅನ್ವಯ ಸ್ಥಾನಪನ್ನ ಮುಂಬಡ್ತಿ ನೀಡಲು ಉಲ್ಲೇಖ (1) ರನ್ವಯ ತೀರ್ಮಾನಿಸಿದೆ
ಅದರಂತೆ ಉಲ್ಲೇಖ(02) ರನ್ನಯ ಸ್ಥಳೀಯ ವೃಂದದ 102 ಹಾಗೂ ಉಳಿದ ಮೂಲ ವೃಂದದ 37 ಜನ ಒಟ್ಟು 139 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಮುಂಬಡ್ತಿ ನೀಡಿ ಆದೇಶಿಸುತ್ತಾ, ಪ್ರಸ್ತುತ ನಿಯಮ-32ರಡಿ ಮುಖ್ಯ ಶಿಕ್ಷಕರ ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರತ 47 ಜನ ಮುಖ್ಯಶಿಕ್ಷಕರನ್ನು ಅದೇ ಸ್ಥಳದಲ್ಲಿ ಮುಂದುವರೆಸಿ, ಮಿಕ್ಕುಳಿದವರಿಂದ ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 4(ಎ) ಅನ್ವಯ ಮುಂಬಡ್ತಿಯನ್ನು ಮುಂದೂಡಲು / ನಿರಾಕರಿಸಲು ಇಚ್ಚಿಸಿದಲ್ಲಿ ಲಿಖಿತ ಮನವಿ ಸಲ್ಲಿಸಲು 15 ದಿವಸಗಳ ಕಾಲಾವಕಾಶ (15/07/2024 ದಿನಾಂಕದವರೆಗೆ) ನೀಡಲಾಗಿತ್ತು. ಅದರಂತೆ ಸ್ಥಳೀಯ ವೃಂದದ 03 ಹಾಗೂ ಉಳಿದ ಮೂಲ ವೃಂದದ 03 ಒಟ್ಟು 06 ಜನ ನೌಕರರು ಮುಂಬಡ್ತಿಯನ್ನು ಮುಂದೂಡಲು / ನಿರಾಕರಿಸಿ ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಿ ಅಂಗೀಕರಿಸಿ ಉಲ್ಲೇಖ (03) ರನ್ವಯ ಮುಂಬಡ್ತಿಯನ್ನು ಮುಂದೂಡಲು ಅನುಮತಿಸಲಾಗಿದೆ..
ಮುಂದುವರೆದು ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಹೊಂದಿದ ಶಿಕ್ಷಕರಿಗೆ ದಿನಾಂಕ: 12/09/2024 ರಂದು ಸ್ಥಳ ಆಯ್ಕೆಗಾಗಿ ನಡೆಸಲಾದ ಕೌನ್ಸಿಲಿಂಗನಲ್ಲಿ ಸ್ವ-ಇಚ್ಛೆಯಿಂದ ಆಯ್ಕೆ ಮಾಡಿಕೊಂಡಿರುವ ಗ್ರೂಪ್-ಬಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಹುದ್ದೆಗಳಿಗೆ ಅನುಬಂಧ-1 ರಲ್ಲಿ ಸ್ಥಳೀಯ ವೃಂದದ 52 ಶಿಕ್ಷಕರಿಗೆ ಹಾಗೂ ಅನುಬಂಧ-2 ರಲ್ಲಿ ಉಳಿದ ಮೂಲ ವೃಂದದ 34 ಶಿಕ್ಷಕರಿಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
No comments:
Post a Comment
If You Have any Doubts, let me Comment Here