Revision of scales of pay and other related orders
ರಾಜ್ಯ ಸರ್ಕಾರಿ ನೌಕರರಿ ಭರ್ಜರಿ ಸಿಹಿಸುದ್ದಿ ಎನ್ನುವಂತೆ ಸರ್ಕಾರದಿಂದ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಶ್ರೇಣಿಗಳನ್ನು ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ ಇತರೆ ಸಂಬಂಧಿತ ಆದೇಶಗಳನ್ನು ಹೊರಡಿಸಲಾಗಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ರೇಜು ಎಂ.ಟಿ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿರಾಜ್ಯ ಸರ್ಕಾರದ ನೀತಿಯಂತೆ, 7ನೇ ರಾಜ್ಯ ವೇತನ ಆಯೋಗದ ಸಂಪುಟ I ರಲ್ಲಿನ ಶಿಫಾರಸ್ಸುಗಳನ್ನು ಮೇಲೆ (1) ರಲ್ಲಿ ಓದಲಾದ ದಿನಾಂಕ 22.07.2024ರ ಸರ್ಕಾರಿ ಆದೇಶದಲ್ಲಿ ನಮೂದಿಸಿರುವಂತೆ ಅಂಗೀಕರಿಸಲಾಗಿರುತ್ತದೆ. ಅದರಂತೆ, ಸದರಿ ಆದೇಶದಲ್ಲಿ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು 25 ಪರಿಷ್ಕೃತ ಸ್ಥಾಯಿ ವೇತನ ಶ್ರೇಣಿಗಳನ್ನು, ವೇತನ ಸಂಬಂಧಿತ ಭತ್ಯೆಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ ಎಂದಿದ್ದಾರೆ.
ದಿನಾಂಕ 17.08.2024ರ ಅಧಿಸೂಚನೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ನ್ನು ಅಧಿಸೂಚಿಸಲಾಗಿರುತ್ತದೆ. ಆದುದರಿಂದ, ಪರಿಷ್ಕೃತ ತ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸುವ, ಪಿಂಚಣಿ ಪರಿಷ್ಕರಣೆ ಮತ್ತು ವೇತನ ಸಂಬಂಧಿತ ಭತ್ಯೆಗಳ ಪರಿಷ್ಕರಣೆ ಕುರಿತಂತೆ ವಿಸ್ತೃತವಾದ ಆದೇಶಗಳನ್ನು ಹೊರಡಿಸುವುದು ಅಗತ್ಯವೆಂದು ಪರಿಗಣಿಸಲಾಗಿರುತ್ತದೆ. ಅದರಂತೆ, ರಾಜ್ಯ ಸರ್ಕಾರವು ಈ ಕೆಳಕಂಡ ಆದೇಶಗಳನ್ನು ಹೊರಡಿಸಲು ಹರ್ಷಿಸುತ್ತದೆ ಎಂದು ಹೇಳಿದೆ.
ಹೀಗಿದೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು
No comments:
Post a Comment
If You Have any Doubts, let me Comment Here