JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, August 24, 2024

Huilgol Narayana Rao Information in Kannada

  Jnyanabhandar       Saturday, August 24, 2024
Huilgol Narayana Rao

Huilgol Narayana Rao was a popular Indian playwright in the modern Kannada literature and a freedom fighter.

'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ನಾಡಗೀತೆಯಿಂದ ನಾಡಿನ ಉದ್ದಗಲಕ್ಕೂ ಖ್ಯಾತವಾಗಿರುವ ಹುಯಿಲಗೋಳ ನಾರಾಯಣ ರಾಯರು ಕನ್ನಡದಲ್ಲಿ ಅನೇಕ ಕವನಗಳನ್ನು ಭಕ್ತಿಗೀತೆಗಳನ್ನು ನಾಟಕಗಳನ್ನು ಕತೆ ಕಾದಂಬರಿಗಳನ್ನು ಬರೆದಿರುವ ಪ್ರಸಿದ್ಧ ಸಾಹಿತಿ.

ಅವರ ಹುಟ್ಟೂರು ಗದಗದಲ್ಲಿ ಆರಂಭದ ಶಿಕ್ಷಣವನ್ನು ಪಡೆದ ರಾಯರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಆರ್ಟ್ಸ್ ಪದವಿಯನ್ನು, ಪುಣೆಯ ಲಾ ಕಾಲೇಜಿನಲ್ಲಿ ಲಾ ಪದವಿಯನ್ನು ಪಡೆದುಕೊಂಡರು.

ಗದಗದಲ್ಲಿ ವಕೀಲ ವೃತ್ತಿ ಆರಂಭಿಸಿದ. ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

1924ರಲ್ಲಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಇವರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಅಂದು ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಹಾಡಿದ್ದರು. ನಂತರ ಕರ್ನಾಟಕ ಏಕೀಕರಣವಾಗುವವರೆಗೂ ಈ ಗೀತೆ ಕನ್ನಡಿಗರ ನಾಡಗೀತೆಯಾಗಿ ಕನ್ನಡದ ಎಲ್ಲಾ ಸಭೆ ಸಮಾರಂಭಗಳಲ್ಲಿಯೂ ಹಾಡಲಾಗುತ್ತಿತ್ತು. గాయ ಕಾಳಿಂಗರಾಯರು, ಕನ್ನಡ ನಾಡಿನ ಪ್ರಕೃತಿ ಸಂಪತ್ತು-ಸಾಹಿತ್ಯ ಕಲೆಗಳ ಸಿರಿ ಎಲ್ಲವನ್ನು ನೆನಪಿಸಿ ನಾಡಿನ ಬಗ್ಗೆ ಅಭಿಮಾನ ಉಕ್ಕಿಸುವ ಈ ಗೀತೆಯನ್ನು ನಾಡಿನ ಉದ್ದಗಲಕ್ಕೂ ಜನಪ್ರಿಯಗೊಳಿಸಿದರು. ಹುಯಿಲಗೋಳು ನಾರಾಯಣ ರಾಯರು ನವೋದಯ ಪೂರ್ವದ ಶ್ರೇಷ್ಠ ಕವಿ ಹಾಗೂ ನಾಟಕಕಾರರಾಗಿದ್ದರು. ಹಲವಾರು ದೇವರ ನಾಮಗಳು, ದೀರ್ಘ ಕಥನ ಕವನಗಳು, ನಾಲೈದು ನೂರು ರಂಗಗೀತೆಗಳು, ಹಾಗೂ ಸ್ವಾಗತಗೀತೆಗಳನ್ನು ರಚಿಸಿದ್ದಾರೆ.

ಅಂದಿನ ಕಾಲದ ಪ್ರಭಾತ, ವಾಗ್ಯೂಷಣ, ಸಚಿತ್ರ ಭಾರತಿ, ಸಾಹಿತ್ಯ ಪರಿಷತ್ಪತ್ರಿಕೆ, ಕರ್ನಾಟಕ ಬಂಧು ಮೊದಲಾದ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿದ್ದವು.

ನಾಟಕ ರಚನೆಯಲ್ಲಿಯೂ ಆಸಕ್ತಿ ಹೊಂದಿದ್ದ ಅವರು 13 ನಾಟಕಗಳನ್ನು ಬರೆದಿದ್ದರಲ್ಲದೆ ಅವುಗಳನ್ನು ತಾವೇ ನಿರ್ದೆಶಿಸಿ, ಗದಗಿನ ಯಂಗ್‌ಮೆನ್ಸ್ ಫುಟ್‌ಬಾಲ್ ಕ್ಲಬ್ ಅಸೋಸಿಯೇಷನ್ ತಂಡದ ನಟರ ಮೂಲಕ ರಂಗದ ಮೇಲೆ ಪ್ರದರ್ಶಿಸುತ್ತಿದ್ದರು. ಈ ನಾಟಕ ಪ್ರದರ್ಶನಗಳಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಸಾಮಾಜಿಕ ಕಾರಕ್ಕಾಗಿ ಉಪಯೋಗಿಸುತ್ತಿದ್ದರು.

ಕನ್ನಡ ನಾಟಕ ರಂಗಕ್ಕೆ ನಾರಾಯಣರಾಯರ ಕೊಡುಗೆ ವಿಶಿಷ್ಟವಾದುದು. ಅವರು ಸ್ವತಃ ನಾಟಕಕಾರರು ಅಲ್ಲದೆ ನಟರೂ ಆಗಿದ್ದರು. ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳ ಪ್ರಾಬಲ್ಯವಿದ್ದ ಕಾಲದಲ್ಲಿ ಕನ್ನಡ ನಾಟಕವನ್ನು ಪ್ರದರ್ಶಿಸಿದರು. ಪೌರಾಣಿಕ ನಾಟಕಗಳಿಗೆ ಪ್ರಾಧಾನ್ಯತೆ ಇದ್ದ ಆ ಸಮಯದಲ್ಲಿ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿದ್ದು ಅವರ ಪ್ರಗತಿಪರತೆಯ

ದ್ಯೋತಕವಾಗಿತ್ತು.

ಅವರು ರಚಿಸಿದ್ದ 'ಪತಿತೋದ್ಧಾರ' ನಾಟಕಕ್ಕೆ 1954ರಲ್ಲಿ ಮುಂಬಯಿ ಸರ್ಕಾರದ ಪ್ರಶಸ್ತಿ ದೊರೆತಿತ್ತು. 1956 ನವೆಂಬರ್ ಒಂದರಂದು ಅಂದಿನ ರಾಜ್ಯಪಾಲರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್‌ರವರು ಸನ್ಮಾನಿಸಿ ಗೌರವಿಸಿದರು.



logoblog

Thanks for reading Huilgol Narayana Rao Information in Kannada

Previous
« Prev Post

No comments:

Post a Comment

If You Have any Doubts, let me Comment Here