Panje Mangesharay
ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯತಾವೇ.
'ಎಲ್ಲಿ ಭೂರಮೆ ದೇವಸನ್ನಿದಿ ಬಯಸಿ ಬಿಮ್ಮನೆ ಬಂದಳೋ' ಎಂಬ ಕವನಗಳಿಂದ ಸದಾ ಕನ್ನಡಿಗರ ಮನದಲ್ಲಿ ಸ್ಥಾಪಿತವಾಗಿರುವ ಪಂಜೆಮಂಗೇಶ ರಾಯರು 1896ರಲ್ಲಿ ಬಿ.ಎ. ಪದವಿ ಪಡೆದ ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ವಿದ್ಯಾ ಇಲಾಖೆಯಲ್ಲಿಯೇ ಹಲವಾರು ಪದವಿಗಳಲ್ಲಿ ಕೆಲಸಮಾಡಿ 1929ರಲ್ಲಿ ನಿವೃತ್ತಿಗೊಂಡರು. ಇವರು ಹೆಸರಾಂತ ಕವಿ ಮುದ್ದಣನ ಸಹಪಾಠಿಗಳಾಗಿದ್ದರು.
ಶಿಶು ಸಾಹಿತ್ಯ ರಚನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪಂಜೆಯವರು ಮಕ್ಕಳಿಗಾಗಿಯೇ ವಿಶೇಷವಾಗಿ ಆ ಸಾಹಿತ್ಯವನ್ನು ರಚಿಸಿದರು. ಮಕ್ಕಳ ಸಾಹಿತ್ಯದ ಏಳಿಗೆಗಾಗಿ ಬಾಲ ಸಾಹಿತ್ಯ ಮಂಡಲವೆಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆಚಾರ್ಯ ಬಿ.ಎಂ.ಶ್ರೀ. ಅವರೊಡಗೂಡಿ ಮೈಸೂರು ವಿಶ್ವವಿದ್ಯಾಲಯಕ್ಕಾಗಿ 'ಜೈಮಿನಿ ಭಾರತ'ವನ್ನು ಸಂಪಾದಿಸಿದರು.
ಗದ್ಯ-ಪದ್ಯಗಳ ರಚನೆಯಲ್ಲಿ ಸಿದ್ಧ ಹಸ್ತರಾದ ಅವರು ತಮ್ಮದೇ ಆದ ಶೈಲಿಯಲ್ಲಿ, ನಿರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದರು.
ಅಜ್ಜಿಯ ಕಥೆಗಳು, ಕೋಟಿ ಚೆನ್ನಯ್ಯ, ಹುತ್ತರಿ ಹಾಡು ನನ್ನ ಚಿಕ್ಕ ತಂದೆ, ನನ್ನ ಚಿಕ್ಕ ತಾಯಿ (ಕಥೆಗಳು) ವೈದ್ಯರ ಒಗ್ಗರಣೆ (ಹಾಸ್ಯದ ಕಥೆ) ಮರಳಿ ಸೀತಮ್ಮನ ಕರೆಯಪ್ಪ, ಉತ್ತಮ ರಾಜ್ಯ (ಅನುವಾದಿತ ಕವಿತೆಗಳು) ಶಬ್ದಮಣಿ ದರ್ಪಣ (ಸಂಪಾದನಾಕೃತಿ) ಮುಂತಾದವು ರಚನೆಗಳಲ್ಲಿ ಸೇರಿವೆ.
ನಾಗರಹಾವೇ, ಹಾವೊಳು ಹೂವೆ, ತೆಂಕಣ ಗಾಳಿಯಾಟ ಶ್ರೇಷ್ಠ ಮಕ್ಕಳ ಗೀತೆಗಳಾಗಿ ಇಂದಿಗೂ ಉಳಿದಿವೆ.
ಕವಿಶಿಷ್ಯ, ರಾಮಪಲ, ಹರಟೆಮಲ್ಲ ಎಂದೇ ಪ್ರಸಿದ್ಧರಾಗಿರುವ ಪಂಜೆ ಮಂಗೇಶರಾಯರು ಡಿಸೆಂಬರ್ 1934ರಲ್ಲಿ ರಾಯಚೂರಿನಲ್ಲಿ ನಡೆದ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
"ನನ್ನ ಅವಸಾನ ಕಾಲದಲ್ಲಿ ಬಾಯಿಂದ ಕೃಷ್ಣ ಕೃಷ್ಣ ಎಂಬ ಮಾತು ಹೊರಡುವಂತೆ ಕನ್ನಡ ಕನ್ನಡ ಎಂಬ ಮಾತೂ ಉಚ್ಚಾರಣೆಯಾಗಲಿ"
ಪಂಜೆ ಮಂಗೇಶರಾವ್
No comments:
Post a Comment
If You Have any Doubts, let me Comment Here