B.M. Srikantaiah information in kannada
"ಕನ್ನಡದ ಕಣ್ವ" ಎಂದೇ ಖ್ಯಾತರಾದವರು ಜಿ.ಎಂ.ಶ್ರೀ -ಬೆಳ್ಳೂರು ಮೈಲಾರಯ್ಯ ಶ್ರೀ ಕಂಠಯ್ಯನವರು. ಹೊಸಗನ್ನಡದ ಆಚಾರ ಪುರುಷರಾದ ಇವರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಮದ್ರಾಸ್‌ನಲ್ಲಿ ಎಂ.ಎ. ಜಿ.ಎಲ್ ಪದವಿ ಪಡೆದರು.
1909ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆಯನ್ನು ಆರಂಭಿಸಿದ ಶ್ರೀಕಂಠಯ್ಯನವರು ವಿವಿಧ ಹುದ್ದೆಗಳಲ್ಲಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದರು.
1938 ರಿಂದ 1942ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ರಾಗಿದ್ದರು. ಪರಿಷತ್ತಿನ ಮಹಿಳಾ ಶಾಖೆಯನ್ನು ಆರಂಭಿಸಿದ್ದು, ಪರಿಷತ್ತಿನ ಲಾಂಛನ ರೂಪಿಸಿದ್ದು, ಕನ್ನಡ ನುಡಿ ಪತ್ರಿಕೆಯನ್ನು ಆರಂಭಿಸಿದ್ದು ಇವರು ಪರಿಷತ್ತಿಗೆ ನೀಡಿದ ಮಹತ್ತರ ಕೊಡುಗೆಗಳು ಪರಿಷತ್ತಿನ ಪ್ರಕಟಣೆಗಳನ್ನು ಮುದ್ರಿಸಲು ಅದರದೇ ಆದ ಮುದ್ರಣಾಲಯದ ಅಗತ್ಯತೆಯನ್ನು ಕಂಡ ಅವರು ತಮ್ಮ ದುಡಿಮೆಯ ಆರು ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು. ಅಂದು ಅವರು ಸ್ಥಾಪಿಸಿದ, ಅಚ್ಚುಕೂಟಕ್ಕೆ ಬಿ.ಎಂ.ಶ್ರೀ. ಅಚ್ಚುಕೂಟ ಎಂದೇ ಹೆಸರಿಡಲಾಗಿದೆ.
1928ರಲ್ಲಿ ಗುಲ್ಬರ್ಗಾದಲ್ಲಿ ನಡೆದ 14ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಬಿ.ಎಂ.ಶ್ರೀಯವರು ಇಂಗ್ಲೀಷ್ ಸಾಹಿತ್ಯಕ್ಕೆ ಮನಸೋತಿದ್ದರು. ಕನ್ನಡ ಚಳುವಳಿಗೆ ಬೀಜ ಬಿತ್ತಿದ್ದವರೇ ಅವರೆಂದನ್ನಬಹುದು. ಮೈಸೂರಿನ ಅಗ್ರಹಾರ ರಸ್ತೆಯಲ್ಲಿ ಜಾಗಟೆ ಹೊಡೆದುಕೊಂಡು 'ಕನ್ನಡಕ್ಕೆ ಜಯವಾಗಲಿ' ಎಂದು ಕೂಗಿಕೊಂಡು ಹೋಗುತ್ತಿದ್ದುದೇ ಕನ್ನಡ ಚಳುವಳಿಯ ಪ್ರಾರಂಭ ಎಂದು ಪರಿಗಣಿಸಲಾಗಿದೆ.
ಮೈಸೂರಿನಲ್ಲಿ ಅವರು ಕಾಸಿನ ಸಂಘ ಎಂದು ಸ್ಥಾಪಿಸಿದರು. ಈ ಸಂಘದ ವಿಶೇಷತೆ ಎಂದರೆ ಸಂಘದ ಸದಸ್ಯರು ಮಾತನಾಡುವಾಗ ಇಂಗ್ಲೀಷ್ ಬಳಸುವಂತಿರಲಿಲ್ಲ. ಅಕಸ್ಮಾತ್ ಬಳಸಿದರೆ ಒಂದು ಇಂಗ್ಲೀಷ್ ಶಬ್ದಕ್ಕೆ ಒಂದು ಕಾಸು ದಂಡ ತೆರಬೇಕಾಗುತ್ತಿತ್ತು.
ಶ್ರೀಕಂಠಯ್ಯನವರು ಕನ್ನಡದಲ್ಲಿ ಬರೆದಿದ್ದಕ್ಕಿಂತ ಕನ್ನಡದ ಪ್ರಚಾರಕ್ಕಾಗಿ ದುಡಿದಿದ್ದೇ ಹೆಚ್ಚು. ಆದರೆ ಬರೆದದ್ದೇ ಕಡಿಮೆಯಾದರೂ ಗುಣಮಟ್ಟದಲ್ಲಿ ಶ್ರೇಷ್ಠ.
ಆಂಗ್ಲ ಕವಿತೆಗಳ ಭಾಷಾಂತರವಾದ 'ಇಂಗ್ಲೀಷ್ ಗೀತೆಗಳು', 'ಕನ್ನಡ ಬಾವುಟ', 'ಹೊಂಗನಸುಗಳು', 'ಕನ್ನಡ ಸಾಹಿತ್ಯ ಚರಿತೆ', 'ಗದಾಯುದ್ಧ', 'ಅಶ್ವತ್ಥಾಮನ್' ಇವರ ಪ್ರಮುಖ ಕೃತಿಗಳು.
ಸಿರಿಗನ್ನಡಂ ಗೆಲ್ಲೆ ಬಾಳೆ ಕನ್ನಡ ನಾಡಿಗೆ ಕನ್ನಡವೇ ಗತಿ
ಅನ್ಯಥಾ ಶರಣಂ ನಾಸ್ತಿ, ಸಂಸ್ಕೃತವಲ್ಲ, ಇಂಗ್ಲೀಷ್ ಅಲ್ಲ, ಹಿಂದಿಯಲ್ಲ.
No comments:
Post a Comment
If You Have any Doubts, let me Comment Here