Regarding General Transfer of Government High School Headmasters/Equal Circle for the year 2023-24
2023-24 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಸಾಮಾನ್ಯ ವರ್ಗಾವಣೆ ಕುರಿತು.
ಉಲ್ಲೇಖ: ಈ ಕಛೇರಿ ಅಧಿಸೂಚನೆ ಸಂಖ್ಯೆ: ಸಿ3(7) ಪ್ರಾ.ಪ್ರೌ.ಶಾ.ಶಿ ಸಾಮಾನ್ಯ ವರ್ಗಾವಣೆ/01/2023-24
໖: 15-06-2024
ವಿಷಯದನ್ವಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಉಲ್ಲೇಖಿತ ವೇಳಾಪಟ್ಟಿಯಂತೆ ಹಮ್ಮಿಕೊಳ್ಳಲಾಗುತ್ತಿದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ನೀಡಿದ ಮಾಹಿತಿಯನ್ವಯ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗಿರುವಂತೆ ಕೌನ್ಸಿಲಿಂಗ್‌ಗೆ ಆದ್ಯತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಉಲ್ಲೇಖಿತ ಅಧಿಸೂಚನೆಯಲ್ಲಿನ ವೇಳಾಪಟ್ಟಿಯಂತೆ ಆಯಾ ಜಿಲ್ಲೆಯ ಉಪನಿರ್ದೇಶಕರ ಕಛೇರಿಯಲ್ಲಿಯೇ ಗಣಕೀಕೃತ ಕೌನ್ಸಿಲಿಂಗ್ ಅನ್ನು ನಡೆಸಲಾಗುವುದು. ವಿಭಾಗದೊಳಗಿನ ವರ್ಗಾವಣೆಯಲ್ಲಿ ಆಯಾ ವಿಭಾಗದೊಳಗಿನ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಅಂತರವಿಭಾಗೀಯ ವರ್ಗಾವಣೆಯಲ್ಲಿ ಆಯಾ ವಿಭಾಗವನ್ನು ಹೊರತುಪಡಿಸಿ ಕೋರಿರುವ ಅಂತರ್ ವಿಭಾಗಗಳ ಖಾಲಿ ಹುದ್ದೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ಬಗ್ಗೆ ಪ್ರೋಗ್ರಾಮರ್‌ಗಳೊಂದಿಗೆ ಹಾಜರಿದ್ದು ಯಾವುದೇ ಲೋಪಗಳಾಗದಂತೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದ ಎಲ್ಲಾ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ ಸಮರ್ಪಕವಾಗಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here