Information about National Junk Food Day 2024 and Hadapad Appanna Jayanti
*ಜುಲೈ 21-ರಾಷ್ಟ್ರೀಯ ಜಂಕ್ ಫುಡ್ ದಿನ(National Junk food Day):*
*"ಆರೋಗ್ಯಕರ ಮಣ್ಣು ಇಲ್ಲದೆ ನೀವು ಆರೋಗ್ಯಕರ ನಾಗರಿಕತೆಯನ್ನು ಹೊಂದಲುಸಾಧ್ಯವಿಲ್ಲ.ಹಾಗೆಯೇ ನೀವು ಜಂಕ್ ಫುಡ್ ಸೇವನೆಯಿಂದ ಆರೋಗ್ಯಕರ ಜನರನ್ನು ಹೊಂದಲು ಸಾಧ್ಯವಿಲ್ಲ" ಎಂದು ಜೋಯಲ್ ಸಲಾಟಿನ್ ಹೇಳಿದ ಹಾಗೆ ಪ್ರಪಂಚದಲ್ಲಿ ಮಕ್ಕಳಿಂದ ಹಿಡಿದು ಯುವಕರಿಗೆ ಅಚ್ಚುಮೆಚ್ಚಿನ ಆಹಾರ ಎಂದರೆ ಫಾಸ್ಟ್ ಫುಡ್ ಎಂದೂ ಕರೆಯಲ್ಪಡುವ ಜಂಕ್ ಫುಡ್ ಆಗಿದೆ.* *ಈ ಆಹಾರ ಸೇವನೆಯಿಂದ ಭೂಮಿ ಮೇಲೆ ಆರೋಗ್ಯಕರ ಜನರನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಜಂಕ್ ಫುಡ್ ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಸರೇ ಸೂಚಿಸುವಂತೆ, ಜಂಕ್ ಫುಡ್ ಎಲ್ಲಾ ಅಲ್ಟ್ರಾ-ಸಂಸ್ಕರಿಸಿದ ಮತ್ತು ಅನಾರೋಗ್ಯಕರ ಆಹಾರಗಳನ್ನು ಒಳಗೊಂಡಿರುತ್ತದೆ.ಅತಿಯಾದ ಕೊಬ್ಬಿನಂಶ, ಸಕ್ಕರೆ, ಉಪ್ಪು ಮತ್ತು ಕ್ಯಾಲೋರಿ ಇರುವ ಪದಾರ್ಥಗಳನ್ನು ಜಂಕ್ ಫುಡ್ ಎನ್ನಲಾಗುತ್ತದೆ.* *ಜಂಕ್ಫುಡ್ಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಇಂಥ ಆಹಾರಗಳನ್ನು ಪ್ರತಿದಿನ ತಿನ್ನಲು ಆಗುವುದಿಲ್ಲ. ಹಾಗಾಗಿ ಜಂಕ್ಫುಡ್ಗಳನ್ನು ಅತಿಯಾಗಿ ಇಷ್ಟಪಡುವ ಜನರಿಗಾಗಿಯೇ ಜಂಕ್ ಫುಡ್ "ದಿನವನ್ನು ಮೀಸಲಿಡಲಾಗಿದೆ. ಪ್ರತಿವರ್ಷ ಜುಲೈ 21ರಂದು ಅಮೆರಿಕ ಮತ್ತು ಇತರ ದೇಶಗಳಲ್ಲಿ ಜಂಕ್ ಫುಡ್ ದಿನವನ್ನು ಆಚರಿಸಲಾಗುತ್ತದೆ.*
*
#National Junk food Day
*ಜುಲೈ 21-ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ(ಆಷಾಢ ಹುಣ್ಣಿಮೆ/ಕಡ್ಲಿಗಾರ ಹುಣ್ಣಿಮೆ):*
*ಹನ್ನೆರಡನೆಯ ಶತಮಾನದ ವಚನ ಚಳುವಳಿ. ಈ ಶತಮಾನವು ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ, ಭಕ್ತಿ ಯುಗ, ವೈಚಾರಿಕತೆಯ ಯುಗ, ಸಮಾನತೆ ಸೌಹಾರ್ದತೆಯ ಕಂಡ ಯುಗ, ಅದುವೇ ಬಸವ ಮಹಾ ಯುಗ. ಈ ಬಸವ ಯುಗದ ಉತ್ಸಾಹಿ ಶಿವಶರಣರಲ್ಲಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ "ಹಡಪದ ಅಪ್ಪಣ್ಣ" ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು.*
* *#ಜನನ ಮತ್ತು ಹಿನ್ನೆಲೆ:*
*ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ- ದೇವಕಮ್ಮನವರ ಮಗ. ದೇಗಿನಾಳ ಗ್ರಾಮದ ಜೀರ ನಾಗಪ್ಪ- ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಇವರ ಪತ್ನಿ. ಇವರ ಕಾಲವನ್ನು ಕ್ರಿ.ಶ 1160 ರಂದು ಜನಿಸಿದ್ದಾರೆ ಎಂಬ ಪ್ರತೀತಿ ಇದೆ.ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಅವರ ಪತ್ನಿ ಲಿಂಗಮ್ಮ ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ.*
*ಒಟ್ಟಾರೆಯಾಗಿ ಜಾತಿ, ವರ್ಣ, ವರ್ಗ, ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಸಮಾಜ ನಿರ್ವಿುಸಿದರು.ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ.ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿರುತ್ತಾರೆ. ಇವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.*
No comments:
Post a Comment
If You Have any Doubts, let me Comment Here