Department of Education circular to enter the purchase of shoes-socks for the academic year 2024-25 in the software.
ಎಲ್ಲಾ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶೂ-ಸಾಕ್ಸ್ ಖರೀದಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 01 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಸಾಕ್ಸ್ ನೀಡಲು ಅನುದಾನವನ್ನು ಉಲ್ಲೇಖ 1003 ದಿನಾಂಕ: 06.06.2024ರಂದು ಬಿಡುಗಡೆಗೊಳಿಸಿದ್ದು, ಖರೀದಿ ಪ್ರಕ್ರಿಯೆಯ ಬಗ್ಗೆ ಉಲ್ಲೇಖ 2ರಲ್ಲಿ ದಿನಾಂಕ: 29.05.2024ರಂದು ಸುತ್ತೋಲೆಯನ್ನು ಈ ಕಛೇರಿಯಿಂದ ಹೊರಡಿಸಿ ನಿರ್ದೇಶನ ನೀಡಲಾಗಿದೆ.
“SHOE SOCKS PROGRAM 2024-25” ಎಂಬ ಶೀರ್ಷಿಕೆಯಡಿಯಲ್ಲಿ Google Spread sheet ಅನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಇ-ಮೇಲ್ ಮುಖಾಂತರ ಕಳುಹಿಸಲಾಗಿದೆ. ಈ ಕುರಿತು ಕೂಡಲೇ ಕ್ರಮವಹಿಸಿ ಮಾಹಿತಿ ನಮೂದಿಸುವುದು. ಶಾಲಾ ಮುಖ್ಯಶಿಕ್ಷಕರು ಶೂ ಮತ್ತು ಸಾಕ್ಸ್ ಖರೀಧಿ ಮಾಡಿದ ವಿವರಗಳನ್ನು ಇಲಾಖಾ ತಂತ್ರಾಂಶ https://sdcedn.karnataka.gov.in Flowchart ನ್ನು ಅನುಸರಿಸಲು ಸೂಚಿಸಿದೆ. ಶಾಲಾ ಮುಖ್ಯಶಿಕ್ಷಕರು ವಿಳಂಬ ಮಾಡದೇ ಕೂಡಲೇ ಕ್ರಮವಹಿಸುವುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
No comments:
Post a Comment
If You Have any Doubts, let me Comment Here