Minister Answer Regarding PU Lecturer Recruitment
ಉಪನ್ಯಾಸಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವಂತ 814 ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!!
⚫ ಈಗಾಗಲೇ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮೋದನೆ ದೊರೆತಿದೆ.! ಮುಂದುವರೆದು 27-06-2024 ರಂದು 3,049 ಉಪನ್ಯಾಸಕರ ಹುದ್ದೆಗಳಿಗೆ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಡತವು ಪರಿಶೀಲನೆಯಲ್ಲಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೊರತೆ, ಖಾಲಿ ಇರುವ ವಿವಿಧ ವಿಷಯಗಳ ನೇರ ನೇಮಕಾತಿ ಕೋಟಾದಡಿ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ ಅಂತ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟಾರೆ 4259 ಉಪನ್ಯಾಸಕರ ಕೊರತೆ ಇದೆ. ಆದರೇ ಅವುಗಳಲ್ಲಿ ಈಗ ಸರ್ಕಾರವು 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದೆ ಎಂದರು.
ಯಾವ ಯಾವ ವಿಷಯದ ಉಪನ್ಯಾಸಕರ ಎಷ್ಟು ಹುದ್ದೆ ಭರ್ತಿ?
ಕನ್ನಡ ಉಪನ್ಯಾಸಕರು - 105 ಹುದ್ದೆ
ಇಂಗ್ಲೀಷ್ ಉಪನ್ಯಾಸಕರು - 125 ಹುದ್ದೆ
ಇತಿಹಾಸ - 124 ಹುದ್ದೆಗಳು
ಅರ್ಥಶಾಸ್ತ್ರ - 184 ಹುದ್ದೆ
ಭೂಗೋಳಶಾಸ್ತ್ರ - 20
ವಾಣಿಜ್ಯ ಶಾಸ್ತ್ರ - 100 ಹುದ್ದೆಗಳು
ಸಮಾಜಶಾಸ್ತ್ರ ಉಪನ್ಯಾಸಕರು - 79 ಹುದ್ದೆ
ರಾಜ್ಯಶಾಸ್ತ್ರ - 79
ಮನಃಶಾಸ್ತ್ರ ಉಪನ್ಯಾಸಕರು - 02
ಗಣಕ ವಿಜ್ಞಾನ ಉಪನ್ಯಾಸಕರು - 06 ಹುದ್ದೆ.
ಒಟ್ಟು ಕಲ್ಯಾಣ ಕರ್ನಾಟಕ ಭಾಗದ 36 ಉಪನ್ಯಾಸಕರ ಹುದ್ದೆ, ಕಲ್ಯಾಣ ಕರ್ನಾಟಕೇತರ 778 ಹುದ್ದೆಗಳು ಸೇರಿದಂತೆ 814 ಉಪನ್ಯಾಸಕರ ಹುದ್ದೆ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here