ನಿಗದಿತ ಪರಿವೀಕ್ಷಣಾವಧಿ ಮುಗಿದ ಕೂಡಲೇ ಕರ್ನಾಟಕ: ಸಿವಿಲ್ ಸೇವಾ (ಪರಿವೀಕ್ಷಣೆ) ನಿಯಮಗಳು, 1977ರ ನಿಯಮ 4 ಅಥವಾ ನಿಯಮ 5ರನ್ವಯ ಕ್ರಮ ತೆಗೆದುಕೊಳ್ಳಬೇಕು.
ಪರಿವೀಕ್ಷಣೆಯ (Probationary) ಮೇಲೆ ನೇರ ನೇಮಕಾತಿ ಹೊಂದಿದ ನೌಕರರ ಪರಿವೀಕ್ಷಣಾ ಅವಧಿಯು ಮುಗಿದ ನಂತರ, ಸದರಿ ನೌಕರರು ನೇಮಕಗೊಂಡ ಹುದ್ದೆಯನ್ನು ಹೊಂದಲು ಅರ್ಹರೆ? ಅಥವಾ ಇಲ್ಲವೆ? (Suitable or not) ಎನ್ನುವುದನ್ನು ನಿರ್ಧರಿಸಿ, ಅದರ ಆಧಾರದ ಮೇಲೆ ಪರಿವೀಕ್ಷಣಾ (Probationary) ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದಾರೆಯೇ? ಅಥವಾ ಇಲ್ಲವೇ? ಎನ್ನುವ ಬಗ್ಗೆ ಸಕ್ಷಮ ಪ್ರಾಧಿಕಾರ ನಿರ್ಣಯಿಸಿ ಆದೇಶ ಹೊರಡಿಸಬೇಕು.
ಈ ರೀತಿಯ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಅದು ನೇಮಕಾತಿ ಪ್ರಾಧಿಕಾರದ ಕರ್ತವ್ಯಲೋಪವಾಗುತ್ತದೆ.
ಈ ಉದ್ದೇಶಕ್ಕಾಗಿ ಅವರ ವಿರುದ್ಧ ಆರಂಭಿಸಿದ ಶಿಸ್ತಿನ ಕ್ರಿಮಿನಲ್ ನಡವಳಿಗಳು ಸುಸಂಬದ್ಧವಾಗುವುದಿಲ್ಲ. ಆದರೆ ನಿಯಮಗಳ ಪ್ರಕಾರ ಆ ಶಿಸ್ತಿನ ಕ್ರಿಮಿನಲ್ ಪ್ರಕರಣಗಳನ್ನು ಮುಂದುವರೆಸಿ ಅಂತಿಮಗೊಳಿಸಬೇಕಾಗುತ್ತದೆ.
ಕರ್ನಾಟಕ ಸಿವಿಲ್ ಸೇವಾ (ಪರಿವೀಕ್ಷಣಾ) ನಿಯಮಗಳು, 1977ರ ನಿಯಮ 4(1) (ii)ರನ್ವಯ ಕಾರಣಗಳನ್ನು ಲಿಖಿತ ಮೂಲಕ ದಾಖಲಿಸಿ, ಸರ್ಕಾರವನ್ನು ಹೊರತುಪಡಿಸಿ ಬೇರೆ ಪ್ರಾಧಿಕಾರಗಳು ನೇಮಕಾತಿ ಪ್ರಾಧಿಕಾರಗಳಾಗಿದ್ದಲ್ಲಿ, ಪರಿವೀಕ್ಷಣಾವಧಿಯನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲು ಹಾಗೂ ಮೇಲ್ಕಂಡ ನಿಯಮಗಳ ನಿಯಮ 4(1)(i)ರನ್ವಯ ಸರ್ಕಾರ ಅಥವಾ ರಾಜ್ಯಪಾಲರು ಸೂಕ್ತವೆನಿಸಿದಷ್ಟು ಅವಧಿಗೆ ಪರಿವೀಕ್ಷಣಾವಧಿಯನ್ನು ವಿಸ್ತರಿಸಲು ಅವಕಾಶವಿರುತ್ತದೆ.
ಮೇಲ್ಮಂಡ ಈ ನಿಯಮಗಳ ನಿಯಮ 4(1)ರ ಪರಂತುಕದಲ್ಲಿ ಪರಿವೀಕ್ಷಣಾವಧಿಯನ್ನು ಕನ್ನಡ ಭಾಷಾ ಪರೀಕ್ಷೆ ಮತ್ತು ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಫಲಿತಾಂಶ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕಕ್ಕೆ, ವಿಸ್ತರಿಸಿ, ಈ ಅವಧಿಯ ಕಾರ್ಯನಿರ್ವಹಣಾ ವರದಿಗಳನ್ನು ಪರಿಶೀಲಿಸಿ, ಆ ದಿನಾಂಕದಿಂದ ಪರಿವೀಕ್ಷಣಾವಧಿಯನ್ನು ಘೋಷಿಸಬಹುದಾಗಿದೆ.
ಈ ನಿಯಮಗಳ ನಿಯಮ 3 ರನ್ವಯ ಪರಿವೀಕ್ಷಣಾವಧಿ/ ವಿಸ್ತರಿಸಿದ ಪರಿವೀಕ್ಷಣಾವಧಿಯಲ್ಲಿ ಸರ್ಕಾರಿ ನೌಕರನು ಅಸಾಧಾರಣ ರಜೆಯಲ್ಲಿದ್ದಲ್ಲಿ, ಆ ಅವಧಿಯನ್ನು ಪರಿವೀಕ್ಷಣಾವಧಿ ಲೆಕ್ಕ ಹಾಕುವಾಗ ಹೊರತುಪಡಿಸಬೇಕಾಗುತ್ತದೆ.
ಕರ್ನಾಟಕ ಸಿವಿಲ್ ಸೇವಾ (ಪರಿವೀಕ್ಷಣಾ) ನಿಯಮಗಳು, 1977 ನಿಯಮ 10 ರನ್ವಯ ಸದರಿ ವಿಸ್ತರಿಸಿದ ಪರಿವೀಕ್ಷಣಾ (Probationary) ಅವಧಿಯಲ್ಲಿ ಸದರಿ ನೌಕರನಿಗೆ ವಾರ್ಷಿಕ ಬಡ್ತಿಗಳನ್ನು ನಿಗದಿಪಡಿಸಲು ಕ್ರಮವಹಿಸಬೇಕಾಗುತ್ತದೆ.
ನಿಯಮ 10 ಎಂದರೆ, ಸದರಿ ನೌಕರನಿಗೆ ತಡೆಹಿಡಿಯಲಾದ ಎಲ್ಲಾ ವಾರ್ಷಿಕ ವೇತನ ಬಡ್ತಿಗಳನ್ನು ವಿಸ್ತರಿಸಿದ ದಿನಾಂಕದ ನಂತರ ಬಿಡುಗಡೆಗೊಳಿಸಲಾಗುತ್ತದೆ. ಆದರೆ ವಿಸ್ತರಿಸಿ ಆದೇಶಿಸುವ ಪೂರ್ವದಲ್ಲಿ ಸಿಗಬೇಕಾಗದ ಯಾವುದೇ ಆರ್ಥಿಕ ಸೌಲಭ್ಯಗಳು ಸಿಗುವುದಿಲ್ಲ
Click Here To Download Rules
No comments:
Post a Comment
If You Have any Doubts, let me Comment Here