JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, May 9, 2024

Curriculum Structure For Undergraduate Program For 2024-25

  Jnyanabhandar       Thursday, May 9, 2024
Curriculum Structure For Undergraduate Program  For 2024-25

ರಾಜ್ಯ ಶಿಕ್ಷಣ ನೀತಿ ಆಯೋಗದ (State Education Policy) ಮಧ್ಯಂತರ ವರದಿ ಅನ್ವಯ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವರದಿಯ ಶಿಫಾರಸುಗಳ ಆಧಾರದ ಮೇಲೆ ಪದವಿ ಅವಧಿ ಮತ್ತು ಪಠ್ಯಕ್ರಮ ರಚನೆಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ 4 ವರ್ಷಗಳ ಪದವಿಯನ್ನು ಕೈಬಿಟ್ಟು, ಈ ಹಿಂದೆ ಇದ್ದ ಮೂರು ವರ್ಷಗಳ ಪದವಿಯನ್ನೇ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಡಿ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2021-22ನೇ ಶೈಕ್ಷಣಿಕ ವರ್ಷದಿಂದ ಅಗತ್ಯ ಮಾರ್ಗಸೂಚಿಗಳನುಸಾರ ಅನುಷ್ಠಾನಗೊಳಿಸಲಾಗಿತ್ತು. ಚುನಾವಣಾ ಪೂರ್ವದಲ್ಲಿ ಎನ್‌ಇಪಿ ರದ್ದು ಪಡಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಆರಂಭದಲ್ಲಿ ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿತ್ತು. ಆಯೋಗವು ಇತ್ತೀಚೆಗೆ ಸಲ್ಲಿಸಿದ ಮಧ್ಯಂತರ ವರದಿಯ ಶಿಫಾರಸುಗಳ ಅನ್ವಯ ಪದವಿ ಅವಧಿ ಮತ್ತು ಪಠ್ಯಕ್ರಮ ರಚನೆಯಲ್ಲಿ ರಾಜ್ಯ ಸರ್ಕಾರ ಕೆಲ ಮಾರ್ಪಾಡುಗಳನ್ನು ಮಾಡಿದೆ. 

ಆದೇಶದಲ್ಲಿ ಏನಿದೆ?

ರಾಜ್ಯದ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಸೂಕ್ಷ್ಮವಾಗಿ ಪರಾಮರ್ಶಿಸಿ ಶಿಕ್ಷಣ ನೀತಿಯನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರೊ.ಸುಖದೇವ್ ಥೋರಟ್ ರವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿರುತ್ತದೆ. ಈ ನೀತಿಯು ರಾಜ್ಯದ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ನೋಂದಣಿಯನ್ನು ವೃದ್ಧಿಸಲು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ಪ್ರತಿಯೊಬ್ಬರಿಗೂ ಗುಣಾತ್ಮಕ ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸಲು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನವನ್ನು ಸದೃಢಗೊಳಿಸಲು, ಶಾಲಾ ಹಾಗೂ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಲು ಮತ್ತು ಪ್ರಜಾಸತ್ತಾತ್ಮಕ ಮತ್ತು ನಾಗರೀಕ/ನೈತಿಕ ಮೌಲ್ಯಗಳನ್ನು ಬೆಳೆಸುವ ಗುರಿ ಹೊಂದಿದೆ.

ಆಯೋಗವು ಆಗಸ್ಟ್ 2024ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಿದ್ದು, ಪ್ರಸ್ತುತ ಕೆಲವು ಶಿಫಾರಸುಗಳೊಂದಿಗೆ ಮಧ್ಯಂತರ ವರದಿ ಸಲ್ಲಿಸಿದೆ. ಸರ್ಕಾರವು ಆಗಸ್ಟ್ 2021ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಆದೇಶವನ್ನು ಹೊರಡಿಸಿತ್ತು. ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳ ಆಧಾರದ ಮೇಲೆ ಪದವಿ ಅವಧಿ ಮತ್ತು ಪಠ್ಯಕ್ರಮ ರಚನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಸೂಚಿಸಿದೆ. 

ರಾಜ್ಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪದವಿ ಕೋರ್ಸ್‌ಗಳಿಗೆ ಸಂಯೋಜನೆ ಹಾಗೂ ಪ್ರವೇಶಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ವಿಳಂಬವಿಲ್ಲದೆ ಈ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು. 2024-25ರ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಕೆಳಕಂಡಂತೆ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ.

2024-25ನೇ ಶೈಕ್ಷಣಿಕ ವರ್ಷಕ್ಕೆ ಕಾಲಾವಧಿ ಮತ್ತು ಪಠ್ಯಕ್ರಮದಲ್ಲಿ ಪ್ರಸ್ತಾಪಿಸಲಾಗಿರುವ ಬದಲಾವಣೆಗಳು:

ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳನ್ನು ಆಧರಿಸಿ, ಸರ್ಕಾರವು ಉನ್ನತ ಶಿಕ್ಷಣದ ಪದವಿ ಕಾರ್ಯಕ್ರಮದಲ್ಲಿ ಮತ್ತು ಎಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳ ಹಾಗೂ ಸಂಯೋಜಿತ ಕಾಲೇಜುಗಳ ಪಠ್ಯಕ್ರಮದಲ್ಲಿ ಕೆಳಕಂಡ ಬದಲಾವಣೆಗಳನ್ನು ತರಲು ಉದ್ದೇಶಿಸಿದೆ. 

1.ಪದವಿ ಕಾರ್ಯಕ್ರಮದ ಕಾಲಾವಧಿ: ಸ್ನಾತಕ ಪದವಿ ಕಾರ್ಯಕ್ರಮದ ಕಾಲಾವಧಿ ಕೇವಲ 3 ವರ್ಷಗಳು ಮಾತ್ರ ಆಗಿದ್ದು, ನಾಲ್ಕು ವರ್ಷದ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಆಯ್ಕೆ ಇರುವುದಿಲ್ಲ. ಈ ಮೊದಲು ನಾಲ್ಕು ವರ್ಷದ ಪದವಿಯು ಆಯ್ಕೆಯಾಗಿತ್ತು.
2. ಮೂರು ವರ್ಷಗಳ ಪದವಿ ಕಾರ್ಯಕ್ರಮಕ್ಕೆ ಪಠ್ಯಕ್ರಮದ ಸ್ವರೂಪ: ಮೂರು ಬೇರೆಬೇರೆ ಪದವಿ ಪಠ್ಯಕ್ರಮದ ಚೌಕಟ್ಟುಗಳನ್ನು (CFW) ಪ್ರಸ್ತಾಪಿಸಿ ಅಂಗೀಕರಿಸಲಾಗಿದ್ದು, ಅವು ಈ ಕೆಳಗಿನಂತಿವೆ.
a. ಎಲ್ಲ 6 ಸೆಮಿಸ್ಮರ್‌ಗಳಲ್ಲಿ 3 ಮೇಜರ್‌ಗಳೊಡನೆ ಸಾಮಾನ್ಯ ಪದವಿ, ಅಥವಾ
b. 4ನೇ ಸೆಮಿಸ್ಟರ್ ವರೆಗೆ 3 ಮೇಜರ್ ಗಳು ಮತ್ತು 5 ಹಾಗೂ 6ನೇ ಸೆಮಿಸ್ಟರ್ ಗಳಲ್ಲಿ 1 Subject ನಲ್ಲಿ ವಿಶೇಷಜ್ಞತೆ (Specialization).
c. ಮೊದಲನೇ ಸೆಮಿಸ್ಟರ್ ನಿಂದ ಮೈನರ್ Subject ಗಳ ಜೊತೆಗೆ 1 Subject ನಲ್ಲಿ ವಿಶೇಷತೆ (Specialization) (ಉದಾ: ಬಿ.ಕಾಂ, ಬಿಬಿಎ, ಬಿಸಿಎ, ಬಿಎ/ಬಿಎಸ್ಸಿ) ಪಠ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ.

3.ಬಹು ಆಗಮನ/ನಿರ್ಗಮನ ಮೊದಲನೇ ವರ್ಷದ ನಂತರ ಸರ್ಟಿಫಿಕೇಟ್ ನೀಡುವ ಹಾಗೂ ಎರಡನೇ ವರ್ಷದ ನಂತರ ಡಿಪ್ಲೊಮಾ ನೀಡುವ (ಬಹು ಆಗಮನ/ನಿರ್ಗಮನು ಕುರಿತು, ಅಂತಿಮ ವರದಿ ಸಲ್ಲಿಕೆಯಾದ ನಂತರ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಈ ಹಂತದಲ್ಲಲ್ಲ.

4. ಪಠ್ಯಕ್ರಮ ರಚನೆಯಲ್ಲಿನ ಬದಲಾವಣೆಯ ಮೂಲಕ ಆಳವಾದ ಜ್ಞಾನ ಔದ್ಯಮಿಕ ಆಧಾರಿತ ಕೋರ್ಸ್‌ಗಳನ್ನು ಮತ್ತು ಪ್ರಾದೇಶಿಕ ನಿರ್ದಿಷ್ಟ ವಿಷಯಗಳನ್ನು ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗೆ ಸ್ವಾಯತ್ತತೆಯನ್ನು ನೀಡುವುದನ್ನು 5. Apprenticeship-embedded degree courses ಸಹ ಪಠ್ಯಕ್ರಮದ ಭಾಗವಾಗಿ ಪರಿಗಣಿಸಲಾಗಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ತಂಡಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಈ ಬದಲಾವಣೆಗಳು 2021-22, 2022-23, 2023-24 ನೇ ವರ್ಷಗಳಲ್ಲಿ ಪ್ರವೇಶಾತಿ ಪಡೆದ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪದವಿ ಕಾರ್ಯಕ್ರಮಗಳಿಗೆ 2021-22, 2022-23 ಮತ್ತು 2023-24 ನೇ ಶೈಕ್ಷಣಿಕ ವರ್ಷಗಳಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ಕಾಲಾವಧಿ ಹಾಗೂ ಪಠ್ಯಕ್ರಮದ ಕುರಿತು ಸದ್ಯಕ್ಕೆ ಜಾರಿಯಲ್ಲಿರುವ ಸರ್ಕಾರದ ಆದೇಶ ಸಂಖ್ಯೆ: ಇಡಿ 260 ಯುಎನ್‌ಇ 2019 (ಭಾಗ-1), ದಿನಾಂಕ: 07-08-2021ರ ಅನುಸಾರವಾಗಿಯೇ ವಿದ್ಯಾಭ್ಯಾಸ ಮಾಡುತ್ತಾರೆ.

ಘೋಷಣೆ ಮಾಡಲ್ಪಟ್ಟಿರುವ ಬದಲಾವಣೆಗಳು ಶೈಕ್ಷಣಿಕ ವರ್ಷ 2024-25ರಿಂದ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. 

2024-25ನೇ ಸಾಲಿನ ಸಂಯೋಜನೆ ಮತ್ತು ಪ್ರವೇಶಾತಿ ಪ್ರಕ್ರಿಯೆಗಳು

ವಿಶ್ವವಿದ್ಯಾಲಯಗಳಿಗೆ ಸಂಯೋಜನಾ ಪ್ರಕ್ರಿಯೆ ಮತ್ತು ಪ್ರವೇಶಾತಿಗಳು ಈ ಕೂಡಲೇ ಪ್ರಾರಂಭಗೊಳ್ಳುತ್ತವೆ. ಸರ್ಕಾರದ ಆದೇಶದಂತೆ ಪ್ರವೇಶಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಕುರಿತು ಈಗಾಗಲೇ ಎಲ್ಲ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಲಾಗಿದ್ದು, ಕಾಲೇಜುಗಳಿಗೆ ಸ್ಪಷ್ಟಿಕರಣ ಬೇಕಾದಲ್ಲಿ ತಮ್ಮ ಸಂಯೋಜಕ ವಿಶ್ವವಿದ್ಯಾಲಯಗಳನ್ನು ಕೇಳಬಹುದಾಗಿದೆ. 2024-25ನೇ ಶೈಕ್ಷಣಿಕ ಸಾಲಿನ ಸಂಯೋಜನಾ ಪ್ರಕ್ರಿಯೆಯು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಿಗೆ ದಿನಾಂಕ 09.05.2024 ರಂದು UUCMS ತಂತ್ರಾಂಶದ ಮೂಲಕ ಪ್ರಾರಂಭವಾಗುತ್ತದೆ.

logoblog

Thanks for reading Curriculum Structure For Undergraduate Program For 2024-25

Previous
« Prev Post

No comments:

Post a Comment

If You Have any Doubts, let me Comment Here