✍️ ರಾಜ್ಯಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔹 ರಾಜ್ಯಸಭೆಯ ರಚನೆ= 80 ನೇ ವಿಧಿ ಹೇಳುತ್ತದೆ,
🔸 ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು= 1952 ಮೇ 13
🔹 ರಾಜ್ಯಸಭೆಯನ್ನು ಮೊದಲು ರಾಜ್ಯಗಳ ಕೌನ್ಸಿಲ್ಅಥವಾ ಕೌನ್ಸಿಲ್ ಆಫ್ ಸ್ಟೇಟ್ ಎಂದು ಕರೆಯುತ್ತಿದ್ದರು,
🔸 ರಾಜ್ಯಸಭೆಯು
ಸಂಸತ್ತಿನ ಮೇಲ್ಮನೆ ಆಗಿದೆ( ಲೋಕಸಭೆ ಕೆಳಮನೆ)
🔹 ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ= 250
🔸 ರಾಜ್ಯಸಭೆಯ ಪ್ರಸ್ತುತ ಸದಸ್ಯರ ಸಂಖ್ಯೆ= 245
🔹 ರಾಜ್ಯಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ= 238
🔸 ರಾಜ್ಯಸಭೆಯ ನಾಮಕರಣ ಸದಸ್ಯರ ಸಂಖ್ಯೆ= 12
🔹 ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು= 30 ವರ್ಷ
🔸 ರಾಜ್ಯ ಸಭೆಯ ಅಧ್ಯಕ್ಷರ ಕನಿಷ್ಠ ವಯಸ್ಸು= 35 ವರ್ಷ
🔹 ರಾಜ್ಯಸಭೆಯ ಅಧ್ಯಕ್ಷರು= ಉಪರಾಷ್ಟ್ರಪತಿ ಗಳಾಗಿರುತ್ತಾರೆ
🔸 ಪ್ರಸ್ತುತ ರಾಜ್ಯಸಭೆಯ ಅಧ್ಯಕ್ಷರು= ಜಗದೀಪ್ ಧನಕರ
( ಉಪರಾಷ್ಟ್ರಪತಿಗಳು)
🔹 ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ= 6 ವರ್ಷ
🔸 ರಾಜ್ಯಸಭೆಯು ಒಂದು ಶಾಶ್ವತ ಸದನ, ಬುದ್ದಿವಂತರ ಸದನ ಎಂದು ಕರೆಯುತ್ತಾರೆ,
🔹 ರಾಜ್ಯಸಭೆಯ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ 1/3 ಸದಸ್ಯರು ನಿವೃತ್ತಿ ಹೊಂದುತ್ತಾರೆ.
🔸 ರಾಜ್ಯಸಭೆಯ ಚುನಾವಣೆಗಳು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ,
🔹 ರಾಜ್ಯಸಭೆಯ ಸದಸ್ಯರನ್ನು ಆಯಾ ರಾಜ್ಯದ ವಿಧಾನಸಭಾ ಚುನಾಯಿತ ಸದಸ್ಯರು ಚುನಾಯಿಸುತ್ತಾರೆ.
🔸 ರಾಜ್ಯಸಭೆಗೆ ರಾಷ್ಟ್ರಪತಿ 12 ಸದಸ್ಯರನ್ನು ನಾಮಕರಣ ಮಾಡುತ್ತಾರೆ.
🔹 ಅಖಿಲ ಭಾರತ ಸೇವೆಗಳನ್ನು ಸೃಷ್ಟಿಸುವ ಅಧಿಕಾರ ರಾಜ್ಯಸಭೆಗೆ ಇದೆ( ವಿಧಿ-312)
🔸 ಕರ್ನಾಟಕದಿಂದ ರಾಜ್ಯಸಭೆಗೆ 12 ಸದಸ್ಯರು ಆಯ್ಕೆಯಾಗುತ್ತಾರೆ,✍️
( ಕರ್ನಾಟಕದಿಂದ "ಲೋಕಸಭೆಗೆ" 28 ಸದಸ್ಯರು ಆಯ್ಕೆಯಾಗುತ್ತಾರೆ,)
🔹 ರಾಜ್ಯಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಲು ಬರುವುದಿಲ್ಲ.
🔸 ಲೋಕಸಭೆಯಿಂದ ಪಾಸಾಗಿ ಬಂದ ಹಣಕಾಸು ಮಸೂದೆ ಯನ್ನು ರಾಜ್ಯಸಭೆಯ ಗರಿಷ್ಠ 14 ದಿನಗಳವರೆಗೆ ತಡೆಹಿಡಿಯಬಹುದು
🔹 ರಾಜ್ಯಸಭೆಯ ಅಧ್ಯಕ್ಷರನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು..
🔹 ರಾಜ್ಯಸಭೆಯ ಉಪಸಭಾಪತಿ ಯವರನ್ನು "ರಾಜ್ಯಸಭೆಯ ಸದಸ್ಯರು" ಚುನಾಯಿಸುತ್ತಾರೆ,
🔸 ರಾಜ್ಯಸಭೆಯ ಉಪಸಭಾಪತಿ ಅವರು ತಮ್ಮ ರಾಜೀನಾಮೆ ಪತ್ರವನ್ನು "ರಾಜ್ಯ ಸಭೆಯ ಅಧ್ಯಕ್ಷರಿಗೆ" ಸಲ್ಲಿಸಬೇಕು,
🔹 ರಾಜ್ಯಸಭೆಯಲ್ಲಿ ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲಾಗಿರುತ್ತವೆ,
🔸 ರಾಜ್ಯಸಭೆಯಲ್ಲಿ 2/3 ರ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಂಸತ್ತು ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ಮಾಡಬಹುದು
🔹 ಭಾರತದ ಉಪ ರಾಷ್ಟ್ರಪತಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮೊದಲು "ರಾಜ್ಯಸಭೆಯಲ್ಲಿ" ಮಂಡಿಸಬೇಕು,
🔸 ರಾಜ್ಯಸಭೆಯು "ರಾಜ್ಯಗಳ" ಮತ್ತು "ಕೇಂದ್ರಾಡಳಿತ ಪ್ರದೇಶಗಳನ್ನು" ಪ್ರತಿನಿಧಿಸುತ್ತದೆ.
🔹 "ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸುವ ಅಧಿಕಾರವಿದೆ".
No comments:
Post a Comment
If You Have any Doubts, let me Comment Here