Documents required to apply for superannuation
ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ಅವರ ಇಳಿವಯಸ್ಸಿನಲ್ಲಿ ಪರಿಹಾರವಾಗಿ ಮಾಸಿಕ ಮೊಬಲಗು ಅಥವಾ ಹಿಡಿಗಂಟಾಗಿ ಹಣವನ್ನು ಪಾವತಿದಲಾಗುತ್ತಿದೆ. ಇದಕ್ಕಾಗಿ ಅಯವ್ಯಯದಲ್ಲಿ ಸರ್ಕಾರ ಹಣವನ್ನು ಕಾಯ್ದಿರಿಸುತ್ತದೆ.
ನಿವೃತ್ತಿ ವೇತನ ಎಂದರೆ ನಿವೃತ್ತಿ ವೇತನ ಹಾಗೂ ಸೇವಾ ಉಪದಾನ ಸೇರಿರುತ್ತದೆ. ನಿವೃತ್ತಿ ವೇತನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರಿ ಕಚೇರಿ ಮುಖ್ಯಸ್ಥರಾಗಿರುತ್ತಾರೆ. ನಿವೃತ್ತಿ ವೇತನ ಪಡೆಯಲು ಸರ್ಕಾರಿ ನೌಕರ ಒಳ್ಳೆಯ ನಡತೆಯನ್ನು ಹೊಂದಿರಬೇಕು. ನಿವೃತ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಇರಬೇಕು.
ನಿವೃತ್ತಿ ವೇತನ ಅರ್ಜಿಯ ಜೊತೆಯಲ್ಲಿ ಇರಬೇಕಾದ ದಾಖಲಾತಿಗಳು
• ಯಥಾವಿಧಿ ಪೂರ್ತಿಯಾಗಿರುವ ಸೇವಾ ಪುಸ್ತಕ
• ನಮೂನೆ-1
• ಅಶಕ್ತತಾ ಪ್ರಮಾಣಪತ್ರ
• ಸೇವಾ ವಿವರಣೆಗಳ ತಃಖ್ಯೆ ನಮೂನೆ-7
• ಪಿಂಚಣಿ ಲೆಕ್ಕಾಚಾರ ತಃಖ್ಯೆ
• ಸರಾಸರಿ ಉಪಲಬ್ದಗಳ ವಿವರ
• ಕೊನೆಯ ವೇತನ ಪ್ರಮಾಣ ಪತ್ರ
ಕುಟುಂಬದ ಸದಸ್ಯರ ವಿವರ ತಃಖ್ಯೆ:ಹೆಸರು /ಸಂಬಂಧ/ವಯಸ್ಸು/ಜನ್ಮದಿನಾಂಕ/ವಿವಾಹಿತ/ಅವಿವಾಹಿತ
• ಖಾಯಂ ವಿಳಾಸ
• ಖಜಾನೆ ವಿಳಾಸ
• ಯಾವುದೇ ಉಪದಾನ ಸ್ವೀಕರಿಸಿಲ್ಲದಿರುವ ಬಗ್ಗೆ ಘೋಷಣೆ
• ವಸೂಲಾತಿಗಾಗಿ ಒಪ್ಪಿಗೆ ಪತ್ರ
.ಬೇಬಾಕಿ ಪ್ರಮಾಣ ಪತ್ರ
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here