March 2024 2nd PUC Exam 1 Result Statistics
ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶದ ಅಂಕಿ ಅಂಶಗಳು
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Exam Result) ಬುಧವಾರ (ಏ.10) ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ಶೇಕಡಾ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,49,927 ಸೇರಿದಂತೆ ಒಟ್ಟಾರೆ 5,52,690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಇಡೀ ರಾಜ್ಯಕ್ಕೆ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಗದಗ್ ಜಿಲ್ಲೆಗೆ ಕೊನೆಯ ಸ್ಥಾನ ಲಭಿಸಿದೆ. ರಾಜ್ಯದಲ್ಲಿ ಒಟ್ಟು 6,98,378 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದರು. ಆ ಪೈಕಿ 5,52,690 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ. 2023ರ ವರ್ಷದಲ್ಲಿ ಉತ್ತೀರ್ಣತಾ ಪ್ರಮಾಣ ಶೇ. 74.67ರಷ್ಟಿತ್ತು. ಈ ಬಾರಿ ತೇರ್ಗಡೆ ಪ್ರಮಾಣ ಕಳೆದ ಬಾರಿಗಿಂತ ಶೇ.6.48 ರಷ್ಟು ಹೆಚ್ಚಾಗಿದೆ.
ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾದ ನಗರ ಪ್ರದೇಶದ ಶೇ.81.10ರಷ್ಟು ಹಾಗೂ ಗ್ರಾಮೀಣ ಪ್ರದೇಶದ ಶೇ. 81.31 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕೀಯರ ತೇರ್ಗಡೆ ಪ್ರಮಾಣ ಶೇ.84.87ರಷ್ಟಿದ್ದರೆ, ಬಾಲಕರ ಪ್ರಮಾಣ ಶೇ.76.98 ರಷ್ಟಿದೆ.
ಮರು ಮೌಲ್ಯ ಮಾಪನಕ್ಕೆ ಅವಕಾಶವಿದೆ.
ವಿದ್ಯಾರ್ಥಿಗಳಿಗೆ ತಮಗೆ ಬಂದ ಅಂಕಗಳ ಬಗ್ಗೆ ಸಂದೇಹಗಳು, ಅಸಮಾಧಾನಗಳಿದ್ದಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿಗಾಗಿ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಪಡೆಯಲು ಏಪ್ರಿಲ್ 16ರ ತನಕ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 19ರ ತನಕ, ಮತ್ತು ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಏಪ್ರಿಲ್ 14 ರಿಂದ 20ರವರೆಗೆ ಅವಕಾಶವಿದೆ.
ದ್ವೀತಿಯ ಪಿಯುಸಿ ಪರೀಕ್ಷೆ 1ರ ವಿದ್ಯಾರ್ಥಿಗಳ ಫಲಿತಾಂಶ ಪ್ರತಿಯನ್ನು ಕೆಎಸ್ಇಬಿಯು ಈಗಾಗಲೆ ಆಯಾ ಕಾಲೇಜು ಮಂಡಳಿಗಳಿಗೆ ಕಳುಹಿಸಿದೆ. ಇನ್ನು ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಮಂಡಳಿಯು, kseab.karnataka.gov.in ಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಮರು ಮೌಲ್ಯಮಾಪನ 2024ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? :
ಅಧಿಕೃತ ವೆಬ್‌ಸೈಟ್ - kseab.karnataka.gov.in ಗೆ ಭೇಟಿ ನೀಡಿ, ಸ್ಕ್ಯಾನ್ ಮಾಡಿದ ಪ್ರತಿಗಳ ಅರ್ಜಿ ನಮೂನೆಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಫಾರ್ಮ್ ಜೊತೆಗೆ ಅರ್ಜಿ ಶುಲ್ಕವನ್ನು ಸಲ್ಲಿಸಿ
ಭವಿಷ್ಯದ ಉಲ್ಲೇಖಕ್ಕಾಗಿ ಸ್ವೀಕೃತಿ ಫಾರ್ಮ್ ಡೌನ್‌ಲೋಡ್ ಮಾಡಿ, ಸ್ಕ್ಯಾನ್ ಮಾಡಿದ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪಿಡಿಎಫ್ ನ್ನು ಸ್ವೀಕರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
No comments:
Post a Comment
If You Have any Doubts, let me Comment Here