KSET Exam Result 2023
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಳೆದ ವರ್ಷದ ಅಂತ್ಯಕ್ಕೆ ನಡೆದಿದ್ದ 'ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2023ಕ್ಕೆ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಪ್ರಮುಖ ಅಂಶವೆಂದರೆ ಇಂದು ಸೋಮವಾರ ಏಪ್ರಿಲ್ 8ರಂದು ಪ್ರಾಧಿಕಾರವು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇತ್ತು.
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2023ಕ್ಕೆ ಗೆ ಕಳೆದ ಜನವರಿ ತಿಂಗಳಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡುತ್ತಿದೆ. ಇದೇ ಏಪ್ರಿಲ್ ಮೊದಲ ವಾರ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ. ಇದೀಗ ಸೋಮವಾರ ಫಲಿತಾಂಶ ಬಿಡುಗಡೆ ಮಾಡಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಆದರೆ ಫಲಿತಾಂಶ ಪ್ರಕಟಗೊಳ್ಳುವ ಅಧಿಕೃತ ದಿನಾಂಕ ತಿಳಿಯಬೇಕಿದೆ.
ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಕೆಸೆಟ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ನೀವು ಪರೀಕ್ಷೆ ಬರೆದ ಎಲ್ಲ 42 ವಿಷಯಗಳಿಗೆ ಅಂತಿಮ ಉತ್ತರಗಳನ್ನು ವೀಕ್ಷಿಸಬಹುದಾಗಿದೆ. ಅದಕ್ಕಾಗಿ ನೀಡುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ಜಾಲತಾಣಕ್ಕೆ https://cetonline.karnataka.gov.in/kea ಭೇಟಿ ನೀಡಬೇಕು. ಕೀ ಉತ್ತರ ಫಲಿತಾಂಶ ತಿಳಿಯಲು ಇಲ್ಲಿನ ವಿಧಾನ ತಿಳಿಯಿರಿ.
ಪ್ರಾಧಿಕಾರ ಅಧಿಸೂಚನೆ ಪ್ರಕಾರ KSET-2023 ಪರೀಕ್ಷೆಯು 42 ವಿವಿಧ ವಿಷಯ ಪತ್ರಿಕೆಗಳನ್ನು ಒಳಗೊಂಡಿದೆ. ಈ ಎಲ್ಲಾ ವಿಷಯಗಳ ಪತ್ರಿಕೆಗಳ ಅಂತಿಮ ಕೀ ಉತ್ತರಗಳನ್ನು ಲ್ಲೇಖ ಮಾಡಿ ಅದರ ಪೂರ್ಣ ಮಾಹಿತಿಯನ್ನು ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2023ರ ಫಲಿತಾಂಶವು 2024ರ ಏಪ್ರಿಲ್ ನಲ್ಲಿ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಘೋಷನೆ ಅಧಿಕೃತ ದಿನಾಂಕ ಬಹಿರಂಗಪಡಿಸಿಲ್ಲ. ಆದಷಟು ಶೀಘ್ರದಲ್ಲೇ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಲಿದೆ.
KSET 2024: ಕೀ ಉತ್ತರಕ್ಕಾಗಿ ಈ ವಿಧಾನ ಅನುಸರಿಸಿ
* ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in ಭೇಟಿ ನೀಡಬೇಕು.
* ಜಾಲತಾಣದ ಮುಖಪುದಲ್ಲಿ ನೀಡಲಾದ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.
* 'KSET 2023 ಅಂತಿಮ ಉತ್ತರ ಕೀ' ಮೇಲೆ ಕ್ಲಿಕ್ ಮಾಡಿ
* ಕೆಸೆಟ್ ಪಟ್ಟಿಯು ಈಗ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ
* ಇನ್ನೂ ಈ ಕೀ ಉತ್ತರಗಳನ್ನು ಭವಿಷ್ಯದ ಅನುಕೂಲಕ್ಕಾ ಸೇವ್ ಮಾಡಿಕೊಳ್ಳಿ. ಜೊತೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವು ಇದೆ.
ಕರ್ನಾಟಕ ವಿಶ್ವವಿದ್ಯಾಲಯಗಳಿಗೆ ಸಹಾಯಕ ಪ್ರಾಧ್ಯಾಪಕರನ್ನು ನಿಯೋಜನೆ ಮಾಡಿಕೊಳ್ಳು ಉದ್ದೇಶದಿಂದ ಸರ್ಕಾರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ನಡೆಸಿತ್ತು. ಈ ಪರೀಕ್ಷೆಯನ್ನು ಎರಡು ಅವಧಿಗಳಲ್ಲಿ ನಡೆದಿದೆ. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಅರ್ಹ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡು ವಿಷಯ ಮೇಲೆ ಪರೀಕ್ಷೆ ನಡೆದಿದೆ.
ನಿಗದಿತ ದಿನಾಂಕಗಳಲ್ಲಿ ಪತ್ರಿಕೆ 1 ಬೆಳಗ್ಗೆ 10 ರಿಂದ 11 ರವರೆಗೆ, ನಂತರ ಪತ್ರಿಕೆ 2 ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ನಡೆಯಿತು. ಒಟ್ಟು 300 ಅಂಕಗಳ ಪರೀಕ್ಷೆ ಇದಾಗಿದ್ದು, ಈ ಮೌಲ್ಯಮಾಪನ ಆಧಾರತದಲ್ಲಿ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ.
ಕೆಸೆಟ್ ಫಲಿತಾಂಶ ಪ್ರಕಟಗೊಳ್ಳುವವರೆಗೂ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಆಗಾಗ ಭೇಟಿ ನೀಡುವ ಮೂಲಕ ಪರೀಕ್ಷಾ ಸಂಬಂಧಿ ಎಲ್ಲ ಅಪ್ಡೇಟ್ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
No comments:
Post a Comment
If You Have any Doubts, let me Comment Here