JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 31, 2024

The state government has declared a general holiday on the occasion of polling for the Lok Sabha elections

  Jnyanabhandar       Sunday, March 31, 2024

The state government has declared a general holiday on the occasion of polling for the Lok Sabha elections

ರಾಜ್ಯ ಸರ್ಕಾರದಿಂದ ಲೋಕಸಭಾ ಚುನಾವಣೆಯ ಮತದಾನದಂದು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ:26.04.2024ರ ಶುಕ್ರವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತ ಹಾಗೂ ಶೋರಾಪುರ-36 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದಿನಾಂಕ:07.05.2024ರ ಮಂಗಳವಾರದಂದು ನಡೆಸುತ್ತಿದೆ ಎಂದಿದ್ದಾರೆ.

ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ದಿನಾಂಕ:26.04.2024 ಮತ್ತು ದಿನಾಂಕ:07.05.2024ರಂದು ನಡೆಯುವ ಚುನಾವಣೆಗೆ ಕೆಳಗಿನ ಅಂಕಣದಲ್ಲಿ ನಮೂದಿಸಿರುವ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದಾರೆ.

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುಜಾಪತಿನಿಧಿ ಕಾಯ್ದೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಈ ಮೂಲಕ ಆದೇಶಿಸಿದ್ದಾರೆ.

ದಿನಾಂಕ:26.04.2024 ಮತ್ತು 07.05.2024ರಂದು ಸಾರ್ವತ್ರಿಕ ರಜೆಯನ್ನು Negotiable Instrument Act 1881ರ ಪ್ರಕಾರವು ಸಹ ಘೋಷಿಸಿದೆ.
ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಹೇಳಿದ್ದಾರೆ.

ದಿನಾಂಕ:26.04.2024 ಮತ್ತು 07.05.2024ರಂದು ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವಿವರಗಳನ್ನು ಕೆಳಗಿನ ಅಂಕಣದಲ್ಲಿ ನೀಡಲಾಗಿದೆ.

ಮೊದಲ ಹಂತದಲ್ಲಿ ದಿನಾಂಕ:26.04.2024ರಂದು ನಡೆಯಲಿರುವ ಲೋಕಸಭಾ ಚುನಾವಣಾ ಕ್ಷೇತ್ರಗಳ ಹೆಸರು

1. 15-ಉಡುಪಿ-ಚಿಕ್ಕಮಗಳೂರು


2. 16-ಹಾಸನ


3. 17-ದಕ್ಷಿಣ ಕನ್ನಡ


4. 18-ಚಿತ್ರದುರ್ಗ


5. 19-ತುಮಕೂರು


6. 20-ಮಂಡ್ಯ


7. 21-ಮೈಸೂರು


7. 22-ಚಾಮರಾಜನಗರ


9. 23-ಬೆಂಗಳೂರು ಗ್ರಾಮಾಂತರ


10. 24-ಬೆಂಗಳೂರು ಉತ್ತರ


11. 25-ಬೆಂಗಳೂರು ಕೇಂದ್ರ


12. 26-ಬೆಂಗಳೂರು ದಕ್ಷಿಣ


13. 27-ಚಿಕ್ಕಬಳ್ಳಾಪುರ


14. 28-ಕೋಲಾರ

ಎರಡನೇ ಹಂತದಲ್ಲಿ ದಿನಾಂಕ:07.05.2024ರಂದು ನಡೆಯಲಿರುವ ಲೋಕಸಭಾ ಚುನಾವಣಾ ಕ್ಷೇತ್ರಗಳ ಹೆಸರು

1. 1-ಚಿಕ್ಕೋಡಿ


2. 2-ಬೆಳಗಾವಿ


3. 3-ಬಾಗಲಕೋಟೆ


4. 4-ವಿಜಯಪುರ


5. 5-ಕಲಬುರಗಿ


6. 6-ರಾಯಚೂರು


7. 7-ಬೀದರ್


8. 8-ಕೊಪ್ಪಳ


9. 9-ಬಳ್ಳಾರಿ


10. 10-ಹಾವೇರಿ


11. 11-ಧಾರವಾಡ


12. 12-ಉತ್ತರ ಕನ್ನಡ


13. 13-ದಾವಣಗೆರೆ


12. 14-ಶಿವಮೊಗ್ಗ

ದಿನಾಂಕ:07.05.2024ರಂದು ಚುನಾವಣಾ ಕ್ಷೇತ್ರದ ಹೆಸರು ನಡೆಯಲಿರುವ ವಿಧಾನಸಭಾ ಉಪ ಚುನಾವಣೆ -36-ಸುರಪುರ, ಯಾದಗಿರಿ ಜಿಲ್ಲೆ.

ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.




Click Here To Download File
logoblog

Thanks for reading The state government has declared a general holiday on the occasion of polling for the Lok Sabha elections

Previous
« Prev Post

No comments:

Post a Comment

If You Have any Doubts, let me Comment Here