JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 31, 2024

Native Dream Technologies Quiz Competition

  Jnyanabhandar       Sunday, March 31, 2024
Native Dream Technologies Quiz Competition

ನೇಟಿವ್ ಡ್ರೀಮ್ ಟೆಕ್ನಾಲಜೀಸ್ (Native Dream Technologies) ಸಂಸ್ಥೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ 5 ರಿಂದ 10ನೇ ತರಗತಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮದಡಿ ಡೈಲಿ ಕ್ವಿಜ್ (Daily Quiz) ಅನ್ನು ಆಯೋಜಿಸಿದೆ. ಈ ಡೈಲಿ ಕ್ವಿಜ್ 2024ರ ಏಪ್ರಿಲ್‌ನಿಂದ ನವೆಂಬರ್‌ ವರಗೆ ನಡೆಯಲಿದೆ.

ಪ್ರತಿ ತಿಂಗಳು ಗೆಲ್ಲುವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3,000 ಹಾಗೂ ತೃತೀಯ ಬಹುಮಾನವಾಗಿ 2,000 ರೂಪಾಯಿ ಸಿಗಲಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರಿಗಾಗಿ ಅಗತ್ಯ ಮಾಹಿತಿ ಇಲ್ಲಿದೆ.

ನೇಟಿವ್ ಡ್ರೀಮ್ ಟೆಕ್ನಾಲಜೀಸ್ ಸಂಸ್ಥೆ ಮಾತೃಭಾಷಾ ಆಪ್‌ನಲ್ಲಿ 5ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಕನೆಕ್ಟ್ ಕನ್ನಡ-ಅನ್ಲಾಕ್ ಕರ್ನಾಟಕ ಎಂಬ ಕಾರ್ಯಕ್ರಮವನ್ನು 2024ರ ಏಪ್ರಿಲ್ 1 ರಿಂದ ಆರಂಭಿಸುತ್ತಿದ್ದು, ನವೆಂಬರ್ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳಿಗೆ ನಮ್ಮ 'ನಾಡು ನುಡಿ, ಇತಿಹಾಸ'ದ ಬಗ್ಗೆ ಅರಿವು ಮತ್ತು ಒಲವು ಮೂಡಿಸುವುದಾಗಿದೆ. ಅದಕ್ಕಾಗಿ 'ಪರಿಕರ, ಪರಿಸರ ಮತ್ತು ಪ್ರೋತ್ಸಾಹ' ನೀಡಲಾಗುತ್ತದೆ ಎಂದು ಹೇಳಿದೆ.

ಫೈನಲ್ ಗೆಲ್ಲುವ ವಿದ್ಯಾರ್ಥಿಗೆ 51 ಸಾವಿರ, ಶಾಲೆಗೆ 3 ಲಕ್ಷ ರೂಪಾಯಿ ಬಹುಮಾನ

2024ರ ಏಪ್ರಿಲ್‌ನಿಂದ ನವೆಂಬರ್‌ ವರೆಗೆ ನಡೆಯುವ ಈ ಕಾರ್ಯಕ್ರಮ ಉಚಿತವಾಗಿದ್ದು, ಕರ್ನಾಟಕದ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರತಿ ತಿಂಗಳು ಗೆಲ್ಲುವ ಮೊದಲ ಮೂರು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ನವೆಂಬರ್‌ನಲ್ಲಿ ರಾಜ್ಯ ಮಟ್ಟದ ಪ್ರಿ-ಫೈನಲ್‌ಗೆ ಅರ್ಹತೆಯನ್ನ ಪಡೆಯುತ್ತಾರೆ. ಕನೆಕ್ಟ್ ಕನ್ನಡ-ಅನ್ಲಾಕ್ ಕರ್ನಾಟಕ ಫೈನಲ್ ನವೆಂಬರ್‌ನಲ್ಲಿ ನಡೆಯಲಿದ್ದು, ಅದರಲ್ಲಿ ಗೆಲ್ಲುವ ವಿದ್ಯಾರ್ಥಿಗೆ 51 ಸಾವಿರ ನಗದು ಬಹುಮಾನ ಹಾಗೂ ವಿದ್ಯಾ ಶ್ರೇಷ್ಠ ಪ್ರಶಸ್ತಿ ಹಾಗೂ ವಿದ್ಯಾರ್ಥಿ ಓದುತ್ತಿರುವ ಶಾಲೆಗೆ 3,10,000 ರೂಪಾಯಿ ನಗದು ಬಹುಮಾನ ಮತ್ತು ವಿದ್ಯಾ ವಿಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಇಚ್ಚಿಸುವ ಶಾಲೆಗಳು ಸಂಸ್ಥೆಯ ವಾಟ್ಸಪ್ ನಂಬರ್ +91 63669 75151 ಗೆ ಸಂದೇಶ ಕಳುಹಿಸಿ ಅರ್ಜಿ ಪಡೆಯಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ನಮ್ಮ ಮಾತೃಭಾಷಾ (Matrubhasha) ಆಪ್ ಡೌನ್‌ಲೋಡ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


logoblog

Thanks for reading Native Dream Technologies Quiz Competition

Previous
« Prev Post

No comments:

Post a Comment

If You Have any Doubts, let me Comment Here