JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 17, 2024

State Govt Primary, High School Assistant Teachers Equivalent Group Posts Examination

  Jnyanabhandar       Sunday, March 17, 2024

State Govt Primary, High School Assistant Teacher's 'Equivalent Group' Posts Examination

ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು, ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ʻತತ್ಸಮಾನ ವೃಂದದʼ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಲಿದ್ದು, ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು.

ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಉಲ್ಲೇಖ-1ರ ಪತ್ರದನ್ವಯ ಅಧಿಸೂಚನೆ ಮತ್ತು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಂತೆ ಶಿಕ್ಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಸಲ್ಲಿಸಿರುವ ಅರ್ಜಿಯಲ್ಲಿ ನ್ಯೂನತೆಗಳಿದ್ದು ಅಂತಹವರು ಅರ್ಜಿಯನ್ನು ತಿದ್ದುಪಡಿ ಮಾಡಲು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕೆಲವು ಶಿಕ್ಷಕರು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ಶಿಕ್ಷಕರ ಮನವಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಾವಕಾಶವನ್ನು ವಿಸ್ತರಿಸಿ ನಿರ್ಧಿಷ್ಟಪಡಿಸಿದ ಹುದ್ದೆಗಳಿಗೆ ದಿನಾಂಕ: 23/02/2024ರವರೆಗೆ ಆನ್‌ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಲು ಉಲ್ಲೇಖ-2ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ನಿಗಧಿಪಡಿಸಿದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತಿದ್ದು ನಂತರದಲ್ಲಿ ವಿಸ್ತ್ರತವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು ಆದರಂತೆ ಪರಿಷ್ಕೃತ ವೇಳಾಪಟ್ಟಿ ಕೆಳಕಂಡಂತೆ ನಿಗದಿಪಡಿಸಿದೆ. ಮುಂದುವರೆದು ಉಲ್ಲೇಖಿತ-1 ಅಧಿಸೂಚನೆಯಲ್ಲಿನ ಅಂಶಗಳಲ್ಲಿನ ಕೆಲವು ಅಂಶಗಳಿಗೆ ಕೆಳಗಿನಂತೆ ಮಾರ್ಗದರ್ಶನವನ್ನು ನೀಡಲಾಗಿದೆ.

> ದಿನಾಂಕ: 16/012/2023 ರಂದು ಹೊರಡಿಸಿರುವ ಅಧಿಸೂಚನೆಯ ಪುಟ ಸಂಖ್ಯೆ-3ರ ಕ್ರ.ಸಂ- 12ರಲ್ಲಿ 'ಅಂಗವಿಕಲ ಶಿಕ್ಷಕರು ಅರ್ಜಿ ಸಲ್ಲಿಸಲು ಅವಶಾಶವಿಲ್ಲ' ಎಂಬುದನ್ನು ಕೈಬಿಡಲಾಗಿದೆ.

> ಪುಟ ಸಂಖ್ಯೆ-04ರಲ್ಲಿ ಕ್ರ.ಸಂ-12ರ 2ನೇ ಸಾಲಿನಲ್ಲಿ ಕನಿಷ್ಟ 5 ವರ್ಷ ಸೇವಾನುಭವ ಇರಬೇಕು ಎಂಬುದನ್ನು 'ಕನಿಷ್ಠ 10 ವರ್ಷ ಸೇವಾನುಭವ' ಎಂದು ಓದಿಕೊಳ್ಳತಕ್ಕದ್ದು

> ಪುಟ ಸಂಖ್ಯೆ-05ರಲ್ಲಿ ಗ್ರೂಪ್-ಬಿ ವೃಂದದ ಅರ್ಹತೆಗಳಲ್ಲಿ ಕ್ರ.ಸಂ-04ರಲ್ಲಿ ವಿಷಯ ಪರಿವೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು "ಆಯಾ ವಿಷಯದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ/ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ/ಡಯಟ್‌ಗಳಲ್ಲಿ ಕನಿಷ್ಟ 10 ವರ್ಷಗಳಿಗೆ ಕಡಿಮೆ ಇಲ್ಲದಂತೆ' ಎಂದು ಓದಿಕೊಳ್ಳತಕ್ಕದ್ದು.
ಅಧಿಸೂಚನೆ ಪುಟ ಸಂಖ್ಯೆ-03ರ ಕ್ರ.ಸಂ-14, ಪುಟ ಸ-04ರ ಕ್ರ.ಸಂ-15, ಪುಟ ಸಂಖ್ಯೆ- 06ರ ಕ್ರ.ಸಂ-16ರಲ್ಲಿರುವ ಅಭ್ಯರ್ಥಿಗಳು ಹಾಗೂ ಕೌನ್ಸಿಲಿಂಗ್‌ಗೆ ಹಾಜರಾದ, ಖಾಲಿ ಇಲ್ಲದ ಕಾರಣ ಶಾಲೆಯಲ್ಲಿಯೇ ಮುಂದುವರೆದಿರುವವರು ಪ್ರಸ್ತುತ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಅರ್ಹರಿರುತ್ತಾರೆ" ಎಂದು ಓದಿಕೊಳ್ಳತಕ್ಕದ್ದು.


Click Here To Download File
logoblog

Thanks for reading State Govt Primary, High School Assistant Teachers Equivalent Group Posts Examination

Previous
« Prev Post

No comments:

Post a Comment

If You Have any Doubts, let me Comment Here