Loksabha Election 2024
ಭಾರೀ ಕುತೂಹಲ ಕೆರಳಿಸಿರುವ 2024ರ ಭಾರತದ ಮಹಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗವು ಇಂದು (16 ಮಾರ್ಚ್ 2024) ಘೋಷಣೆ ಮಾಡಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತಿದೆ. 2024 ಚುನಾವಣೆ ಯಾವಾಗ, ಎಷ್ಟು ಹಂತಗಳಲ್ಲಿ ಮತದಾನ ಆಗಲಿದೆ, 2024 ಲೋಕಸಭಾ ಚುನಾವಣೆಯ ಮತಎಣಿಕೆ/ಫಲಿತಾಂಶ ಯಾವಾಗ, ಲೋಕಸಭೆ ಚುನಾವಣೆ 2024ರಲ್ಲಿ ಎಷ್ಟು ಮತದಾರರ ಸಂಖ್ಯೆ ಎಷ್ಟು ಮುಂತಾಗಿ ಸಂಖ್ಯಾ ಆಧಾರಿತ ಸಮಗ್ರ ಮಾಹಿತಿ ಇಲ್ಲಿದೆ.
ಲೋಕಸಭೆ ಚುನಾವಣೆ 2024 ದಿನಾಂಕ: ದೇಶಾದ್ಯಂತ 2024 ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ದಿನಾಂಕ: ಏಪ್ರಿಲ್ 26 ಶುಕ್ರವಾರ ಹಾಗೂ ಮೇ 7 ಮಂಗಳವಾರ, 2 ಹಂತಗಳಲ್ಲಿ - ತಲಾ 14 ಕ್ಷೇತ್ರಗಳಿಗೆ. ಮೇ 7ರಂದು ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ
ಲೋಕಸಭೆ ಚುನಾವಣೆ 2024ರ ಮತ ಎಣಿಕೆ / ಫಲಿತಾಂಶದ ದಿನಾಂಕ: ಮಂಗಳವಾರ 04 ಜೂನ್ 2024
2024 ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25, ಜೂನ್ 1ದೇಶದ 543 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ
ಯಾವೆಲ್ಲ ರಾಜ್ಯಗಳಲ್ಲಿ ಯಾವ ಹಂತದಲ್ಲಿ?
ಲೋಕಸಭೆ ಚುನಾವಣೆ 2024 - 1ನೇ ಹಂತ ಏಪ್ರಿಲ್ 19: ಅರುಚಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ (ಒಟ್ಟು ಕ್ಷೇತ್ರಗಳು 102)
ಲೋಕಸಭೆ ಚುನಾವಣೆ 2024 - 2ನೇ ಹಂತ ಏಪ್ರಿಲ್ 26: ಅಸ್ಸಾಂ, ಬಿಹಾರ, ಛತ್ತೀಸಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 89)
ಲೋಕಸಭೆ ಚುನಾವಣೆ 2024 - 3ನೇ ಹಂತ ಮೇ 07: ಅಸ್ಸಾಂ, ಬಿಹಾರ, ಛತ್ತೀಸಗಢ, ಗೋವಾ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ-ನಗರ ಹವೇಲಿ ಮತ್ತು ದಾಮನ್-ದಿಯು, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 94)
ಲೋಕಸಭೆ ಚುನಾವಣೆ 2024 - 4ನೇ ಹಂತ ಮೇ 13: ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 96)
ಲೋಕಸಭೆ ಚುನಾವಣೆ 2024 - 5ನೇ ಹಂತ ಮೇ 20: ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ (ಒಟ್ಟು ಕ್ಷೇತ್ರಗಳು 49)
ಲೋಕಸಭೆ ಚುನಾವಣೆ 2024 - 6ನೇ ಹಂತ ಮೇ 25: ಬಿಹಾರ, ಹರಿಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ (ಒಟ್ಟು ಕ್ಷೇತ್ರಗಳು 57)
ಲೋಕಸಭೆ ಚುನಾವಣೆ 2024 - 7ನೇ ಹಂತ ಜೂನ್ 1: ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ (ಒಟ್ಟು ಕ್ಷೇತ್ರಗಳು 57)
ಮತದಾರರು
96.88 ಕೋಟಿ ಭಾರತೀಯ ಮತದಾರರು
49.72 ಕೋಟಿ ಪುರುಷರು, 47.15 ಕೋಟಿ ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು
1.84 ಕೋಟಿ ಮೊದಲ ಮತದಾರರು
49.72 ಕೋಟಿ ಪುರುಷರು, 47.15 ಕೋಟಿ ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು
1.84 ಕೋಟಿ ಮೊದಲ ಮತದಾರರು
19.74 ಕೋಟಿ ಯುವ ಮತದಾರರು (ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಸಹಿತ)
19.1 ಲಕ್ಷ ಸೇವಾ ವಲಯದ ಮತದಾರರು (ಸೇನಾ ಪಡೆಗಳು ಇತ್ಯಾದಿ)
85 ವರ್ಷ ದಾಟಿದ ಮತದಾರರ ಸಂಖ್ಯೆ 82 ಲಕ್ಷ
100 ವರ್ಷ ದಾಟಿದ (ಶತಾಯುಷಿ) ಮತದಾರರ ಸಂಖ್ಯೆ 2.18 ಲಕ್ಷ
85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ
12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು
ಚುನಾವಣಾ ಆಯೋಗದ ವ್ಯವಸ್ಥೆ
1.5 ಚುನಾವಣಾ ಕೋಟಿ ಸಿಬ್ಬಂದಿ ನಿಯೋಜನೆ
10.5 ಲಕ್ಷ ಮತಗಟ್ಟೆಗಳು
55 ಲಕ್ಷ ಮತಯಂತ್ರಗಳು
4 ಲಕ್ಷ ಚುನಾವಣಾ ವಾಹನಗಳ ಬಳಕೆ
ಗಮನಿಸಬೇಕಾದ ಅಂಶಗಳು
ಸೂರ್ಯಾಸ್ತದ ಬಳಿಕ ಬ್ಯಾಂಕ್ ಹಣದ (ಎಟಿಎಂ ಇತ್ಯಾದಿ) ವಾಹನ ಸಂಚಾರಕ್ಕೆ ನಿಷೇಧ
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ಚುನಾವಣಾ ಆಯೋಗ ಕಣ್ಣು
ದ್ವೇಷ ಭಾಷಣ, ವೈಯಕ್ತಿಕ ಟೀಕೆ ಮಾಡುವಂತಿಲ್ಲ
ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ
ಮತದಾರರನ್ನು ಪ್ರಚೋದಿಸುವಂತಿಲ್ಲ
ಆಯಪ್‌ಗಳ ಮೂಲಕ ಮತದಾನ ಕೇಂದ್ರಗಳ ಮಾಹಿತಿ
ಗಡಿ ಪ್ರದೇಶಗಳಲ್ಲಿ ನಿಗಾ ವಹಿಸಲು ಡ್ರೋಣ್
No comments:
Post a Comment
If You Have any Doubts, let me Comment Here