JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 10, 2024

History Of Gangas Dynasty

  Jnyanabhandar       Sunday, March 10, 2024
📚 ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ
〰️〰️〰️〰️〰️〰️〰️〰️〰️〰️〰️〰️〰️〰️〰️〰️〰️
🔸ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಮನೆತನ= *ಗಂಗರು*( ಕದಂಬರ ಸಮಕಾಲೀನವರು)

🔸ಗಂಗರ ರಾಜ ಲಾಂಛನ= *ಮದಗಜ*

🔸ಗಂಗ ರಾಜ್ಯದ ಸ್ಥಾಪಕ= *ದಡಿಗ* ಇವನಿಗೆ "ಕೊಂಗುಣಿವರ್ಮ" ಎಂದು ಸಹ ಕರೆಯುತ್ತಾರೆ,

🔸 ಗಂಗಾರಾಜ ಸ್ಥಾಪನೆಗೆ ನೆರವಾದ ಜೈನಮುನಿ= *ಸಿಂಹ ನಂದಿ*

🔸ದಡಿಗನಿಗೆ ಇದ್ದ ಬಿರುದು= *ಬಾನವಂಶವನ ದಾವಾನಲ ಮತ್ತು ಧರ್ಮ ಮಹಾರಾಜ*

🔸 ರಾಜ್ಯ ಸ್ಥಾಪನೆಗೆ ದಡಿಗನಿ ಗೆ ನೆರವಾದ ಅವನ ಸಹೋದರ= *ಮಾಧವ*

🔸 ಗಂಗರ ಆರಂಭದ ರಾಜಧಾನಿ= *ಕೋಲಾರ*( ಕುವಳಾಲ)
(KAS-1999)

🔸ಗಂಗರ ದೀರ್ಘಕಾಲದ ರಾಜಧಾನಿ ಹಾಗೂ ಮುಖ್ಯ ಆಡಳಿತ ಕೇಂದ್ರವಾಗಿದ್ದು= *ತಲಕಾಡು*

🔸ತಲಕಾಡಿಗೆ ಇದ್ದ ಇನ್ನೊಂದು ಹೆಸರು= *ತಲವನ ಪೂರ*

🔸ಗಂಗರ ಕಾಲದ ಗಣ್ಯ ಕೇಂದ್ರವೆಂದು ಹೆಸರಾದ ಸ್ಥಳ= *ನಂದಿ ದುರ್ಗ*

🔸ಗಂಗರ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದವನು= *ದುರ್ವಿನೀತ*

🔸 ದುರ್ವಿನಿತನ ಗುರು= *ಪೂಜ್ಯಪಾದ*

🔸 ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ ಗಂಗರ ದೊರೆ= *ದುರ್ವಿನಿತ*

🔸ಕರಿಕಾಳ ಚೋಳನ ಮಗಳನ್ನು ವಿವಾಹಆದ ಗಂಗರ ದೊರೆ= *ಮುಷ್ಕರ*

🔸ತನ್ನ 63 ವರ್ಷಗಳ ಸುದೀರ್ಘ ಅಳ್ವಿಕೆಯಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಶ್ರೀ ರಾಜ್ಯ ಎಂಬ ಹೆಸರು ತಂದ ಗಂಗರ ದೊರೆ= *ಶ್ರೀಪುರುಷ*

🔸ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದುಡಿದ ಗಂಗರ ಮಂತ್ರಿ= *ಚಾವುಂಡರಾಯ*

🔸ಚಾವುಂಡರಾಯನ ಗುರುಗಳು= *ಅಜಿತಸೇನಾಚಾರ್ಯರ*

🔸ವಿಶ್ವಪ್ರಸಿದ್ಧ ಗೋಳ ಗುಮ್ಮಟೇಶ್ವರ ವಿಗ್ರಹ ಇರುವ ಸ್ಥಳ= *ಹಾಸನ ಜಿಲ್ಲೆಯ ಶ್ರವಣಬೆಳಗೊಳ*
(PC-2002)

🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಗಂಗರ ಮಂತ್ರಿ= *ಚಾವುಂಡರಾಯ*( ರಾಜ ನಾಲ್ಕನೇ ರಾಚಮಲ್ಲ)
(SDA-2008/PC-2004)

🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಶಿಲ್ಪಿ= *ಅರಿಷ್ಟನೇಮಿ* (PC-2008)

🔸 ಗೊಮ್ಮಟೇಶ್ವರ ವಿಗ್ರಹದ ಎತ್ತರ= *57.8ಅಡಿ*

🔸 ಕನ್ನಡದಲ್ಲಿ ಚಾವುಂಡರಾಯಪುರಾಣ ಕೃತಿಯನ್ನು ಬರೆದವರು= *ಚಾವುಂಡರಾಯ* (SDA-2009)

🔸ಚಾವುಂಡರಾಯನು ಸಂಸ್ಕೃತಭಾಷೆಯಲ್ಲಿ ರಚಿಸಿದ ಕೃತಿ= *ಚರಿತ್ರ ಸಾರ*

🔸ಗಂಗರ ಕಾಲದಲ್ಲಿ ಪ್ರತಿಗ್ರಾಮದಲ್ಲಿ ಇದ್ದ ಗ್ರಾಮದ ಆಡಳಿತಗಾರ= *ಪ್ರಭುಗಾವುಂಡ*

🔸ಗಂಗರ ಕಾಲದ ಪ್ರಜೆ ಗಾವುಂಡರು ಎಂದರೆ= *ಗ್ರಾಮದ ಹಿರಿಯ ರೈತರ ಸಮಿತಿ*

🔸 ಗಂಗರ ಕಾಲದ 25 ಪ್ರಜೆ ಗಾವುಂಡ ಗ್ರಾಮಸಭೆ ಇದ್ದದ್ದು= *ತಲಕಾಡಿನಲ್ಲಿ*


🔸ಗಂಗರ ರಾಜ್ಯದ ಪ್ರಮುಖ ಆದಾಯದ ಮೂಲ= *ಭೂಕಂದಾಯ*

🔸ಗಂಗರ ಕಾಲದ ದೊಡ್ಡ ನೇಯ್ಗೆ ಕೇಂದ್ರ ಇದ್ದ ಸ್ಥಳ= *ತಲಕಾಡು ಬಳಿಯ ವಿಜಯಪುರ*

🔸 ಗುಣಾಡ್ಯನ ಪ್ರಾಕೃತ ಬೃಹತ್ ಕಥಾ ವನ್ನು ಸಂಸ್ಕೃತಕ್ಕೆ ಅನುವಾದಿಸಿದ ಅರಸ= *ದುರ್ವಿನಿತ*

🔸ಗಜಶಾಸ್ತ್ರ ಕೃತಿಯನ್ನು ರಚಿಸಿದ ಗಂಗರ ದೊರೆ= *ಶ್ರೀಪುರುಷ*

🔸"ಶಬ್ದಾವತಾರ" ಎಂಬ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಬರೆದವರು= *ಪೂಜ್ಯಪಾದ*

🔸 ಬಾಣನ ಕಾದಂಬರಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು= *ನಾಗವರ್ಮ*

🔸 ಗಂಗರ ಕಾಲದ ಪಂಚಕೂಟ ಬಸದಿ ಕಂಡುಬಂದ ಸ್ಥಳ= *ಕಂಬದಹಳ್ಳಿ*

🔸 "ಸಮರ ಪರಶುರಾಮ" ಎಂಬ ಬಿರುದು ಹೊಂದಿದ್ದ ಗಂಗರ ಮಂತ್ರಿ= *ಚಾವುಂಡರಾಯ*

🔸 ದುರ್ವಿನಿತ ಪ್ರಾಕೃತ ಸಂಸ್ಕೃತ ಕನ್ನಡಗಳಲ್ಲಿ ದೊಡ್ಡ ಕವಿಯೆಂದು ಹೊಗಳಿದವರು= *ನೃಪತುಂಗ*

🔸 ಗಂಗರ ಕಾಲದಲ್ಲಿದ್ದ ಭೂಕಂದಾಯದ ಪ್ರಮಾಣ= *1/6*

🔸 ಗಂಗರ ಕಾಲದಲ್ಲಿದ್ದ ಚಿನ್ನದ ನಾಣ್ಯಗಳು= *ಪೊನ್, ಸುವರ್ಣ, ಗದ್ಯಾಣ, ನಿಷ್ಕ*

🔸 ಗಂಗರ ಕಾಲದಲ್ಲಿದ್ದ ಬೆಳ್ಳಿಯ ನಾಣ್ಯಗಳು= *ಪಣ, ಹಗ, ಕಾಸು, ದಮ್ಮ.*

🔸ಜೈನರ ಕಾಶಿ ಎಂದು ಪ್ರಸಿದ್ಧವಾದ ಸ್ಥಳ= *ಶ್ರವಣಬೆಳಗೊಳ* (pc-2012)

*ಗಂಗರ ಕಾಲದ ಸಾಹಿತ್ಯ*

1) ಒಂದನೇ ಮಾಧವ= *ದತ್ತಕ ಸೂತ್ರ ವೃತ್ತಿ,*

2) ಎರಡನೇ ಶಿವಮಾರ= *ಗಜಾಷ್ಟಕ, ಸೇತುಬಂಧ, ಶಿವಮಾರ ತರ್ಕ*

3) ಶ್ರೀಪುರುಷ= *ಗಜಶಾಸ್ತ್ರ*

4) ಗುಣವರ್ಮ= *ಶೂದ್ರಕ, ಹರಿವಂಶ*

5) ಒಂದನೇ ನಾಗವರ್ಮ= *ಛಂದೋಂಬುಧಿ*

6) ಪೂಜ್ಯಪಾದ= *ಸರ್ವಾರ್ಥಸಿದ್ಧಿ, ಶಬ್ದಾವತಾರ, ಸಮಾಧಿ ಶತಕ*

7) ಚಾವುಂಡರಾಯ= *ಚಾವುಂಡರಾಯ ಪುರಾಣ, ಚರಿತ್ರ ಸಾರಾ,*

8) ಆಸಗ= *ವರ್ಧಮಾನ ಪುರಾಣ*

ಗಂಗರ ಮನೆತನದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಗಂಗರ ಮೊದಲ ರಾಜಧಾನಿ?(KAS-1999)
🔸 *ಕೋಲಾರ*

2) ತಲಕಾಡು ದೇವಾಲಯಗಳನ್ನು ರಚಿಸಿದವರು?(PSI-2002)
🔹 *ಜಕಣಾಚಾರಿ*

3) ಶ್ರವಣಬೆಳಗೊಳದಲ್ಲಿ ಗುಮಟೇಶ್ವರ ಪ್ರತಿಮೆ ಸ್ಥಾಪಿಸಿದ ರಾಜರು?(SDA-2008)
🔸 *ಗಂಗರು*

4) ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳ?(PC-2002)
🔹 *ಶ್ರವಣಬೆಳಗೊಳ*

5) ಶ್ರವಣಬೆಳಗೊಳದ ವಿಗ್ರಹವನ್ನು ಕೆತ್ತಿಸಿದವರು?(PC-2004)
🔸 *ಚಾವುಂಡರಾಯ*

6) ದಕ್ಷಿಣ ಕರ್ನಾಟಕದಲ್ಲಿ ಅಳುತ್ತಿದ್ದ ಗಂಗರ ರಾಜಧಾನಿ?(PC-2008)
🔹 *ಕೋಲಾರ*

7) ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವು ----- ವರ್ಷಗಳಲ್ಲಿ ಒಂದು ಬಾರಿ ಜರುಗುತ್ತದೆ?(PC-2011)
🔸 *12 ವರ್ಷ ಕೊಮ್ಮೆ*

8) ಕರ್ನಾಟಕದ ಯಾವ ಸ್ಥಳವು ಜೈನರ ಯಾತ್ರಾಸ್ಥಳವಾಗಿದೆ?( ವಾರ್ಡರ್-2018)
🔹 *ಶ್ರವಣಬೆಳಗೊಳ*
logoblog

Thanks for reading History Of Gangas Dynasty

Previous
« Prev Post

No comments:

Post a Comment

If You Have any Doubts, let me Comment Here