Police Inspector Transfer Order Dated 31-01-2024
ರಾಜ್ಯ ಸರ್ಕಾರದಿಂದ ಮುಂಬರುವಂತ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಬರೋಬ್ಬರಿ 248 ಪೊಲೀಸ್ ಇನ್ಸ್ಪೆಕ್ಟರ್'ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿರುವಂತ ರಾಜ್ಯ ಸರ್ಕಾರವು ಈ ಕೆಳಕಂಡ 248 ಪೊಲೀಸ್ ಇನ್ಸ್ ಪೆಕ್ಟರ್ ಸಿವಿಲ್ ಅವರುಗಳನ್ನು ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಎಂದಿದೆ.
ಸುಭಾಷ್ ಚಂದ್ರ ಟಿ ಅವರನ್ನು ರಾಯಚೂರಿನ ದೇವದುರ್ಗ ಗ್ರಾಮಾಂತರ ವೃತ್ತಕ್ಕೆ, ರಮಾಕಾಂತ್ ವೈ ಹುಲ್ಲೂರು ಅವರನ್ನು ಡಿಸಿಆರ್ ಬಿ ವಿಜಯನಗರ ಜಿಲ್ಲೆಗೆ, ಗುಂಡುರಾವ್ ಎನ್ ವೈ ಅವರನ್ನು ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇನ್ನೂ ಹಸನ್ ಸಾಬ್ ಅವರನ್ನು ರಾಯಟೂರಿನ ಡಿಎಸ್ ಬಿ ಗೆ, ಪ್ರಕಾಶ್ ಎಲ್ ಮಾಳಿ ಅವರನ್ನು ಬಳ್ಳಾರಿಯ ಕಂಪ್ಲಿ ಪೊಲೀಸ್ ಠಾಣೆಗೆ, ವಸುಕುಮಾರ್ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 248 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಪಟ್ಟಿ
No comments:
Post a Comment
If You Have any Doubts, let me Comment Here