KKRTC Driver Provisional Selection List 2020
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿನ 925 ಚಾಲಕ ಹಾಗೂ 694 ಚಾಲಕ-ಕಂ-ನಿರ್ವಾಹಕ ಒಟ್ಟು 1,619 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಶನಿವಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆ ಆಹ್ವಾನಿಸಿದೆ.
2020ರಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ 1,619 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು.
ಇದರಲ್ಲಿ 1,295 ಸ್ಥಳೀಯ ವೃಂದದ ಹುದ್ದೆಗಳು ಹಾಗೂ 141 ಪರಿಶಿಷ್ಟ ಜಾತಿ ಮತ್ತು ವರಿಶಿಷ್ಟ ಪಂಗಡಕ್ಕೆ ಸೇರಿದ ಹಿಂಬಾಕಿ (ಬ್ಯಾಕ್ ಲಾಗ್) ಹುದ್ದೆಗಳು ಸೇರಿವೆ.
ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗಮದ ವೆಬ್ ವಿಳಾಸ https://kkrtcjobs.karnataka.gov.in ರಲ್ಲಿ ಆಯ್ಕೆ ಪಟ್ಟಿ ವೀಕ್ಷಿಸಿ ಆಕ್ಷೇಪಣೆಗಳಿದಲ್ಲಿ ಅನ್ ಲೈನ್ ಮೂಲಕ ಮಾತ್ರ ಫೆ.12ರ ಸಂಜೆ 5 ಗಂಟೆ ಒಳಗಾಗಿ ಸಲ್ಲಿಸಬೇಕು. ಲಿಖಿತ ಅಕ್ಷೇಪಣೆ ಸಲ್ಲಿಕೆಗೆ ಇಲ್ಲಿ ಅವಕಾಶವಿಲ್ಲ. ಅವಧಿ ಮೀರಿ ಬಂದ ಆಕ್ಷೇಪಣೆ ಪರಿಗಣಿಸುವುದಿಲ್ಲ ಎಂದು ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ ಸಂಖ್ಯೆ 6366374977 ಮತ್ತು 08472-227687 ಗಳಿಗೆ ಸಂಪರ್ಕಿಸಲು ಕೋರಿದೆ.
No comments:
Post a Comment
If You Have any Doubts, let me Comment Here