Karnataka Budget Highlights 2024
2024-25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಬಜೆಟ್ ಮಂಡಿಸಿ ರಾಜ್ಯ ಬಜೆಟ್‌ರುವ ಸಿದ್ದರಾಮಯ್ಯ ಇಂದು ತಮ್ಮ 15ನೇ ಬಜೆಟ್ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
2024-25ನೇ ಸಾಲಿನ ಬಜೆಟ್ ಒಟ್ಟು ಗಾತ್ರ 3,71,383 ಕೋಟಿ ರೂಪಾಯಿ ಆಗಿದ್ದು, ಕಾಂಗ್ರೆಸ್ ಪಕ್ಷದ ಶಾಲು ಧರಿಸಿರುವ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ.
'ಆಗದು ಎಂದು ಕೈ ಕಟ್ಟಿ ಕುಳಿತರೆ' ಹಾಡನ್ನು ಪ್ರಸ್ತಾಪಿಸಿ ಬಜೆಟ್ ಮಂಡಿಸುತ್ತಿದ್ದಾರೆ. ಕಳೆದ ಬಾರಿ ಜುಲೈನಲ್ಲಿ 3.27 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದರು. ಆದರೆ ಈ ಬಾರಿ ಬಜೆಟ್ ಗಾತ್ರ 3, 71, 383 ಕೋಟಿಯದ್ದಾಗಿದೆ.
2024-25ರಲ್ಲಿ 57 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾಗ್ತಿದೆ. ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಾಸದ ಭದ್ರತೆ ಯೋಜನೆ ಬಗ್ಗೆ ಒತ್ತು ನೀಡಿದೆ.
ಬಜೆಟ್ ಮಂಡನೆ ವೇಳೆ ಸಿಎಂ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಸರ್ವತ್ರ ವ್ಯಾಪಿಸಬೇಕು. ಅತ್ಯಂತ ಕೀಳಾದವನೂ ಮೇಲಾಗುವಂತೆ ಆಗಬೇಕು. ಕೋಟ್ಯಂತರ ಜನರ ಕೈಗೆ ಗ್ಯಾರಂಟಿ ಯೋಜನೆಗಳ ಹಂಚಿಕೆಯಾಗಬೇಕು. ವಾರ್ಷಿಕ 50-55 ಸಾವಿರ ರೂ. ಪ್ರತಿ ಕುಟುಂಬಕ್ಕೆ ಒದಗಿಸಲಾಗುತ್ತೆ ಎಂದು. ಹೇಳಿದ್ದಾರೆ.
ಬಜೆಟ್ ಮುಖ್ಯ ಸುದ್ದಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here