HSRP Number Plate Date Extended
ಬೈಕ್, ಕಾರ್, ಟ್ರ್ಯಾಕ್ಟರ್ ಯಾವುದೇ ಆಗಿರಲಿ ಆ ನಂಬರ್ ಪ್ಲೇಟ್ ಇರ್ಲೇ ಬೇಕು. HSRP ನಂಬರ್ ಪ್ಲೇಟ್ ಇಲ್ಲವೆಂದರೆ ಫೆಬ್ರವರಿ 17 ರಿಂದಲೇ ವಾಹನಗಳಿಗೆ ದಂಡ ಹಾಕುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ ಇದೀಗ ನಾಳೆಯಿಂದ ಮೇ 31ರ ವರೆಗೆ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆ ಮೂಲಕ ನಂಬರ್ ಪ್ಲೇಟ್ ಅಳವಡಿಕೆಗೆ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ರಿಲೀಫ್ ಸಿಕ್ಕಿದೆ.
ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಅಧಿಕೃತ ಆದೇಶವನ್ನು ಶುಕ್ರವಾರ ಹೊರಡಿಸಿದ್ದಾರೆ. ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇಂದು ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ನೀಡಿದ್ದು, ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ ಮಾಡಿದ್ದರು.
ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. 2019ರ ಏಪ್ರಿಲ್ ಬಳಿಕ ಖರೀದಿ ಮಾಡಿರುವ ವಾಹನಗಳಿಗೆ ರಿಜಿಸ್ಟ್ರೇಷನ್ ವೇಳೆಯೇ HSRP ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್‌ಗೂ ಮುನ್ನ ಖರೀದಿಸಿರುವ ಎಲ್ಲಾ ವಾಹನಗಳಿಗೂ ಅತೀ ಸುರಕ್ಷತಾ ನೋಂದಣಿ ಫಲಕ ಅಳವಡಿಕೆ ಕಡ್ಡಾಯವಾಗಿದೆ.
No comments:
Post a Comment
If You Have any Doubts, let me Comment Here