06-02 GFGCP 2023 - DOCUMENT VERIFICATION FOR 25 CANDIDATES
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಾಂಶುಪಾಲರು (ಯುಜಿ) ಹುದ್ದೆಗಳ ನೇಮಕಾತಿ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಪ್ರಾಂಶುಪಾಲರು(ಯುಜಿ) ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ದಿನಾಂಕ 20.12.2023 ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿರುತ್ತದೆ.
ಮುಂದುವರೆದು, ದಿನಾಂಕ 20.12.2023 ರಂದು ಪ್ರಕಟಿಸಲಾದ ತಾತ್ಕಾಲಿಕ ಮೆರಿಟ್ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಪಡೆದು ಒಂದೇ ಜನ್ಮ ದಿನಾಂಕವನ್ನು ಹೊಂದಿರುತ್ತಾರೆ. ಆದ್ದರಿಂದ ಈ ಪ್ರಕಟಣೆಯಲ್ಲಿ ಲಗತ್ತಿಸಿದ ಅಭ್ಯರ್ಥಿಗಳು, ಅಧಿಸೂಚನೆಯಲ್ಲಿ ನಿಗದಿಗೊಳಿಸಿದ ವಿದ್ಯಾರ್ಹತೆಗಳ ಪ್ರಮಾಣ ಪತ್ರಗಳನ್ನು ಮತ್ತು ಇಲಾಖೆಯಲ್ಲಿ/ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಸೇವಾ ಅವಧಿಯ ಪ್ರಮಾಣ ಪತ್ರವನ್ನು, ಪ್ರಾಧಿಕಾರಕ್ಕೆ ದಿನಾಂಕ 14.02.2024 ಬೆಳಿಗ್ಗೆ 11.00 ಘಂಟೆಗೆ ತಪ್ಪದೆ ಹಾಜರುಪಡಿಸತಕ್ಕದ್ದು.
ಈ ದಾಖಲೆಗಳ ಪರಿಶೀಲನೆಯು ಜೇಷ್ಠತೆಯನ್ನು ನಿರ್ಧರಿಸಲು ಮಾತ್ರವೇ ಹೊರತು ನೇಮಕಾತಿಗೆ ಮೂಲ ದಾಖಲೆಗಳ ಪರಿಶೀಲನೆಯೆಂದು ಭಾವಿಸಬಾರದು. ಅಪೂರ್ಣ ಅಥವಾ ಜೆರಾಕ್ಸ್ ಪ್ರತಿಗಳು ಮೂಲ ದಾಖಲೆಗಳ ಪರಿಶೀಲನೆಯಲ್ಲಿ ಪುರಸ್ಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
No comments:
Post a Comment
If You Have any Doubts, let me Comment Here