JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, February 4, 2024

Frequently asked question related to PUC Examination 2024

  Jnyanabhandar       Sunday, February 4, 2024
Subject: Frequently asked question(FAQs) related to PUC Examination - 2024

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಎಷ್ಟು ಪರೀಕ್ಷೆಗಳನ್ನು ನಡೆಸುತ್ತಿದೆ? ಪಿಯುಸಿ'ಗೂ 3 ಪರೀಕ್ಷೆ ನಡೆಸುವುದರ ಉದ್ದೇಶವೇನು? ಪಿಯುಸಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವೇ? 3 ಪರೀಕ್ಷೆ ಬರೆದರೆ ಯಾವ ಪರೀಕ್ಷೆ ಅಂಕ ಪರಿಗಣಿಸಲಾಗುತ್ತದೆ? ಇಂತಹ 20ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಶಿಕ್ಷಣ ಇಲಾಖೆಯ ನಿರ್ಧಾರದಂತೆ ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಎಸ್‌ಎಸ್‌ಎಲ್‌ಸಿ ಮಾತ್ರವಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ 3 ವಾರ್ಷಿಕ ಪರೀಕ್ಷೆ ನಡೆಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಹಲವು ಸಂಶಯಗಳು, ಪ್ರಶ್ನೆಗಳು ಕಾಡಲಾರಂಭಿಸಿವೆ. ಅಂತಹ 20 ಕ್ಕೂ ಹೆಚ್ಚು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ.

1. 2023-24ನೇ ಸಾಲಿನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಗಳು ಎಷ್ಟಿವೆ?
ಉತ್ತರ: ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ 3 ಪರೀಕ್ಷೆಗಳನ್ನು ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಎಂದು ನಡೆಸುತ್ತಿದೆ.

2. ದ್ವಿತೀಯ ಪಿಯುಸಿಗೆ ಈ ಹಿಂದಿನಂತೆ ಪೂರಕ ಪರೀಕ್ಷೆ ಇರುತ್ತದೆಯೇ?
ಉತ್ತರ: ಇಲ್ಲ. ಬದಲಾಗಿ ಮೂರು ಪರೀಕ್ಷೆಗಳು ಇರುತ್ತವೆ. ಒಂದೊಂದಾಗಿ ನಡೆಸಲಾಗುತ್ತದೆ.

3.ದ್ವಿತೀಯ ಪಿಯುಸಿ'ಗೂ 3 ಪರೀಕ್ಷೆ ನಡೆಸುವುದರ ಉದ್ದೇಶವೇನು?
ಉತ್ತರ: ವಿದ್ಯಾರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುವುದು, ಈ 3 ಪರೀಕ್ಷೆಗಳ ನಡೆಸುವುದರ ಉದ್ದೇಶವಾಗಿದೆ.

4.. ಈ 3 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಏಕರೂಪತೆ ಇದೆಯೇ?
ಉತ್ತರ: ಹೌದು. ಪತ್ರಿಕೆಗಳ ವಿಷಯ ಮತ್ತು ಕಠಿಣತೆ ಹಂತ ಏಕರೂಪತೆ ಇಂದಿದೆ.

5.ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವೇ?
ಉತ್ತರ: ವಿದ್ಯಾರ್ಥಿಗಳು ಕಡ್ಡಾಯವಾಗಿ ವಿಷಯವಾರು ಶೇಕಡ.75 ರಷ್ಟು ಹಾಜರಾತಿ ಪಡೆದಿರುವುದು ಪರೀಕ್ಷೆ ಬರೆಯಲು ಅಗತ್ಯವಾಗಿದೆ.

6.ವಿದ್ಯಾರ್ಥಿ ಎಲ್ಲ 3 ಪರೀಕ್ಷೆ ಬರೆದರೆ ಯಾವ ಪರೀಕ್ಷೆ ಅಂಕಗಳನ್ನು ಪರಿಗಣಿಸಲಾಗುತ್ತದೆ?
ಉತ್ತರ: ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪರೀಕ್ಷೆ ಅಂಕಗಳನ್ನು ಅಂಕಪಟ್ಟಿಗೆ, ಉತ್ತೀರ್ಣತೆಗೆ ಪರಿಗಣಿಸಲಾಗುತ್ತದೆ.

7.ಪುನರಾವರ್ತಿತ ವಿದ್ಯಾರ್ಥಿಗಳು ತಾವು ಇಚ್ಛಿಸಿದ ಯಾವುದಾದರೊಂದು ಪರೀಕ್ಷೆ ತೆಗೆದುಕೊಳ್ಳಬಹುದೇ?
ಉತ್ತರ: ಹೌದು, 3 ಪರೀಕ್ಷೆಯಲ್ಲಿ ಯಾವುದಾದರೊಂದನ್ನು ಬರೆಯಬಹುದು.

8. 3 ಪರೀಕ್ಷೆ ಬರೆಯುವ ವಿದ್ಯಾರ್ಥಿ ಎಷ್ಟು ಬಾರಿ ಅಂಕಪಟ್ಟಿ ಶುಲ್ಕ ಪಾವತಿಸಬೇಕು?
ಉತ್ತರ: ಒಂದು ಬಾರಿ ಮಾತ್ರ.

9.ಪರೀಕ್ಷೆ-1 ಬರೆದು ಪಾಸಾಗುವ ವಿದ್ಯಾರ್ಥಿ, ಇನ್ನೆರಡು ಪರೀಕ್ಷೆ ಬರೆಯದಿದ್ದಲ್ಲಿ, ಇಂತಹ ವಿದ್ಯಾರ್ಥಿ ಅಂಕಪಟ್ಟಿ ಯಾವಾಗ ಪಡೆಯಬಹುದು?
ಉತ್ತರ: ಸದರಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ, ಮರುಮೌಲ್ಯಮಾಪನ / ಮರು ಏಣಿಕೆ ಫಲಿತಾಂಶ ಪ್ರಕಟಿಸಿದ 30 ದಿನಗಳ ನಂತರ ಅಂಕಪಟ್ಟಿಗಳನ್ನು ತಮ್ಮ ಕಾಲೇಜುಗಳ ಪ್ರಾಂಶುಪಾಲರುಗಳ ಮುಖಾಂತರ ವಿತರಿಸಲಾಗುವುದು.

10.ಮುಂದಿನ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ತುರ್ತಾಗಿ ಯಾವ ರೀತಿಯಲ್ಲಿ ಅಂಕಪಟ್ಟಿಯನ್ನು ಪಡೆಯಬಹುದು?
ಉತ್ತರ: ಪ್ರತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ನಂತರ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಡಿಜಿಲಾಕರ್ ನಲ್ಲಿ ಪಡೆಯಬಹುದಾಗಿದೆ.

11.ಫಲಿತಾಂಶ ತಿರಸ್ಕರಣೆ ಈ ಹಿಂದಿನ ವರ್ಷಗಳಂತೆಯೇ ಮಾಡಬಹುದೇ?
ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ಫಲಿತಾಂಶ ತಿರಸ್ಕರಣೆ ಪ್ರಶ್ನೆ ಉದ್ಭವಿಸುವುದಿಲ್ಲ.

12.ಪಿಯು ವಾರ್ಷಿಕ ಪರೀಕ್ಷೆ-1 ರಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದಂತೆ, ಪರೀಕ್ಷೆ 2, 3 ಗೂ ಸಹ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆಯೇ?
ಉತ್ತರ: ಇಲ್ಲ. ವಾರ್ಷಿಕ ಪರೀಕ್ಷೆ-1 ರ ಪ್ರಾಯೋಗಿಕ ಪರೀಕ್ಷೆ ಅಂಕಗಳನ್ನೇ ಪರಿಗಣಿಸಲಾಗುತ್ತದೆ. ಆದ್ದರಿಂದ ಪರೀಕ್ಷೆ 2, 3 ಕ್ಕೆ ಪ್ರಾಕ್ಟಿಕಲ್ ಎಕ್ಸಾಮ್ ಇರುವುದಿಲ್ಲ.

13.ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಅವಕಾಶ ಇದೆಯೇ?
ಉತ್ತರ: ಇಲ್ಲ. ಒಮ್ಮೆ ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುತ್ತದೆ.

14.ಪರೀಕ್ಷೆ -1 ರಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿ, ಪರೀಕ್ಷೆ-2 ಹಾಗೂ ಪರೀಕ್ಷೆ-3 ರಲ್ಲಿ ಉಳಿದ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಏನೆಂದು ನಮೂದಾಗುವುದು?
ಉತ್ತರ: ಅಂತಿಮವಾಗಿ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣಗೊಂಡ ಪರೀಕ್ಷೆಯ ಮಾಹೆ ಮತ್ತು ಪರೀಕ್ಷೆಯ ಸಂಖ್ಯೆಯನ್ನೂ ನಮೂದಿಸಲಾಗುವುದು.

15.ಕಲಿಕಾ ನ್ಯೂನತೆಯಿರುವ ಮಕ್ಕಳಿಗೆ / ವಿಕಲಚೇತನ ಮಕ್ಕಳಿಗೆ ಯಾವ ಸೌಲಭ್ಯವನ್ನು ನೀಡಲಾಗುತ್ತಿದೆ?
ಉತ್ತರ: ಸರ್ಕಾರಿ ಆದೇಶಗಳನ್ವಯ ಕಳೆದ ವರ್ಷಗಳಲ್ಲಿ ನೀಡುತ್ತಿದ್ದ ಭಾಷಾ ವಿಷಯಗಳಲ್ಲಿ ವಿನಾಯಿತಿ, ಬರಹಗಾರರ / ಓದುಗಾರರ ಸೌಲಭ್ಯ ಹಾಗೂ ಪರೀಕ್ಷೆ ಬರೆಯಲು ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತಿದೆ.

16.2023-24ನೇ ಸಾಲಿನಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ವಿನ್ಯಾಸ ಬದಲಾಗಿದೆಯೇ?
ಉತ್ತರ: ಹೌದು. ಪ್ರಯೋಗ ತರಗತಿಗಳನ್ನೊಳಗೊಂಡ ವಿಷಯಗಳಲ್ಲಿ ಈ ಹಿಂದಿನಂತೆ 70 ಅಂಕಗಳಿಗೆ ತಾತ್ವಿಕ ಪರೀಕ್ಷೆ ಹಾಗೂ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತದೆ. ಆದರೆ ಪ್ರಯೋಗೇತರ ವಿಷಯಗಳಲ್ಲಿ 80 ಅಂಕಗಳಿಗೆ ತಾತ್ವಿಕ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಯುತ್ತದೆ.

17.ಫ್ರೆಂಚ್ ಭಾಷಾ ವಿಷಯದಲ್ಲಿ ಮೌಖಿಕ ಪರೀಕ್ಷೆ ನಡೆಯುತ್ತದೆಯೇ?
ಉತ್ತರ: ಇಲ್ಲ. ಮೌಖಿಕ ಪರೀಕ್ಷೆಗೆ ನಿಗದಿಯಾಗಿದ್ದ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನೀಡಲಾಗಿದೆ.

18.ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆಗೆ ನೋಂದಾವಣೆ ಮಾಡಲು ಎಷ್ಟು ಅವಕಾಶ ಇರುತ್ತದೆ?
ಉತ್ತರ: ಅನಿಯಮಿತ ಅವಕಾಶಗಳಿವೆ.

19.ಖಾಸಗಿ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಎಷ್ಟು ಅಂಕಗಳಿಗೆ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುವುದು?
ಉತ್ತರ: ಹೊಸ / ರೆಗ್ಯುಲರ್ ವಿದ್ಯಾರ್ಥಿಗಳಿಗೆ ನೀಡಿದ 80 ಅಂಕಗಳ ಪ್ರಶ್ನೆ ಪತ್ರಿಕೆಯನ್ನೇ ಖಾಸಗಿ ಹೊಸಬರು ಹಾಗೂ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಿಗೆ ನೀಡಲಾಗುವುದು.

20.ಹಾಗಾದರೆ ಖಾಸಗಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಎಷ್ಟು ಅಂಕಗಳಿಗೆ ಪರೀಕ್ಷೆ ಬರೆಯಬೇಕು?
ಉತ್ತರ: ಪ್ರಾಯೋಗಿಕವಲ್ಲದ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವ ಖಾಸಗಿ ವಿದ್ಯಾರ್ಥಿಗಳು 80 ಅಂಕಗಳಿಗೆ ಪರೀಕ್ಷೆ ಬರೆಯಬೇಕಿದೆ. ಈ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು 100 ಅಂಕಗಳಿಗೆ ಸ್ಕೇಲ್‌ಅಪ್‌ ಮಾಡಲಾಗುವುದು.

21.ಖಾಸಗಿ ಅಭ್ಯರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳು ಇರುತ್ತವೆಯೇ?
ಉತ್ತರ: ಇಲ್ಲ.

ವಾರ್ಷಿಕ ಪರೀಕ್ಷೆ-1, 2, 3 ರ ಸಂಬಂಧ ವಿದ್ಯಾರ್ಥಿಗಳು ಎಷ್ಟು ಬಾರಿ ಶುಲ್ಕ ಪಾವತಿಸಬೇಕು?
ವಾರ್ಷಿಕ ಪರೀಕ್ಷೆ-1 ಕ್ಕೆ ಎಲ್ಲ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು. ಆದರೆ ಪರೀಕ್ಷೆ 2, 3 ಗೆ ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ವಿಷಯವಾರು ನಿಗದಿತ ಪರೀಕ್ಷಾ ಶುಲ್ಕವನ್ನು, ಫಲಿತಾಂಶ ಸುಧಾರಣೆ ಬಯಸುವವರು ಸಾಮಾನ್ಯ ಪರೀಕ್ಷೆ ಶುಲ್ಕ ಪಾವತಿಸಬೇಕು.




https://kseab.karnataka.gov.in/storage/pdf-files/PUC_FAQ_2024.pdf

logoblog

Thanks for reading Frequently asked question related to PUC Examination 2024

Previous
« Prev Post

No comments:

Post a Comment

If You Have any Doubts, let me Comment Here