Additional Select List for the post of Social Science teacher in the Directorate of Minorities (MDRS) is published
ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಶಿಕ್ಷಕರು 42 (33+09 ಹೈ.ಕ.) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.
ಆಯೋಗದ ಅಧಿಸೂಚನೆ ಸಂಖ್ಯೆ PS C 1 R T(4) B-2/2017, ದಿನಾಂಕ 25-11-2 017ರಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರ ನಿರ್ದೇಶನಲಯದಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಶಿಕ್ಷಕರು 42(33+9) ಹುದ್ದೆಗಳಿಗೆ ದಿನಾಂಕ 25-11-2021 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ದಿನಾಂಕ 9.11.2023 ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಕಾಲಕಾಲಕ್ಕೆ ತಿದ್ದುಪಡಿ ಆದ ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ)(ಸಾಮಾನ್ಯ) ನಿಯಮಗಳು 2006 ಹಾಗೂ 2015ರ ತಿದ್ದುಪಡಿ ನಿಯಮಗಳ ನಿಯಮ 8ರ ಅನ್ವಯ ಇಲಾಖೆಯ ವರದಿಯಂತೆ ವರದಿ ಮಾಡಿಕೊಳ್ಳದ ಹುದ್ದೆಗಳಿಗೆ ಸೀಮಿತಗೊಳಿಸಿ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಪಿಎಸ್‌ಸಿಯು ಇದೀಗ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here