JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, January 22, 2024

Karnataka Voters Final List 2024

  Jnyanabhandar       Monday, January 22, 2024
Karnataka Voters Final List 2024

ಕರ್ನಾಟಕ ಚುನಾವಣಾ ಆಯೋಗವು (Karnataka Election Commission) ರಾಜ್ಯದ 224 ಕ್ಷೇತ್ರಗಳ ಮತದಾರರ (Voters) ಪಟ್ಟಿ ಪ್ರಕಟಿಸಿದೆ. ಬದಲಾವಣೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮುಂಚಿತ 10 ದಿನದ ಒಳಗಾಗಿ ಅರ್ಜಿ ಸಲ್ಲಿಸಬಹುದು. ಅಂತಿಮ‌ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದಾರೆ. ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಇದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.

ಕರಡು ಪಟ್ಟಿಗೆ ಹೋಲಿಸಿದರೆ ಮಹಿಳಾ ಮತದರಾರು ಸಂಖ್ಯೆ 2,77,717 ರಷ್ಟು ಗಮನಾರ್ಹ ಹೆಚ್ಚಾಗಿದೆ. 17,47,518 ಮತದಾರರ ಗುರುತಿನ ಚೀಟಿಗಳನ್ನು ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಈಗ 10,76,506 ಮತದಾರರ ಗುರುತಿನ ಚೀಟಿ ಮುದ್ರಣ ವಾಗಿದ್ದು, ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಟ್ಟಿಯಲ್ಲಿ 10,34,018 ಯುವ ಮತದಾರರಿದ್ದಾರೆ. ಇದರಲ್ಲಿ 3,88,527 ರಷ್ಟು ಯುವಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಸಾಗರೋತ್ತರ (ಅನಿವಾಸಿ ಭಾರತೀಯರು) ಮತದಾರರ ಸಂಖ್ಯೆ 3,165 ಇದೆ. 80 ವರ್ಷ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 12,71,862 ಇದೆ. 100 ವರ್ಷ ಮೇಲ್ಪಷ್ಟ ಮತದಾರರ ಸಂಖ್ಯೆ 17,937 ಇದೆ ಎಂದು ಮಾಹಿತಿ ನೀಡಿದರು.
ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಇದೆ. ಕರಡು ಹಾಗೂ ಅಂತಿಮ ಪಟ್ಟಿಯಲ್ಲಿ ಒಟ್ಟು 35,02,328 ಸೇರ್ಪಡೆಗೊಳಿಸಲಾಗಿದೆ. 11,14,257 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. 13,43,123 ಜನರ ಹೆಸರುಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 69.74 ರಷ್ಟು ಮತದಾರರಾಗಿದ್ದಾರೆ. ಪ್ರತಿ 1000 ವೋಟರ್ ಅನುಪಾತದಲ್ಲಿ 997 ಮಹಿಳಾ ಮತದಾರರು ಇದ್ದಾರೆ.
Aaaaa
ಆನ್​ಲೈನ್‌ ಮೂಲಕ ಹೆಸರು ಸರಿಯಾಗಿದೆಯಾ ಎಂದು ಪರಿಶೀಲಿಸಬಹುದು. ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಮತರದಾರರ ಸಂಖ್ಯೆ ನಿರಂತರವಾಗಿ ಅಪ್​ಡೇಟ್ ಆಗಲಿದೆ. ಪಾರ್ಮ್ 8 ಮೂಲಕ ಹೆಸರನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯನ್ನು ಚೆಕ್ ಮಾಡುವ ವಿಧಾನ.
ಹಂತ-1 ಮೊದಲಿಗೆ https://ceo.karnataka.gov.in ವೆಬ್ಸೈಟ್'ಗೆ ಬೇಟಿ ನೀಡಿ.
Aaaaaaa
ಹಂತ-2 ಅಲ್ಲಿ ವಿಂಡೋಸ್ ಮೇಲೆ ಕಾಣುವ Final Electoral Roll-2024 ಮೇಲೆ ಕ್ಲಿಕ್ ಮಾಡಿ.
ಹಂತ-3 ನಿಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ಭಾಷೆ ಆಯ್ಕೆ ಮಾಡಿಕೊಳ್ಳಿ.

ಹಂತ-4 ನಂತರ ಅಲ್ಲಿ ಕಾಣುವ ನಿಮ್ಮ ಮತಗಟ್ಟೆ ಹೆಸರಿನ ಪಕ್ಕ ಇರುವ ಅಂತಿಮ ಮತದಾರರ ಪಟ್ಟಿಯ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

 
Click Here To Download FINAL Voters List 
logoblog

Thanks for reading Karnataka Voters Final List 2024

Previous
« Prev Post

No comments:

Post a Comment

If You Have any Doubts, let me Comment Here