JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, December 15, 2023

Regarding the extension of the period of educational tour of children for the year 2023-24

  Jnyanabhandar       Friday, December 15, 2023
Regarding the extension of the period of educational tour of children for the year 2023-24 in Belgaum division

ಬೆಳಗಾವಿ ವಿಭಾಗದಲ್ಲಿ 2023-24ನೇ ಸಾಲಿನ ಮಕ್ಕಳ ಶೈಕ್ಷಣಿಕ ಪ್ರವಾಸದ ಅವಧಿಯನ್ನು ವಿಸ್ತರಿಸುವ ಕುರಿತು.

ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿರುವದರಿಂದ KSRTC ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕರು ಬಸ್'ಗಳನ್ನು ಒದಗಿಸಲು ತೊಂದರೆಯಾಗುತ್ತದೆ ಎಂದು ತಿಳಿಸಿರುವದರಿಂದ  ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಶೈಕ್ಷಣಿಕ ಪ್ರವಾಸದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಬಹುತೇಕ ಶಾಲೆಗಳ ಮಕ್ಕಳು ತಮ್ಮ ಕನಸಿಗೆ ಬಣ್ಣಬಣ್ಣದ ರೆಕ್ಕೆ ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ತೇಲುತ್ತಾರೆ. ಕಲಿಕಾರ್ಥಿಗಳಲ್ಲಿ ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ತುಂಬುವ ಮಹತ್ತರ ಕಾರ್ಯಕ್ರಮವೇ ಶೈಕ್ಷಣಿಕ ಪ್ರವಾಸ.

ಕಲಿಕೆಯ ಒಂದು ಭಾಗವಾದ ಶೈಕ್ಷಣಿಕ ಪ್ರವಾಸವು ವೀಕ್ಷಣೆಯ ಮೂಲಕ ಅನುಭವ ಜನ್ಯ ಕಲಿಕೆಯಾಗಿದೆ. ತಾತ್ವಿಕ ಜ್ಞಾನವನ್ನು ಒರೆಗೆ ಹಚ್ಚಿ ವೀಕ್ಷಿಸುವ ಮತ್ತು ಸಾದೃಶ್ಯಗಳೊಂದಿಗೆ ಹೋಲಿಕೆ ಮಾಡಿ ಕಲಿಯುವ ಚಟುವಟಿಕೆಯಾಗಿದೆ. ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ, ಅಭಿವೃದ್ಧಿಗೆ ಪೂರಕವಾದ ಉದ್ಯಮಗಳ ವೀಕ್ಷಣೆ, ವೈವಿಧ್ಯಮಯ ಜನಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ವೃತ್ತಿಗಳ ಪರಿಚಯ, ವಿವಿಧ ಪ್ರಾಣಿ ಪಕ್ಷಿ ಖಗಮೃಗಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗಿದೆ.

ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಶೈಕ್ಷಣಿಕ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶೈಕ್ಷಣಿಕ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಹಂಚಿ ತಿನ್ನುವ ಮನೋಭಾವ, ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರರಿಗೆ  ಗೌರವ ನೀಡುವುದು, ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶೈಕ್ಷಣೀಕ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ.

ಪ್ರವಾಸ ಪ್ರಯಾಸವಾಗದಿರಲಿ: ಸ್ಥಳ ಆಯ್ಕೆ : ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟಕ್ಕೆ ಹೊಂದುವಂತಿರಲಿ. ಕೇವಲ ಪ್ರೇಕ್ಷಣೀಯ ಅಥವಾ ತೀರ್ಥಯಾತ್ರಾ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳದೇ, ನಿಸರ್ಗ ರಮಣೀಯ ಸ್ಥಳಗಳು, ಕಿರು ಕೈಗಾರಿಕಾ ಪ್ರದೇಶಗಳು, ಸ್ಥಳೀಯ ಐ.ಟಿ.ಐ ಅಥವಾ ಜಿ.ಟಿ.ಟಿ.ಸಿ ಕಾಲೇಜುಗಳು, ಐತಿಹಾಸಿಕ ಸ್ಥಳಗಳು, ಸ್ಥಳೀಯ ಪಕ್ಷಿ ಸಂರಕ್ಷಿತ ತಾಣಗಳು, ಅರಣ್ಯ ಇಲಾಖೆಯ ಸಂರಕ್ಷಿತ ಕಿರು ಅರಣ್ಯಗಳು, ನಿಸರ್ಗಧಾಮಗಳು, ಅಂಚೆ ಕಛೇರಿ, ಬ್ಯಾಂಕ್, ವಿಶೇಷ ವೃತ್ತಿಗಾರರ ಕಾರ್ಯಕ್ಷೇತ್ರಗಳು ಇರಲಿ.

ಸ್ಪಷ್ಟ ಮಾಹಿತಿ: ಪ್ರವಾಸದ ಸ್ಥಳಗಳ ಕುರಿತು ಮಕ್ಕಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದನ್ನು ಶಾಲಾ ಶಿಕ್ಷಕರೇ ನೀಡದರೆ ಉತ್ತಮ. ಇಲ್ಲದಿದ್ದರೆ ಸ್ಥಳೀಯ ಗೈಡ್‌ಗಳನ್ನು ಬಳಸಿಕೊಂಡು ಸ್ಥಳಗಳ ಐತಿಹಾಸಿಕ, ಸಾಂಸ್ಕೃತಿಕ, ಪರಿಸರ ಮತ್ತು ರಕ್ಷಣೆಯ ಮಹತ್ವ ತಿಳಿಸುವಂತಹ ಮಾಹಿತಿ ಸ್ಪಷ್ಟವಾಗಿದ್ದರೆ ಪ್ರವಾಸದ ಉದ್ದೇಶ ಸಾರ್ಥಕಗೊಳ್ಳುತ್ತದೆ.
ವಸತಿ ಮತ್ತು ಊಟ : ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ತಿಳಿದುಕೊಂಡು ಬುಕ್ಕಿಂಗ್ ಮಾಡಿಕೊಳ್ಳುವುದು ಉಚಿತ. ಇಲ್ಲಿದ್ದರೆ ವಸತಿಗಾಗಿ ಪರದಾಡಬೇಕಾಗುತ್ತದೆ. ಜೊತೆಗೆ ಪ್ರವಾಸದ ಸ್ಥಳಗಳಲ್ಲಿ ಊಟದ ವ್ಯವಸ್ಥೆಯ ಬಗ್ಗೆಯೂ ಪೂರ್ವಯೋಜನೆ ಅಗತ್ಯ. ಕೆಲವು ಪ್ರದೇಶದ ಸ್ಥಳೀಯ ಊಟ ಕೆಲವು ಭಾಗದ ಮಕ್ಕಳಿಗೆ ರುಚಿಸುವುದಿಲ್ಲ. ಅದಕ್ಕಾಗಿ ಸೂಕ್ತ ಸಿದ್ದತೆ ಮಾಡಿಕೊಳ್ಳುವುದು ಅಗತ್ಯ ಎನಿಸುತ್ತದೆ.

ಸುರಕ್ಷತೆ : ಪ್ರವಾಸದ ಸಮಯದಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಸಾಧ್ಯವಾದಷ್ಟೂ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಒಳಿತು. ಇಲಾಖೆಯು ನಿಗದಿಪಡಿಸಿದ ಸಾರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡು ಸುರಕ್ಷಿತ ಪ್ರವಾಸ ಕೈಗೊಳ್ಳಬೇಕು. ಅಲ್ಲದೇ ಪ್ರವಾಸದ ಸ್ಥಳಗಳಲ್ಲಿಯೂ ಮಕ್ಕಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಬೇಕು. ಆದಷ್ಟೂ ನೀರಿನ ಮೂಲಗಳು ಮತ್ತು ಚಾರಣ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲೇಬೇಕು. ಮಕ್ಕಳು ಒಂಟಿಯಾಗಿ ಸುತ್ತಾಡುವುದನ್ನು ತಪ್ಪಿಸಲು ಗುಂಪುಗಳ ರಚನೆ ಅಗತ್ಯ.

ಶೈಕ್ಷಣಿಕ ಪ್ರವಾಸದ ಪುರತ್ತುಗಳು
1. ಪ್ರತಿ ವರ್ಷ ಡಿಸೆಂಬರ್ ಮಾಹೆಯ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು.ಯಾವುದೇ ಕಾರಣಕ್ಕೂ, ಡಿಸೆಂಬರ್ ಮಾಹೆಯ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುವುದು.

2 . ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯುವುದು.

3. ಪ್ರವಾಸ ಶೈಕ್ಷಣಿಕ ಪ್ರವಾಸವಾಗಿರಲು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನುಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವುದು.

4. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಿರಬೇಕು

5. ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಂದು ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣದಿನ/ಭಾನುವಾರ ಶಾಲೆ ನಡೆಸಿ ಕೊರತೆ ಬೀಳುವ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸುವುದು.

6. ಇಲಾಖೆಯಿಂದ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ.

7. ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರು ನೇರ ಹೊಣೆಗಾರರಾಗಿರುತ್ತಾರೆ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ.

8. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು

9. ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಖಾಸಗಿ ಹಾಗೂ ಮಿನಿ ಬಸ್ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.

10. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವುದು ಹಾಗೂ ಕೋವಿಡ್: 19 ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

11. ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸಕ್ಕೆ ನಿಯೋಜಿತಮಹಿಳಾ ಶಿಕ್ಷಕರೇ ಕಡಾಯವಾಗಿ ನೋಡಿಕೊಳ್ಳತಕ್ಕದು.

ಈ ಮೇಲ್ಕಂಡ ಎಲ್ಲಾ ಪರತ್ತುಗಳನ್ನು ಪಾಲಿಸಿ, ಇಲಾಖಾ ಅನುಮತಿಯನ್ನು ತಪ್ಪದೇ ಪಡೆದಿರಬೇಕು ಹಾಗೂ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು.
logoblog

Thanks for reading Regarding the extension of the period of educational tour of children for the year 2023-24

Previous
« Prev Post

No comments:

Post a Comment

If You Have any Doubts, let me Comment Here