Registration for the Karnataka government’s 'Yuva Nidhi' scheme, one of the five poll guarantees of the Congress party offering unemployment allowance to the graduates and diploma holders, will start from December 26.
According to Chief Minister Siddaramaiah, the scheme will be implemented from January 1, 2024 and applicants can enroll themselves on the 'Seva Sindhu' portal. "Those who have completed six months of graduation in the academic year 2022-23 and are not in higher education or any employment are eligible to apply," the CM said on social media site 'X'. The scheme will be applicable to degree holders and diploma pass holders. He added that under the scheme, monthly financial assistance of Rs 3,000 will be provided to unemployed graduates and Rs 1,500 to diploma holders.
This money will be directly transferred to the beneficiary’s account till they are employed for a maximum period of two years. Congress had announced five guarantees during the assembly election this year and 'Yuva Nidhi' was one of them.
ಡಿ.16ರಿಂದ ಆರಂಭಗೊಳ್ಳಬೇಕಿದ್ದಂತ ಯುವನಿಧಿ ಯೋಜನೆಯ ( Yuvanidhi Scheme ) ನೋಂದಣಿ ಪ್ರಕ್ರಿಯೆ, ಈಗ ಡಿ.26ಕ್ಕೆ ಮುಂದೂಡಿಕೆಯಾಗಿದೆ. ಡಿ.26ರಿಂದ ಯುವನಿಧಿ ಯೋಜನೆಗೆ ನೋಂದಣಿ ಆರಂಭಗೊಳ್ಳಲಿದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವಂತ ಅವರು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ಆರು ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಲು ಅರ್ಹರು ಎಂದಿದ್ದಾರೆ.
ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೊಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ. ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಹೊಂದಿರುವವರಿಗೆ 1,500 ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷ ಅವಧಿಯಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದಾರೆ.
No comments:
Post a Comment
If You Have any Doubts, let me Comment Here